ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಸರಿಯಾಗಿ ದಾಸ್ತಾನುಗಳು ವಿತರಣೆ ಆಗುತ್ತಿಲ್ಲ- ರಾಷ್ಟ್ರೀಯ ಮಾದಿಗ ಜಾಗೃತಿ ಸೇನೆ ಮನವಿ

0
234

ಮಾನ್ವಿ: ಜ.22  ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಸಿಗುವ ಅಕ್ಕಿ ತೊಗರಿ ಬೇಳೆ ಒಳ್ಳೆಣ್ಣೆ ಗೋಧಿ ಇನ್ನಿತರ ದಾಸ್ತಾನುಗಳು ಸರಿಯಾಗಿ ವಿತರಣೆ ಆಗುತ್ತಿಲ್ಲವೆಂದು ರಾಷ್ಟ್ರೀಯ ಮಾದಿಗ ಜಾಗೃತಿ ಸೇನೆ ತಹಸೀಲ್ದಾರರಿಗೆ ಮನವಿ ಮಾಡಿತ್ತು.

ಪಟ್ಟಣದ ತಹಸೀಲ್ ಕಾರ್ಯಾಲಯದಲ್ಲಿ ಪಡಿತರ ಚೀಟಿದಾರರಿಗೆ ಸಂಪೂರ್ಣ ದಾಸ್ತಾನುಗಳು ವಿತರಣೆ ಆಗಬೇಕು ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಡಿ ಗ್ರೂಪ್ ಹುದ್ದೆಗಳು ಇದ್ದು ಇವುಗಳನ್ನು ದಿನಗೂಲಿಯಾಗಿ ಕಾಯಂಗೊಳಿಸಬೇಕು ಮಾನ್ವಿ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣ ಪ್ರದೇಶದ ಯೋಜನೆಗಳಾದ ಅಂಬೇಡ್ಕರ್ ವಸತಿ ಯೋಜನೆ ಬಸವ ವಸತಿ ಯೋಜನೆ ಆಶ್ರಯ ಯೋಜನೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆಗಳ ಕಟ್ಟಡ ಕಾಮಗಾರಿಗಳ ಫಲಾನುಭವಿಗಳಿಗೆ ಬಾಕಿ ಇರುವ ಹಣ ಹಾಕಬೇಕು.

ತಾಲ್ಲೂಕಿನ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು.
ಈ ಎಲ್ಲ ಬೇಡಿಕೆಗಳು ಒಂದು ವಾರದೊಳಗೆ ಈಡೇರಿಸದಿದ್ದರೆ ಜಿಲ್ಲಾ ಸಮಿತಿಯ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ತಹಸೀಲ್ದಾರರಾದ ಅಮರೇಶ್ ಬಿರಾದಾರ್ ಅವರಿಗೆ ಮನವಿ ಮೂಲಕ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮರಿಸ್ವಾಮಿ ಅಮರಾವತಿ, ಹುಲಿಗೆಪ್ಪ ಕರೇಗುಡ್ಡ, ಬಸವರಾಜ ಗವಿಗಟ್, ಹನುಮಂತ್ರಾಯ ಕೆ.ಗುಡದಿನ್ನಿ, ಹುಲಿಗಪ್ಪ ಗವಿಗೆಟ್ಟ, ಸಾಬಣ್ಣ ಅಮರಾವತಿ, ನರಸಿಂಹಲು ಕೆ ಗುಡದಿನ್ನಿ, ಲಕ್ಷ್ಮಣ ಗವಿಗೆಟ್ಟ ಉಪಸ್ಥಿತ

LEAVE A REPLY

Please enter your comment!
Please enter your name here