ಮೂಲಭೂತ ಸೌಕರ್ಯಕ್ಕಾಗಿ ಸ್ಲಂ ಜನರ ಕ್ರಿಯಾ ವೇದಿಕೆ ಆಮೆ ನಡಿಗೆ ಪ್ರತಿಭಟನೆ

ಮಂಗಳ ಮುಖಿಯರನ್ನು ಮನುಷ್ಯರಂತೆ ಕಾಣಿ ಅವರಿಗೆ ಬದುಕಿನ ಹಕ್ಕಿದೆ ಅವರು ಕೂಡ ವಾಸ ಮಾಡುವುದುಕ್ಕೆ ಮೂಲಭೂತ ಸೌಕರ್ಯಗಳ ಇರುವ ನಿವಾಸಗಳು ನೀಡಬೇಕು ;ಅನಿಲ್ ನೀಲಕಂಠ

0
151

ಮೂಲಭೂತ ಸೌಕರ್ಯಕ್ಕಾಗಿ ಸ್ಲಂ ಜನರ ಕ್ರಿಯಾ ವೇದಿಕೆ ಆಮೆ ನಡಿಗೆ ಪ್ರತಿಭಟನೆ ಯಶಸ್ವಿ.. ಅನೀಲ ನೀಲಕಂಠ

ಮಾನವಿ :- ತಾಲೂಕಿನ ಅಂಬೇಡ್ಕರ್ ನಗರದ ಭಾಗದಲ್ಲಿರುವ ಸ್ಲಂ ಜನರು ಹಾಗೂ ಕಲ್ಲೂರು ಕವಿತಾಳ ಲಿಂಗಸ್ಗೂರು ಭಾಗದ ಸರಿ ಸುಮಾರು ಐದು ನೂರಕ್ಕೂ ಹೆಚ್ಚು ಸ್ಲಂ ಜನರು ಸೇರಿದಂತೆ ಇನ್ನೂರಕ್ಕೂ ಅಧಿಕ ಮಂಗಲ ಮುಖಿಯರು ದಲಿತ ಸಮರ ಸೇನಾ ಸ್ಲಂ ಜನರ ಕ್ರಿಯಾ ವೇದಿಕೆಯ ಆಮೆ ನಡುಗೆ ಹೋರಾಟದಲ್ಲಿ ಭಾಗವಹಿಸಿ ಬಡ ಜನರ ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ ಹೋರಾಟವನ್ನು ಆರಂಭಿಸಲಾಗಿದ್ದು ನಾಳೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಮ್ಮ ಹೋರಾಟವನ್ನು ಮಾಡಲಾಗುತ್ತದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಅನೀಲ ನೀಲಕಂಠ ಅವರು ತಿಳಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಆರಂಭವಾಗದ ಈ ಹೋರಾಟದಲ್ಲಿ ಪುರಸಭೆ ಮುಖ್ಯಧಿಕಾರಿ ಜಗದೀಶ್ ಅವರಿಗೆ ಅಭಿವೃದ್ಧಿ ಯಾವ ಮಟ್ಟದಲ್ಲಿ ಆಗಿದೆ ಎಂದು ಪ್ರಶ್ನೆ ಮಾಡಲಾಗಿ ಉತ್ತರ ನೀಡುವುದಕ್ಕೆ ಆಧಿಕಾರಿ ತಡಬಡಾಯಿಸಿದ ಘಟನೆ ನಡೆಯಿತು. ಅಧ್ಯಕ್ಷ ಅನೀಲ ನೀಲಕಂಠ ಮಾತಾನಾಡಿ ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದ ಅಂಬೇಡ್ಕರ್‌ ನಗರ. ಕಲ್ಲೂರು. ಕವಿತಾಳ. ಲಿಂಗಸ್ಗೂರು ಸೇರಿದಂತೆ ಮಂಗಳ ಮುಖಿಯರು (ಕರ್ನಾಟಕ ಸ್ಥಂ) ವಾಸಿಸುತ್ತಿರುವ ಕೊಳಚೆ ಪ್ರದೇಶ ಜನರಿಗೆ ಹೆಚ್ಚುವರಿ ಭೂಮಿ ಮಂಜೂರು ಮಾಡಿ ಹಕ್ಕುಪತ್ರಗಳು, ಮೂಲಭೂತ ಸೌಕರ್ಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಹೋರಾಟದಲ್ಲಿ ತಿಳಿಸಿದರು‌

ಪಟ್ಟಣದ ಅಂಬೇಡ್ಕರ್ ನಗರದ ವಾರ್ಡ್ ನಂ 9 ರಲ್ಲಿ ಸರಿಸುಮಾರು 300 ಕ್ಕೂ ಹೆಚ್ಚು ಕಡು-ಬಡ ದಲಿತ. ಹಿಂದುಳಿದ ಅಲ್ಪಸಂಖ್ಯಾತ ಕುಟುಂಬಗಳಿದ್ದು 1200 ಕ್ಕೂ ಅಧಿಕ ಹೆಚ್ಚು ಜನ ಸಂದಣಿಯಿಂದ ಕೂಡಿದ್ದು ಸುಮಾರು 25 ರಿಂದ 30 ವರ್ಷಗಳಿಂದ ಕನಿಷ್ಟ ಸೌಲಭ್ಯ ಕಾಣದೆ ಕುಡಿಯುವ ನೀರು, ಬೀದಿ ದೀಪ, ಶೌಚ್ಯಾಲಯವಿಲ್ಲದೆ ಕನಿಷ್ಟ ಬದುಕುವ ಹಕ್ಕುಗಳಿಂದ ವಂಚಿತರಾಗಿದ್ದು ಅನಾರೋಗ್ಯಕರ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದು ಇರುತ್ತದೆ. ಹಾಗೂ ಲಿಂಗಸ್ಗೂರು ಕವಿತಾಳ ಕಲ್ಲೂರು ಊರುಗಳಲ್ಲಿ ವಾಸವಾಗಿರುವ ನಾವು ಸುಮಾರು ವರ್ಷಗಳಿಂದಲೂ ನಮ್ಮ ಹಕ್ಕುಗಳಿಗಾಗಿ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಸರಕಾರಿ ಕಾರ್ಯಾಲಯಗಳಿಗೆ ಅಲೆದು ಅಲೆದು ಬೇಸತ್ತಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗೆ ತಮ್ಮ ಆಧೀನದ ಯಾವುದೇ ಕಾರ್ಯಾಲಯವು ಸ್ಪಂದಿಸದೇ ನಮ್ಮ ಬದುಕನ್ನು ಅತ್ಯಂತ ಶೋಚನೀಯ ಸ್ಥಿತಿಗೆ ತಳ್ಳಿದೆ ತಮ್ಮ ಕಾರ್ಯಾಲಯಕ್ಕೆ ನಾವು ಕರೋನಾ ಪರಿಸ್ಥಿತಿಯನ್ನೂ ಲೆಕ್ಕಿಸದೆ ಮಕ್ಕಳು ವೃದ್ಧರು ಕುಟುಂಬಸಹಿತವಾಗಿ ಬಂದು ಮನವಿ ಸಲ್ಲಿಸಿ ನಮ್ಮ ಕಷ್ಟಗಳಿಗೆ ಸ್ಪಂದಿಸುವಂತೆ ಅನೇಕ ಮನವಿಗಳು ಮಾಡಿಕೊಂಡಾಗ ತಮ್ಮ ಮೌಖೇನ ಆದೇಶದಿಂದ ನಮ್ಮ ಕಷ್ಟ ಮುಗಿಯಿತೆಂದು ತಿಳಿದಿದ್ದೆವು. ಆದರೆ ತಮ್ಮ ಆಧೀನ ಆಡಳಿತ ಕಾಯಾಲಯದ ಅಧಿಕಾರಿಗಳು ನಮ್ಮ ನ್ಯಾಯಯುತ ಬೇಡಿಕೆಗೆ ಮತ್ತು ತಮ್ಮ ಮೌಖಿಕ ಆದೇಶಕ್ಕೆ ಬಿಡಿಗಾಸಿನ ಬೆಲೆ ಕೊಡದೇ. ನಾವು ನಿಮ್ಮ ಆಧೀನ ಅಧಿಕಾರಿಗಳನ್ನು ಭೇಟಿಯಾದಾಗ ಮತ್ತು ನಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ತಾವು ನೀಡಿದ ಮೌಖಿಕ ಆದೇಶವನ್ನು ಪಾಲಿಸುವಂತೆ ಕೇಳಿಕೊಂಡಾಗ, “ಜಿಲ್ಲಾಧಿಕಾರಗಳಿಗೆ ಏನು ಗೊತ್ತಾಗುತ್ತದೆ ಸುಮ್ಮನೆ ಎ. ಸಿ. ರೂಮ್‌ನಲ್ಲಿ ಕುಳಿತು ಹೇಳಿದರೆ ಆಯಿತೇನು ಮಾಡುವವರು ನಾವು ನಮಗೆ ಗೊತ್ತು ನಿಮ್ಮ ಕೆಲಸ ಮಾಡಲಾಗುವದಿಲ್ಲ ಮತ್ತು ನಾವು ಮಾಡುವದಿಲ್ಲ” ಎಂದು ನಮಗೆ ಬೈದಾಡುತ್ತಾರೆ ಹಾಗಾದರೆ ನೀವು ಯಾಕೆ ಕೆಲಸ ಮಾಡುವದಾಗಿ ಜಿಲ್ಲಾಧಿಕಾರಿಗಳ ಮುಂದೆ ಒಪ್ಪಿಕೊಂಡಿರಿ ಎಂದು ಕೇಳಿದಾಗ ಅದನ್ನು ಕೇಳುವ ಹಕ್ಕು ನಿಮಗಿಲ್ಲ ನೀವು ಜಾಗ ಖಾಲಿ ಮಾಡಿ ಇಲ್ಲದಿದ್ದರೆ ಸರಕಾರಿ ಅಧಿಕಾರಿಗಳಿಗೆ ಕೆಲಸಕ್ಕೆ ಅಡ್ಡಿವುಂಟುಮಾಡಿದ್ದೀರೆಂದು ಸುಳ್ಳು ಕೇಸ್ ಹಾಕಿ ಮಹಿಳೆಯರು ಮಕ್ಕಳು ಮತ್ತು ಮುದುಕರು ಎನ್ನದೇ ನಿಮ್ಮನ್ನು ಜೈಲಿಗೆ ಹಾಕಿಸಿಬಿಡುತ್ತೇವೆ ಎಂದು ಹೇಳಿದ್ದಲ್ಲದೇ ನೀವು ದಲಿತರಲ್ಲ ಎಂದು ಅಮಾನವೀಯ ಮಾತುಗಳಿಂದ ಬೈದಾಡಿದ್ದಾರೆ ಎಂದು ಸ್ಲಂ ಜನರು ಹಾಗೂ ಮಂಗಳ ಮುಖಿಯರು ಜೈ ಕಾರ ಹಾಕಿದರು.

ಪಟ್ಟಣದ ಪುರಸಭೆ, ಬಸ್ಸ್ ನಿಲ್ದಾಣ ಮುಂಭಾಗದಲ್ಲಿ ಕೆಲ ಸಮಯ ಹೋರಾಟ ಮಾಡಿ ಬಸವ ವೃತ್ತದಲ್ಲಿ ಕನಿಷ್ಠ ಒಂದು ಗಂಟೆಯವರೆಗೆ ರಸ್ತೆ ತಡೆ ಮಾಡಿ ಜಿಲ್ಲಾಧಿಕಾರಿಗಳ ಆಗಮಿಸಬೇಕು ಎಂದು ಕೂಗಿದರು ಇದೇ ಸಮಯದಲ್ಲಿ ಕೆಲ ಮಹಿಳೆಯರು ಊಟವಿಲ್ಲದೆ ನಿಶಕ್ತಿಯಿಂದ ಮೂರ್ಛೆ ಹೋದ ಘಟನೆಯು ನಡೆಯಿತು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಪ್ರತಿಭಟನೆ ಮುನ್ನಡೆಯಿತು ಅಲ್ಲಿ ಸಂಘಟನೆಯ ಮುಖಂಡ ಹಾಗೂ ರಾಯಚೂರು ಸ್ಲಂ ಎರಡನೇ ದರ್ಜೆಯ ಅಧಿಕಾರ ಮೂಲಕ ಪೋಲಿಸ್ ಇಲಾಖೆಯ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ಮಾಡಿದರೂ ಕೂಡ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ರಾತ್ರಿಯು ಕೂಡ ನಮ್ಮ ಹೋರಾಟ ಮುಂದುವರೆಸಬೇಕಾಗುತ್ತದೆ ಎಂದ ಕೂಡಲೇ ಅವರಿಗೆ ಹತ್ತಿರದ ನೀರಾವರಿ ಇಲಾಖೆಯ ಮುಂಭಾಗದಲ್ಲಿ ಸ್ಥಳ ಅವಕಾಶ ಮಾಡಿಕೊಡಲಾಯಿತು ನಂತರ ನಾಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಮನವಿ ಪತ್ರ ಸ್ವೀಕರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು.

ನಂತರ ಸಂಘಟನೆಯ ಅಧ್ಯಕ್ಷ ಅನೀಲ ನೀಲಕಂಠ ಮಾತಾನಾಡಿ ಮಂಗಳ ಮುಖಿಯರನ್ನು ಮನುಷ್ಯರಂತೆ ಕಾಣಿ ಅವರಿಗೆ ಬದುಕಿನ ಹಕ್ಕಿದೆ ಅವರು ಕೂಡ ವಾಸ ಮಾಡುವುದುಕ್ಕೆ ಮೂಲಭೂತ ಸೌಕರ್ಯಗಳ ಇರುವ ನಿವಾಸಗಳು ನೀಡಬೇಕು ಹಾಗೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು 15 ದಿನಗಳ ಒಳಗೆ ಈಡೇರಿಸುವಂತೆ ನಿರ್ದೇಶನ ನೀಡಬೇಕು ಮತ್ತು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಹಾಕುವದಾಗಿ ಬೆದರಿಕೆ ಹಾಕಿದ ಅಧಿಕಾರಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ

ಅಷ್ಟೇ ಅಲ್ಲದೆ ಅಲ್ಲಿ ವಾಸಿಸುವ ಜನರಿಗೆ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ಅಧಿಕಾರಿಗಳಿಂದ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡುತ್ತೇವೆ. ತಾವೇನಾದರೂ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಜಿಲ್ಲೆಯಾದ್ಯಂತ ಹಾಗೂ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಈ ಹೋರಾಟದಲ್ಲಿ ಒಬ್ಬರು ಡಿ ವೈ ಎಸ್ ಪಿ, ಇಬ್ಬರು ಸಿ ಪಿ ಐ, ನಾಲ್ಕು ಜನ ಪಿ ಎಸ್ ಐ ಸೇರಿದಂತೆ ಐವತ್ತಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಗಳು ಸಂಚಾರ ನಿಯಂತ್ರಣ ಪೋಲಿಸರು ಭಾಗವಹಿಸಿ ಹೋರಾಟಕ್ಕೆ ಬಿಗಿ ಬಂದೋಬಸ್ತ್ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ತಿಪ್ಪಣ್ಣ ಎನ್ ಚಲುವಾದಿ ಬೆಂಗಳೂರು. ಜಾಮೀಲ್ ಸಾಬ್. ಅನೀಲಕುಮಾರ್. ನಿರಂಜನ ಆಚಾರಿ. ಲಕ್ಷ್ಮಣ್. ಮಧುಶ್ರೀ. ಕರಿಯಪ್ಪ. ಪ್ರಕಾಶ.ಕರಿಯಪ್ಪ ಕವಿತಾಳ.ಸೈಯಾದ್ ಅಶ್ಮತ್ ಲಿಂಗಸ್ಗೂರು. ಶಿವಬಸಮ್ಮ. ಹನುಮಂತಿ. ನಜೀರಾ ಬೇಗಂ.ಹುಸೇನ್ ಬೀ. ಪೂಜಾ. ಶ್ರೀನಿವಾಸ ಸೇರಿದಂತೆ ಸರಿ ಸುಮಾರು ಐದು ನೂರಕ್ಕೂ ಅಧಿಕ ಸ್ಲಂ ನಿವಾಸಿಗಳು ಎರಡು ನೂರಕ್ಕೂ ಹೆಚ್ಚು ಮಂಗಳ ಮುಖಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here