ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನ ಬೆಳಕು; ವರರುದ್ರಮುನಿ ಶಿವಾಚಾರ್ಯರು

0
186

ಮಸ್ಕಿ :  ಸಿದ್ದಗಂಗಾ ಮಠದ ಶ್ರೀಶಿವಕುಮಾರ ಮಹಾಸ್ವಾಮೀಜಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಬಂದ ಪುಣ್ಯಾತ್ಮರು ಎಂದು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಹೇಳಿದರು.

ಮಸ್ಕಿ ಪಟ್ಟಣದ ದೈವದಕಟ್ಟೆ ಹತ್ತಿರ ಸಿದ್ದಗಂಗಾ ಮಠದ ಶ್ರೀಶಿವಕುಮಾರ ಮಹಾಸ್ವಾಮೀಜಿಯ ಪ್ರಥಮ ವರ್ಷದ ಪುಣ್ಯಸ್ಮರಣೋತ್ಸವದ ಶ್ರೀಗಳ ಭಾವಚಿತ್ರವನ್ನು ಮಂಗಳವಾರ ಸಂಜೆ ಮೆರವಣಿಗೆ ಮಾಡಲಾಯಿತು. ಪಟ್ಟಣದ ದೈವದ ಕಟ್ಟಿ ಹತ್ತಿರ ಮಂಗಳವಾರ ಸಂಜೆ ದೈವದಕಟ್ಟೆ ಗೆಳೆಯರ ಬಳಗದವರು ಆಯೋಜಿಸಲಾಗಿದ್ದ ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಯ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಶತಾಯುಷಿ ಶ್ರೀಶಿವಕುಮಾರ ಸ್ವಾಮೀಜಿ ಬಡವ ಬಲ್ಲಿದ ಎಂಬ ಬೇಧ ಭಾವ ಮಾಡದೆ ಎಲ್ಲರನ್ನು ಸಮಾನವಾಗಿ ಕಂಡು ಸಮಾಜದ ಹಿತಕ್ಕಾಗಿ ಹಗಲಿರುಳು ಶ್ರಮಿಸಿದ ಆಧುನಿಕ ಸಂತ ಎಂದು ಬಣ್ಣಿಸಿದರು.

ಮೆರವಣಿಗೆಯು ದೈವದಕಟ್ಟೆಯಿಂದ ಪ್ರಾರಂಭವಾಗಿ, ಖಾಲಿಲ್ ವೃತ್ತ, ಸಂತೆ ಬಜಾರ, ಅಗಸಿ, ಅಶೋಖ ವೃತ್ತ, ಹಳೇ ಬಸ್‌ನಿಲ್ದಾಣ, ಕನಕವೃತ್ತದ ಮುಖಾಂತರ ಮರಳಿ ದೈವದಕಟ್ಟೆಗೆ ಆಗಮಿಸಿತು. ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಹಾದೇವಪ್ಪಗೌಡ ಪಾಟೀಲ, ಮಲ್ಲಪ್ಪ ಕುಡತಿನಿ, ಷಡಕ್ಷರಪ್ಪ ಬಾಳೆಕಾಯಿ, ವೀರಭಧ್ರಪ್ಪ ಬ್ಯಾಳಿ, ಪಂಪಣ್ಣ ಅಂತರಗAಗಿ, ಸಿದ್ದ್ಯಂಗಯ್ಯ ಗಚ್ಚಿನಮಠ, ವೀರೇಶಪ್ಪ ಯಂಬಲದ, ಅಪ್ಪಾಜಿಗೌಡ, ಪಂಪಣ್ಣ ಗುಂಡಳ್ಳಿ, ಚೇತನ ಪಾಟೀಲ, ಮಂಜುನಾಥ ಮಾಟೂರು, ಸುರೇಶ ಬ್ಯಾಳಿ, ಪಂಪಣ್ಣ ನಂದಾ, ಶರಣಪ್ಪ ಮಸ್ಕಿ, ಶರಣ ಬಸವರಾಜ ಹಿರೇಮಠ, ಕೃಷ್ಣ ಚಿಗರಿ, ಶರಣಯ್ಯ ಸೊಪ್ಪಿಮಠ ಸೇರಿದಂತೆ ಇನ್ನಿತರರಿದ್ದರು.

 

LEAVE A REPLY

Please enter your comment!
Please enter your name here