*ಶಾಸಕ ಸೋಮಶೇಖರ ರೆಡ್ಡಿ ಗಡಿಪಾರಿಗೆ ಆಗ್ರಹಿಸಿ ಲಿಂಗಸುಗೂರಿನಲ್ಲಿ ಪ್ರತಿಕೃತಿ ದಹನ*

0
81
ಲಿಂಗಸುಗೂರು : ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ, ತಂಜಿಮನ್ ಮುಸ್ಲಿಮಿನ್ ಕಮಿಟಿ ವತಿಯಿಂದ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಲಾಯಿತು.
ಜಾತ್ಯಾತೀತ ರಾಷ್ಟ್ರದಲ್ಲಿ ಮನುವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಶಾಂತಿಯುತ ಸಮಾಜದಲ್ಲಿ ಮತೀಯ ಕಲಹಗಳು ಬೆಂಕಿ ಹಚ್ಚುತ್ತಿರುವುದು ಖಂಡನೀಯ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಡುವವರು ಹಾಗೂ ಮುಸ್ಲಿಮರನ್ನು ಶೂಟ್ ಮಾಡಬೇಕು ಎನ್ನುವ ಮೂಲಕ ಕುಚೋದ್ಯ ಹೇಳಿಕೆಯನ್ನು ನೀಡಿದ ಶಾಸಕ ಸೋಮಶೇಖರ ರೆಡ್ಡಿ ಸಂವಿಧಾನ ವಿರೋಧಿಯಾಗಿದ್ದರೆ. ಈ ಕೂಡಲೇ ಅವರನ್ನು ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಮಿಟಿ ಅಧ್ಯಕ್ಷ ಲಾಲ್ಹಮದ್ ಸಾಬ್, ಮುಫ್ತಿ ಸೈಯದ್ ಯುನುಸ್ ಖಾಸ್ಮಿ, ಸಮಾಜದ ಮುಖಂಡರಾದ ಬಾಬಾ ಖಾಜಿ, ಜಿಲಾನಿಪಾಷಾ, ಅನಿಸ್ ಪಾಷಾ, ಅಬ್ದುಲ್ ರವೂಫ್ ಗ್ಯಾರಂಟಿ, ಮಹಮದ್ ಹಾಜಿ ಬಾಬಾ, ಎಕ್ಬಾಲ್ ಹವಾಲ್ದಾರ್, ಸಾಧಿಕ್ ಜಾಫರ್, ಇರ್ಫಾನ್, ಡಾಕ್ಟರ್ ಜಲಾಲುದ್ದಿನ್ ಅಕ್ಬರ್, ಇಸ್ಮಾಯಿಲ್, ಮಹಬೂಬ್, ಜಲಾಲುದ್ದೀನ್, ಇಬ್ರಾಹಿಂ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here