ಕಪಗಲ್ : ಗ್ರಾ.ಪಂ ಕಾಂಗ್ರೆಸ್ ತೆಕ್ಕೆಗೆ

ಅಧ್ಯಕ್ಷರಾಗಿ ನಾಗನಗೌಡ, ಉಪಾಧ್ಯಕ್ಷರಾಗಿ ಸಣ್ಣ ಮಹಾದೇವಿ ಬಸ್ಸಪ್ಪ ಆಯ್ಕೆಅಧ್ಯಕ್ಷರಾಗಿ ನಾಗನಗೌಡ, ಉಪಾಧ್ಯಕ್ಷರಾಗಿ ಸಣ್ಣ ಮಹಾದೇವಿ ಬಸ್ಸಪ್ಪ ಆಯ್ಕೆ

0
148

ಕಪಗಲ್ : ಗ್ರಾ.ಪಂ ಕಾಂಗ್ರೆಸ್ ತೆಕ್ಕೆಗೆ

ಅಧ್ಯಕ್ಷರಾಗಿ ನಾಗನಗೌಡ, ಉಪಾಧ್ಯಕ್ಷರಾಗಿ ಸಣ್ಣ ಮಹಾದೇವಿ ಬಸ್ಸಪ್ಪ ಆಯ್ಕೆ

ಮಾನ್ವಿ, 6- ತಾಲೂಕಿನ ಕಪಗಲ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ನಾಗನಗೌಡ ಬೊಮ್ಮನಾಳ್ ಉಪಾಧ್ಯಕ್ಷರಾಗಿ ಸಣ್ಣ ಮಹಾದೆವಿ ತಂ. ಬಸ್ಸಪ್ಪ ಛಲುವಾದಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪ್ರಭಕಾರ ಅವರು ತಿಳಿಸಿದರು.

ಕಪಗಲ್ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ನಾಗನಗೌಡ ಬೋಮ್ಮನಾಳ್ ಹಾಗೂ ಉಪಾಧ್ಯಕ್ಷ ಎಸ್ಸಿ ಮಹಿಳೆ ಸ್ಥಾನಕ್ಕೆ ಸಣ್ಣ ಮಹಾದೇವಿ ಬಸ್ಸಪ್ಪ ಛಲುವಾದಿ ಇವರು ನಾಮ ಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮತೊರ್ವ ಪಾರ್ವತಿ ಗಂಡ ಚಿದಾನಂದ ಅವರು ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ ಉಪಾಧ್ಯಕ್ಷ ಎಸ್ಸಿ ಮಹಿಳೆ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇರುವುದ್ದರಿಂದ ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಣ್ಣ ಮಹಾದೇವಿ ತಂ. ಬಸ್ಸಪ್ಪ ಛಲುವಾದಿ ಇವರು ಅವಿರೋಧವಾಗಿ ಆಯ್ಕೆಗೊಂಡರು.

ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ನಾಗನಗೌಡ ಅವರು 11 ಮತಗಳನ್ನು ಪಡೆದು ಗೆಲವುನ್ನು ಪಡೆದುಕೊಂಡರು. ಇವರ ಪ್ರತಿಸ್ಪರ್ಧಿ  ಪಾರ್ವತಿ ಗಂಡ ಚಿದನಂದ ಇವರು 07 ಮತಗಳ ಪಡೆದುಕೊಂಡು ಸೋಲು ಅನುಭವಿಸಿದರು ಎಂದು ಚುನಾವಣೆ ಅಧಿಕಾರಿ ಪ್ರಭಕಾರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಾ‌ಪಂ ಉಪಾಧ್ಯಕ್ಷ ಚೆನ್ನಬಸ್ಸಪ್ಪ ಬೆಟ್ಟದೂರು, ಹಿರಿಯ ಮುಖಂಡರಾದ ಡಾ. ಯಂಕನಗೌಡ ಪಾಟೀಲ್ ಬೋಮ್ಮನಾಳ್, ಕರಿಯಪ್ಪ ಮುರುಗಟ್ಟು, ಶಿವರಾಮ ರೆಡ್ಡಿ, ಮುಸ್ತಾಫ್ ಕಪಗಲ್, ಸುಂದರ್‌ ಕಪಗಲ್, ಹನುಮಂತರಾಯ ವಕೀಲರು ಕಪಗಲ್, ನಾಗೇಂದ್ರ ಗೌಡಯ್ಯ, ಯಲ್ಲಯ್ಯ ನಾಯಕ, ಗೋವಿಂದಪ್ಪ, ಅಮರೇಶ ತಳವಾರ, ಶಂಕ್ರಪ್ಪ ಕಬ್ಬೇರ್, ವಾಲ್ಮಿಕಿ ಅಧ್ಯಕ್ಷ ಶ್ರೀನಿವಾಸ ಕಪಗಲ್, ಮಹಿಬೂಬ್ ಕಪಗಲ್, ಲಕ್ಷ್ಮಣ ಸವಿತ ಸಮಾಜ, ರಮೇಶ ಗಾಣಿಗೇರ, ಗಂಗಪ್ಪ ಹುಣ್ಣೇರ್, ಭೀಮರಾಯ ಕಪಗಲ್ ಛಲುವಾದಿ, ಗೋಪಾಲ ಗುಂಜಳ್ಳಿ, ಉದಯ ಕುಮಾರ್, ಶಿವನಗೌಡ ಪೋಲಿಸ್ ಪಾಟೀಲ್, ವೆಂಕಟೇಶ ಗುಂಜಳ್ಳಿ, ಸಾಬಣ್ಣ ಕಪಗಲ್, ಬಸವಂತರಾಯ, ಮಲ್ಲಣ್ಣ, ಸಂತೋಷ ಗೌಡ, ಲಕ್ಷ್ಮೀಕಾಂತ್ ಪಾಟೀಲ್, ಥಾಮೋಸ್, ಪ್ರದೀಪ್ ಕಪಗಲ್, ಅಭಿವೃದ್ಧಿ ಅಧಿಕಾರಿ ಮೋನುದ್ದೀನ್, ಕಂಪ್ಯೂಟರ್ ಅಪರೇಟರ್ ರಮೇಶ ಎ.ಟಿ, ಕರವಸೂಲಿಗಾರ ಲಚುಮಯ್ಯ, ಪಂಪ್‌‌ ಅಪರೇಟರ್ ಜಾವೀದ್ ಪಾಷ ಸೇರಿದಂತೆ ಗ್ರಾ.ಪಂ ನೂತನ ಸದಸ್ಯರುಗಳು ಪಂಚಾಯತ್ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಗ್ರಾಮದ‌ ಮುಖಂಡರು ಇದ್ದರು.

LEAVE A REPLY

Please enter your comment!
Please enter your name here