ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ತಾಲೂಕ ಘಟಕದಿಂದ ಧರಣಿ

15ನೇ ಹಣಕಾಸನ್ನು ದುರುಪಯೋಗಪಡಿಸಿಕೊಂಡಿರುವ ಅಧ್ಯಕ್ಷರ ಸದಸ್ಯತ್ವವನ್ನು ರದ್ದುಪಡಿಸಬೇಕು ಇವರ ವಿರುದ್ಧ ಕ್ರಿಮಿನಲ್ ಮುಖದ್ದಮೆ ದಾಖಲಿಸಬೇಕು

0
62

ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ತಾಲೂಕ  ಘಟಕದಿಂದ ಧರಣಿ

ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಧರಣಿ

ಗ್ರಾಮ ಪಂಚಾಯಿತಿಗಳ ಹಳ್ಳಿಗಳ ವ್ಯಾಪ್ತಿಗೆ ಬರುವ 15 ಹಣಕಾಸಿನ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಹಾಗೂ ಏಜೆನ್ಸಿಗಳು ಸೇರಿ ಒಳ ಒಪ್ಪಂದದಿಂದ ಮಾಡಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಧರಣಿ ಪ್ರಾರಂಭ ಮಾಡಲಾಗಿದೆ ಸನ್ 2021 22 ನೇ ಸಾಲಿನಿಂದ 2022-2023ರವರೆಗೆ 15ನೇ ಹಣಕಾಸಿನ ಹರಾಜಿನಂತೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬ್ರಷ್ಟಾಚಾರವನ್ನು ಎಸಗಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಅಂದರೆ ಉಟಕನೂರು ದೂತರ ಬಂಡಿ ಉದ್ಬಾಳ ತಡಕಲ್ಲು ಬದ್ಲಾಪುರ್ ಗ್ರಾಮದ ಜನ ಕುಡಿಯುವ ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ ರಸ್ತೆ ಚರಂಡಿಗಳು ಗಬ್ಬುನರುತ್ತಿವೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಸಾರ್ವಜನಿಕರು ಹೈರಾಣ ಆಗಿದ್ದಾರೆ ಈ ಸಮಸ್ಯೆ ಗಳನ್ನ ದೂರ ಮಾಡುವ ಬಿಟ್ಟು ಅಧ್ಯಕ್ಷರು ಮತ್ತು ಅಧಿಕಾರಿಗಳು ಸೇರಿ ನಕಲಿಬಿಲ್ಲು ಎತ್ತುವ ಮೂಲಕ ಸಾರ್ವಜನಿಕರಿಗೆ ದ್ರೋಹ ಬಗೆದಿದ್ದಾರೆ 15ನೇ ಹಣಕಾಸನ್ನು ದುರುಪಯೋಗಪಡಿಸಿಕೊಂಡಿರುವ ಅಧ್ಯಕ್ಷರ ಸದಸ್ಯತ್ವವನ್ನು ರದ್ದುಪಡಿಸಬೇಕು ಇವರ ವಿರುದ್ಧ ಕ್ರಿಮಿನಲ್ ಮುಖದ್ದಮೆ ದಾಖಲಿಸಬೇಕು ಮತ್ತು ಪಂಚಾಯಿತಿಯ ಹಣವನ್ನು ಲೂಟಿ ಹೊಡೆದಿರುವಂತಹ ಬ್ರಷ್ಟಾಚಾರವನ್ನು ಮಾಡಿರುವಂತಹ ಮತ್ತು ಈ ಒಂದು ದಂಡಿಯಲ್ಲಿ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಂಗವು ವಿನಂತಿಸುತ್ತದೆ ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಬಡ್ಡಪ್ಪ ನಾಯಕ ಮಲ್ಲಿನ ಮಡಗು ಬಸವರಾಜ ಬಾಗಲವಾಡ ಎಂ ಬಿ ನಾಯಕ ಉದಬಾಳ ಮಹಾಂತೇಶ ನಾಯಕ ತಡಕಲ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here