ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮನವಿ

0
228

ಕಡುಬಡಕುಟುಂಬದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ 2018 ನೇ ಸಾಲಿನ ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾದ ಒಟ್ಟು 350 ಫಲಾನುಭವಿಗಳಿಗೆ ಇದು ವರೆಗೂ ಒಂದು ರೂಪಾಯಿ ಹಣ ಬಿಡುಗಡೆ ಆಗಿಲ್ಲ ಈ ಯೋಜನೆಯನ್ನು ನಂಬಿ ಅನೇಕರು ಹಳೆಯ ಮನೆಗಳನ್ನು ಕೆಡವಿ ಸಾಲಸೂಲ ಮಾಡಿಕೊಂಡು ಪ್ರಥಮ ಹಂತದ ಬೂನಾದಿ ಹಾಕಿಕೊಂಡು ಅನುದಾನಕ್ಕಾಗಿ ಪುರಸಭೆಗೆ ದಿನನಿತ್ಯ ಅಲೆದಾಡುತ್ತಿದ್ದಾರೆ. ಮತ್ತೊಂದು ಕಡೆ ಮತ್ತೆ 2019ನೇ ಸಾಲಿನ ಪ್ರಧಾನಮಂತ್ರಿ ವಸತಿ ಯೋಜನೆಗಾಗಿ ಮತ್ತೆ ಹೊಸ ಅರ್ಜಿಗಳು 300 ದಟ್ಟಿವೆ ಇದರಿಂದ ಹಾಲವಾರು ಕಡುಬಡಕುಟುಂಬಗಳು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಇದರಿಂದ ಸಮಸ್ಯೆಯನ್ನು ಪರಿಹರಿಸಲು ಪುರಸಭೆ ಮುಖ್ಯಾಧಿಕಾರಿಗಳ ಮುಖಾಂತರ ವ್ಯವಸ್ಥಾಪಕ ನಿರ್ದೇಶಕರು ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ಇವರಿಗೆ ತಕ್ಷಣ 2018ನೇ ಸಾಲಿನ ಮತ್ತು 2019ನೇ ಸಾಲಿನ ಬಾಕಿ ಉಳಿದಿರುವ ಒಟ್ಟು ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣ ಸಂಘಟನೆ ವತಿಯಿಂದ ಮನವಿಪತ್ರದ ಮೂಲಕ ಒತ್ತಾಯಿಸಲಾಯಿತು.
ರಾಜ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಗೂಳಿ ರಾಜ್ಯ ಉಪಾಧ್ಯಕ್ಷರಾದ ಇರ್ಫಾನ್ ಧಣಿ ತಾಲೂಕಾಧ್ಯಕ್ಷ ಸಿದ್ದಪ್ಪ ನಂದಿಹಾಳ ಗೌರವ ಸಲಹೆಗಾರರು ದೊಡ್ಡಣ್ಣ ಹೂಗಾರ ಗೌರವಾಧ್ಯಕ್ಷರಾದ ಕೃಷ್ಣ ದಾನಿ ದೀಪಕ್ ಪಟೇಲ್ ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಪಿ ಲೀಲಾವತಿ ಲಕ್ಷ್ಮಣ ಅಮೃತಾ ಜೇಗರಕಲ್ ವಿಶ್ವನಾಥ ಪವಾರ ಮಂಚಾಲಿ ಬೆನಕಯ್ಯ ಶೆಟ್ಟಿ ಗಂಗಾಧರ ಪಾವರ ಎಂ ಡಿ ಇಮಾಮ್ ಸಾಬ್ ಡಾ. ನೂರುಲ್ಲಾ ಖಾನ್ ಭಾಷ ಟೈಲ್ಸ್ ಸುರೇಶ ಭೋವಿ ಬಸವರಾಜ ಕುಂಬಾರ ಹನುಮಂತ ಜೆ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here