ಸಂಪನ್ಮೂಲಗಳ ಸಂಗ್ರಹಕ್ಕಾಗಿ ಶುಲ್ಕವನ್ನು ಪರಿಷ್ಕರಿಸಲಾಗುವುದು: ಶೇಖ ಫರೀಧ್ ಉಮ್ರಿ

ಸ್ಥಾಯಿ ಸಮಿತಿಯ ಮೊದಲ ಸಭೆ

0
95

ಸಂಪನ್ಮೂಲಗಳ ಸಂಗ್ರಹಕ್ಕಾಗಿ ಶುಲ್ಕವನ್ನು ಪರಿಷ್ಕರಿಸಲಾಗುವುದು: ಶೇಖ ಫರೀಧ್ ಉಮ್ರಿ

ಮಾನ್ವಿ: ಪಟ್ಟಣದ ವಿವಿಧ ವಾರ್ಡಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯವಿರುವ ಸಂಪನ್ಮೂಲಗಳ ಸಂಗ್ರಹಕ್ಕಾಗಿ ಅಗತ್ಯವಿರುವ ಅನುದಾನವನ್ನು ಪಡೆಯಲು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ವಿವಿಧ ಶುಲ್ಕಗಳನ್ನು ಹೆಚ್ಚಿಸಲು ನಿಯಮಗಳಿದು ಅದರಂತೆ ಶುಲ್ಕವನ್ನು ಪರಿಷ್ಕರಿಸಲಾಗುವುದು ಎಂದು ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಶೇಖ ಫರೀಧ್ ಉಮ್ರಿ ತಿಳಿಸಿದರು

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪ್ರಥಮ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಯ ಉದ್ದಿಮೆಗಳಿಗೆ ನೀಡುತ್ತಿರುವ ಪರವಾನಿಗೆಯ ಶುಲ್ಕವನ್ನು ಶೇ ೨೦ರಷ್ಟು ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಕಲಾಗುವ ಬ್ಯಾನರ್,ನಾಮಫಲಕ ಸೇರಿದಂತೆ ವಿವಿಧ ಜಾಹಿರಾತುಗಳಿಗೆ ದಿನ ಒಂದಕ್ಕೆ ಪ್ರತಿ ಚ.ಅಡಿಗೆ ೫೦ಪೈಸ್ ನಿಗದಿಪಡಿಸಲಾಗುವುದು ಹಾಗೂ ಪಟ್ಟಣದ ವಿವಿಧ ವಾರ್ಡಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು ಫಾಂಗೀಂಗ್,ಬ್ಲೀಚಿAಗ್,ಚರAಡಿಗಳನ್ನು ಸ್ವಚ್ಚಗೊಳ್ಳಿಸಿ ಕ್ರಿಮಿನಾಶಕ ಸಿಂಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು
ಪುರಸಭೆ ಮುಖ್ಯಾಧಿಕಾರಿ ಜಗಧೀಶ ಭಂಡಾರಿ ಮಾತನಾಡಿ ಸ್ಥಾಯಿ ಸಮಿತಿ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳನ್ನು ಸಾಮಾನ್ಯಸಭೆಯಲ್ಲಿ ಮಂಡಿಸಿ ಪುರಸಭೆ ಸದಸ್ಯರಿಂದ ಅಂಗೀಕರ ಪಡೆದು ಜಾರಿಗೆ ತರಲಾಗುವುದು ಎಂದು ತಿಳಿಸಿದರು

ಸ್ಥಾಯಿಸಮಿತಿಯ ಸದಸ್ಯರಾದ ಬಸವರಾಜಭಜಂತ್ರಿ,ಲಕ್ಷಿö್ಮದೇವಿ ,ಶಾಹನವಾಜ್ ಬಾನು, ಸೂರ್ಯಕುಮಾರಿ, ಹುಸೇನ್‌ಬಾಷ, ಶರಣೆಗೌಡ, ಇಬ್ರಾಹಿಂ ಬಾಷ, ಸಾಬೀರ ಹುಸೇನ್ ಚರ್ಚ ನಡೆಸಿದರು, ವ್ಯವಸ್ಥಾಪಕ ಕೃಷ್ಣಮೂರ್ತಿ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ರೆಹಮತ್ ಉನಿಸಾ ಬೇಗಂ,ಸೇರಿದAತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here