ಲಯನ್ಸ ಕ್ಲಬ್ ವತಿಯಿಂದ ಆರೋಗ್ಯ ತಪಾಸಣೆ ಮತ್ತು ಅಗತ್ಯ ವಸ್ತು ವಿತರಣೆ

ಲಲಿತ ಹಿರಿಯ ನಾಗರಿಕ ಮನೆಗೆ ಸುಮಾರು 10 ಅವಶ್ಯಕ ಸಾಮಾನುಗಳನ್ನು ಕೊಡುತ್ತಿದ್ದು ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದಬೇಕು

0
174

ಲಯನ್ಸ ಕ್ಲಬ್ ವತಿಯಿಂದ ಆರೋಗ್ಯ ತಪಾಸಣೆ ಮತ್ತು ಅಗತ್ಯ ವಸ್ತು ವಿತರಣೆ. 

ರಾಯಚೂರು,ನ.15- ಲಯನ್ಸ ಕ್ಲಬ್ ವತಿಯಿಂದ ಇಂದು ರಾಯಚೂರಿನ ಉದಯ ನಗರದಲ್ಲಿರುವ ಲಲಿತ ಹಿರಿಯ ನಾಗರಿಕರ ಮನೆಯಲ್ಲಿ ವಿಶ್ವ ಮದುಮೇಹ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಮದುಮೇಹ, ಆರೋಗ್ಯ ತಪಾಸಣೆ ಮತ್ತುಅವಶ್ಯಕ ಸಾಮಾನುಗಳನ್ನು ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ ಪ್ರಾಂತೀಯ ಅಧ್ಯಕ್ಷರಾದ ಡಾ ಸುರೇಶ ಸಗರದ ಅವರು ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ದೇಹದ ಅನೇಕ ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗುತ್ತದೆ. ಮಧುಮೇಹವು ಇಂದು ವಿಶ್ವದಾದ್ಯಂತ ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಯಾಗಿದೆ. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ವಿಶ್ವದ ಎಲ್ಲ ಕಡೆ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಪ್ರತೀ ವರ್ಷ ನವಂಬರ್ 14 ರಂದು ವಿಶ್ವ ಮಧುಮೇಹ ದಿನ’ ಆಚರಣೆ ಮಾಡುವರು. 1922ರಲ್ಲಿ ಚಾರ್ಲ್ಸ್ ಬೆಸ್ಟ್ ಜೊತೆಯಲ್ಲಿ ಇನ್ಸುಲಿನ್ ಕಂಡು ಹಿಡಿದ ಸರ್ ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ನಂತರ ಮಾತನಾಡಿದ ರಾಯಚೂರು ಲಯನ್ಸ ಕ್ಲಬ್ ಅದ್ಯಕ್ಷರಾದ ಡಾ ವೆಂಕಟೇಶ್ ನಾಯಕ ಅವರು ಲಲಿತ ಹಿರಿಯ ನಾಗರಿಕ ಮನೆಗೆ ಸುಮಾರು 10 ಅವಶ್ಯಕ ಸಾಮಾನುಗಳನ್ನು ಕೊಡುತ್ತಿದ್ದು ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರ ತಂಡ ಎಲ್ಲ ಹಿರಿಯ ನಾಗರಿಕರ ಮಧುಮೇಹ ಮತ್ತು ಆರೋಗ್ಯ ತಪಾಸಣೆಗ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ನ ನರೇಶ್ ಬಾಬು, ಗೋವಿಂದ ರಾಜು, ಶರಣಭೂಪಾಲ್ ನಾಡಗೌಡ, ಹೇಮಣ್ಣ, ಮಲ್ಲಿಕಾರ್ಜುನ ಬಾಳೆ, ಹನುಮಂತರಾವ್ ಮತ್ತು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯ ಡಾ ಅಶೋಕ್, ಅಬ್ದುಲ್ ಲತೀಫ್, ಆರ್ ಕೆ ಪ್ರಸಾದ್, ದೀಪಾ, ತಬೀತಾ, ವಿಶ್ವ,ಮರೆಪ್ಪ ನಾಯಕ ಮತ್ತು ಲಲಿತ ಹಿರಿಯ ನಾಗರಿಕರ ಗೃಹದ ಸಿಬ್ಬಂದಿ ಭಾಗವಹಿಸಿದ್ದರು.

ಕಾರ್ಯಕ್ರಮ ಶಿವರುದ್ರಯ್ಯರವರ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ರಾಜೇಂದ್ರ ಕುಮಾರ್ ಎಸ್ ಶಿವಾಳೆ ಮಾಡಿದರು.

LEAVE A REPLY

Please enter your comment!
Please enter your name here