ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ನೂತನ ಧ್ವಜ ಕಟ್ಟೆ; ಪುರಸಭೆ ಹಿರಿಯ ಸದಸ್ಯ ರಾಜ ಮಹಿಂದ್ರ ನಾಯಕ್ ದೊರೆ

ಮಾನ್ವಿ ಪಟ್ಟಣದ 19ನೇ ವಾರ್ಡ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು

0
182

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ನೂತನ ಧ್ವಜ ಕಟ್ಟೆ

ಮಾನ್ವಿ: ಗ್ರಾಮೀಣ ಭಾಗದಲ್ಲಿನ ಸರಕಾರಿ ಶಾಲೆಗಳ ಅಭಿವೃದ್ದಿಯಿಂದ ಮಾತ್ರ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯ ಎನ್ನುವ ದೃಷ್ಟಿಯಲ್ಲಿ ತಾಲ್ಲೂಕಿನ ಶಾಲೆಗಳನ್ನು 110ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು

ಪಟ್ಟಣದ 19ನೇ ವಾರ್ಡ್ನಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ನೂತನವಾಗಿ ನಿರ್ಮಿಸಿದ ನೂತನ ಧ್ವಜ ಕಟ್ಟೆಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಪಡೆಯಲು ಅನುಕೂಲವಾಗಲು ಬಾಲಕರ ,ಬಾಲಕಿಯರ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಿ ಅಗತ್ಯವಿರುವ ಪ್ರಯೋಗಲಯದ ಉಪಕರಣಗಳನ್ನು 4ಲಕ್ಷ ವೆಚ್ಚದಲ್ಲಿ ಒದಗಿಸಲಾಗಿದೆ ಕ್ರೀಡೆಗಳನ್ನು ನಡೆಸಲು ಅನುಕೂಲವಾಗಲು 5ಕೋಟಿ ವೆಚ್ಚದಲ್ಲಿ ತಾ.ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 10ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮುಖ್ಯ ಮಂತ್ರಿಗಳು ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾ.ಅಧ್ಯಕ್ಷ ಪುರಸಭೆ ಹಿರಿಯ ಸದಸ್ಯ ರಾಜಾ ಮಹೇಂದ್ರನಾಯಕ ಮಾತನಾಡಿ ಕನ್ನಡ ನಾಡು,ನುಡಿಯ ಬೆಳವಣಿಗೆಗೆ ಪ್ರತಿಯೊಬ್ಬರು ಅಗತ್ಯಬಂದಾಗ ಪ್ರಾಣತ್ಯಾಗಕ್ಕೂ ಸಿದ್ಧರಾಗಬೇಕೆಂದು ಕರೆ ನೀಡಿದರು

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಹಾಗೂ ಹಿರಿಯ ನಾಗರಿಕರನ್ನು ,ನಿವೃತ್ತ ಅಧಿಕಾರಿಗಳನ್ನು, ಸರ್ಕಾರಿ ನೌಕರರನ್ನು ,ಪತ್ರಕರ್ತರನ್ನು ,ಪೌರ ಕಾರ್ಮಿಕರನ್ನು, ಆರೋಗ್ಯ ಇಲಾಖೆ ,ಗೃಹರಕ್ಷಕದಳ,ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಬ್ದುಲ್ ವಾಹಿದ್, ಪುರಸಭೆ ಅಧ್ಯಕ್ಷೆ ಸುಫಿಯಾ ಜಿಲಾನಿ ಖುರೇಷಿ, ತಾ.ಕ.ಸಾ.ಪ. ಅಧ್ಯಕ್ಷ ಮಹಮ್ಮದ್ ಮುಜೀಬ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಾಜಾ ರಾಮಚಂದ್ರನಾಯಕ, ಎಂ.ಈರಣ್ಣ, ಕೇತ್ರಶಿಕ್ಷಣಾಧಿಕಾರಿ ವೆಂಕಟೇಶಗುಡಿಹಾಳ್,ಪುರಸಭೆ ಮುಖ್ಯಧಿಕಾರಿ ಜಗದೀಶಭಂಡಾರಿ, ತಾ.ಆರೋಗ್ಯಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ,ಪಿ.ಐ.,ಮಹದೇವಪ್ಪ ಪಂಚಮುಖಿ, ಅಮರಯ್ಯ ಉಪ್ಪಳಮಠ, ಗುಮ್ಮ ಬಸವರಾಜ, ಶ್ರೀ ಶೈಲಗೌಡ, ಡಿ.ವೀರನಗೌಡ, ಚುಟುಕು ಸಾಹಿತ್ಯ ಪರೀಷತ್ ತಾ.ಅಧ್ಯಕ್ಷ ಸೈಯಾದ್ ತಾಜೂದ್ದಿನ್,ದಲಿತ ಸಾಹಿತ್ಯ ಪರೀಷತ್ ಅಧ್ಯಕ್ಷ ಆರ್.ಕೆ.ಈರಣ್ಣ, ಕರವೇ ತಾ.ಅಧ್ಯಕ್ಷ ವೀರನಗೌಡ, ಸುಭಾನ್ ಬೇಗ್, ನಾಗರಾಜ ಭಂಡಾರಿ, ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here