ವಾರ್ಡ್ ನಂ13ರಲ್ಲಿ ಕುಡಿಯುವ ನೀರಿನ ತೊಟ್ಟಿ ಉದ್ಘಾಟನೆ.

0
158

ಕುಡಿಯುವ ನೀರಿನ ತೊಟ್ಟಿ ಉದ್ಘಾಟನೆ.

ಮಾನವಿ ನಗರದ ವಾರ್ಡ್ ನಂ 13ರಲ್ಲಿ 2020-21ರ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿದ ಎರಡು ಕುಡಿಯುವ ನೀರಿನ ತೊಟ್ಟಿ ಉದ್ಘಾಟಿಸಲಾಯಿತು

ವಾರ್ಡ್ ನ ಪುರಸಭೆ ಸದಸ್ಯ ಹುಸೇನ್ ಬಾಷ ಎಚ್ ಬಿ ಎಂ  ಪುರಸಭೆಯಲ್ಲಿ ಬಂದಿರುವಂತಹ ಸರ್ಕಾರದ ಎಲ್ಲಾ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ವಾರ್ಡ್ ಅಭಿವೃದ್ಧಿ ಮಾಡಿ ಜನರ ಮನಸ್ಸು ಗೆದ್ದಿದ್ದಾರೆ.

ಪುರಸಭೆ ಸದಸ್ಯ ಹುಸೇನ್ ಬಾಷಾ ನಿಜವಾಗಲೂ ಸಾರ್ವಜನಿಕರಿಗಾಗಿ ದುಡಿಯುವಂತಹ ನಿಸ್ವಾರ್ಥ ಜೀವಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಫೂರ್ ಸಾಬ್ ಹೇಳಿದರು ಅವರಿಂದು ನಗರದ ವಾರ್ಡ್ ನಂಬರ್ 13ರಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಕುಡಿಯುವ ನೀರಿನ 2 ತೊಟ್ಟಿಗಳನ್ನು ಉದ್ಘಾಟಿಸಿ ಮಾತನಾಡುತ್ತಾ ಹೇಳಿದರು. ಹುಸೇನ್ ಬಾಷಾ ರವರು ವಾರ್ಡಿಗೆ ಬಂದಿರುವಂತಹ ಎಲ್ಲ ಅನುದಾನವನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ಸುಮಾರು 4500000 ಅನುದಾನವನ್ನು ವಾರ್ಡಿನಲ್ಲಿ ಸಿಸಿ ಚರಂಡಿ, ನೀರಿನ ಪೈಪ್ ಲೈನ್, ಬೋರ್ವೆಲ್, ರಾಜಕಾಲುವೆಯ ದುರಸ್ತಿ, ಹೈ ಮಸ್ಟ್ ಲೈಟ್,ಮತ್ತು ಸಾರ್ವಜನಿಕ ಮಹಿಳಾ ಶೌಚಾಲಯನ್ನು ನಿರ್ಮಾಣ ಮಾಡಿಸಿ ವಾರ್ಡ್ ಅಭಿವೃದ್ಧಿಗೆ ದುಡಿದಿರುವುದು ಬಹಳ ಪ್ರಶಂಸನೀಯ ಹಗಲು ರಾತ್ರಿ ವಾರ್ಡಿನಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿಯನ್ನು ಮಾಡಿ ಇತರೆ ಪುರಸಭೆ ಸದಸ್ಯರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ನಂತರ ಕಾಂಗ್ರೆಸ್ ಮುಖಂಡ ವಸಂತ ನಾಯಕ್ ಮಾತನಾಡಿ ಹುಸೇನ್ ಬಾಷಾ ಬಹಳ ದಣಿವರಿಯದೇ ದುಡಿಯುವ ವ್ಯಕ್ತಿ ಸರಳ ಜೀವಿ ಯಾವುದೇ ಕೆಲಸವನ್ನು ಹಿಡಿದರೆ ಮುಗಿಸುವವರೆಗೆ ಹಿಂದೆ ಸರಿಯುವುದಿಲ್ಲ ಎಂತಹದ್ದೇ ಸಮಸ್ಯೆಯಿರಲಿ ಅತ್ಯುತ್ತಮ ರೀತಿಯಲ್ಲಿ ಅದನ್ನ ಬಗೆಹರಿಸಿ ಸಾರ್ವಜನಿಕರಿಗೆ ಸಹಾಯ ಮಾಡುವ ಉದಾಹರಣೆಗಳು ನಾವು ನೋಡಿದ್ದೇವೆ.

ವಾರ್ಡ್ ಜನರಿಗೆ ಹುಸೇನ್ ಬಾಷಾ ಮನೆ ಮಗನಾಗಿದ್ದಾನೆ ಈಗಾಗಲೇ ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ ಇನ್ನು ಮುಂದಿನ ದಿನಗಳಲ್ಲಿ ಇತರೆ ಅನುದಾನಗಳು ಬಂದನಂತರ ಇನ್ನು ಅಭಿವೃದ್ಧಿ ವಾರ್ಡ್ನಲ್ಲಿ ಮಾಡಲಾಗುವುದು ವಾರ್ಡ ಅಭಿವೃದ್ಧಿಗೆ ಸಂಪೂರ್ಣವಾಗಿ ನಾವುಗಳು ಸಾಥ್ ನೀಡಿ ಹುಸೇನ್ ಬಾಷಾ ಅವರ ಬೆನ್ನಿಗೆ ಸದಾ ನಿಂತಿರುತ್ತೇವೆ ಎಂದು ಅವರು ಹೇಳಿದರು

ನಂತರ ಕಾಂಗ್ರೆಸ್ ಪಕ್ಷದ ಪುರಸಭೆ ಅಧ್ಯಕ್ಷ ಸುಫಿಯಾ  ಬೇಗಮ್ ಜಿಲಾನಿ ಕುರೇಶಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಪರೀದ್ ಉಮರಿ, ಕಾಂಗ್ರೆಸ್ ಮುಖಂಡ ಸಮದಾನಿ ನಾಯಕ್, ಅರುಣ ಚಂದ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗೇಶ್, ಫಯಾಜ್,ಮುಜಮ್ಮಿಲ್ ಗುರು, ಪುರಸಭೆ ಸದಸ್ಯ ಬಸವರಾಜ್ ಭಜಂತ್ರಿ ಪುರಸಭೆ ಸದಸ್ಯ ಚಂದ್ರು ಕಾಜಗಾರ ಐಡಿಯಲ್ ಗ್ರೂಪ್ನ ಅಧ್ಯಕ್ಷರಾದ ಹುಸೇನ್ ಬಾಷಾ,ಕೆಎಂ ಬಾಷಾ, ಫರ್ಹನ್ ಯಮನಿ ಮತ್ತು ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here