ಭಕ್ತರನ್ನು ಆಕರ್ಷಿಸಿದ ಗೊದಲಿ.

ಜನರ ಗಮನ ಸೆಳೆದ ಗೊದಲಿ. ಶಾಸಕ ರಾಜವೆಂಕಟಪ್ಪ ನಾಯಕ ಚರ್ಚ್ ಗಳಿಗೆ ಭೇಟಿ ನೀಡಿದರು.

0
79

ಮಾನವಿ: ಕ್ರಿಶ್ಚಿಯನ್ ಸಮುದಾಯದ ಬಾಂಧವರು ಮಾನವಿ ತಾಲೂಕಿನ ವಿವಿಧೆಡೆ ಶುಕ್ರವಾರ ಕ್ರಿಸ್ ಮಸ ಹಬ್ಬವನ್ನು ಸಡಗರದಿಂದ ಆಚರಿಸಿದರು.

ನಗರದ ಕೊನಾಪೂರ್ ಪೇಟೆಯ ಸೇಂಟ್ ಮೇರೀಸ್ ಚರ್ಚ್, ಲಿಯೊನಾರ್ಡೊ ಹಾಗೂ ಜನೊದಯ ಸಂಸ್ಥೆ ಮತ್ತು ತಾಲ್ಲೂಕಿನ ಕುರ್ಡಿ, ಪೊತ್ನಾಳ, ಜಾಗೀರಪನ್ನೂರು ಗ್ರಾಮಗಳ ಚರ್ಚ್ ಗಳಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ತನ ಬಾಲ್ಯದ ಸಂದೇಶ ಸಾರುವ ಗೊದಲಿ ಮತ್ತು ಇತರೇ ಕಲಾಕೃತಿಗಳನ್ನು ನಿರ್ಮಿಸುವ ಮೂಲಕ ಭಕ್ತರ ಗಮನ ಸೆಳೆಯಲಾಯಿತು.

ಬೆಳಿಗ್ಗೆ ಚರ್ಚ್ ಗಳಲ್ಲಿ ಕ್ರಿಶ್ಚಿಯನ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು ಈ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಇತರೇ ಗಣ್ಯ ಮಾನ್ಯರು ಚರ್ಚ್ ಗಳಿಗೆ ತೆರಳಿ ಹಬ್ಬದ ಶುಭಾಶಯ ತಿಳಿಸಿದರು.

 

LEAVE A REPLY

Please enter your comment!
Please enter your name here