ನವಜೋತ್ ಸಿಂಗ್ ಸಿದ್ಧು ಪೋಲೀಸರ ವಶಕ್ಕೆ.

ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡದಿದ್ದರೆ, ಇಡೀ ಪಂಜಾಬ್ ಕಾಂಗ್ರೆಸ್ ಲಖಿಂಪುರ ಖೇರಿಗೆ ಲಗ್ಗೆ ಇಡಲಿದೆ ಎಂದು ಸಿಧು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

0
94

ಯಮುನಾನಗರ: ಲಖಿಂಪುರ ಹಿಂಸಾಚಾರ ಖಂಡಿಸಿ ಪಚಿಜಾಬ್ ನಿಂದ ಉತ್ತರಪ್ರದೇಶಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಪಂಜಾಬ್ ಪ್ರದೇಶ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿದ್ಧು ಪೋಲೀಸರು ವಶಕ್ಕೆ ಪಡೆದಿದ್ದಾರೆ

ಹರಿಯಾಣ ಹಾಗೂ ಉತ್ತರ ಪ್ರದೇಶದ ಗಡಿ ಯಮುನಾಗರದಲ್ಲಿ ಸಿಧು ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಸಿಧು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು.

ಲಖಿಂಪುರ ಖೇರಿಯತ್ತ ಹೊರಟಿದ್ದ ಸಿಧು ಮತ್ತವರ ಬೆಂಬಲಿಗರನ್ನು ತಡೆದ ಪೊಲೀಸರು, ಸುರಕ್ಷತಾ ದೃಷ್ಟಿಯಿಂದ ಮುಂದಕ್ಕೆ ತೆರಳಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದರಿಂದ ಕೆರಳಿದ ಸಿಧು, ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿದ ಕೇಂದ್ರ ಸಚಿವನ ಪುತ್ರನನ್ನು ಬಂಧಿಸುವ ಬದಲು. ನ್ಯಾಯಕ್ಕಾಗಿ ಆಗಗ್ರಹಿಸುತ್ತಿರುವ ನಮ್ಮನ್ನು ಬಂಧಿಸಲು ನಿಮಗೆ ನಾಚಿಕೆಯಾಗಬೇಕು ಎಂದು ಪೊಲೀಸರ ವಿರುದ್ಧ ಹರಿಹಾಯ್ದರು.

ಕೇಂದ್ರ ಸಚಿಬವ ಮತ್ತು ಆತನ ಪುತ್ರ ಕಾನೂನಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದ ಸಿಧು, ನಮ್ಮನ್ನು ಲಖಿಂಪುರ ಖೇರಿಗೆ ಭೇಟಿ ನೀಡದಿರುವಂತೆ ತಡೆಯಲು ನೀವ್ಯಾರು ಎಂದು ಪೊಲೀಸರನ್ನು ಪ್ರಶ್ನಿಸಿದರು.

ತೀವ್ರ ವಾಕ್ಸಮರದ ಬಳಿಕ ಸಿಧು ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದ ಪೊಲೀಸರು, ಬೇರಡೆ ಕರೆದುಕೊಂಡು ಹೋದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವ ವೇಳೆ ‘ಕಿಸಾನ್ ಏಕತಾ ಜಿಂದಾಬಾದ್'(ರೈತ ಒಗ್ಗಟ್ಟು ಚಿರಾಯುವಾಗಲಿ) ಎಂದು ಘೋಷಣೆ ಕೂಗಿದ ಸಿಧು, ಕೇಂದ್ರ ಮತ್ತು ಯುಪಿ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಲಖಿಂಪುರ ಖೇರಿ ದುರ್ಘಟನೆ ಖಂಡಿಸಿ ಪ್ರತಿಭಟನೆ ನಡೆಸಿ ಬಂಧಿಸಲ್ಪಟ್ಟಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡದಿದ್ದರೆ, ಇಡೀ ಪಂಜಾಬ್ ಕಾಂಗ್ರೆಸ್ ಲಖಿಂಪುರ ಖೇರಿಗೆ ಲಗ್ಗೆ ಇಡಲಿದೆ ಎಂದು ಸಿಧು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here