ವೈಮಾನಿಕ ಸಮೀಕ್ಷೆಯಿಂದ ಜನರ ಕಷ್ಟ ತಿಳಿಯಲ್ಲ, ಪ್ರಧಾನಿ ಬಳಿ ನೆರೆ ಪರಿಹಾರ ಕೇಳುವ ಧೈರ್ಯ ತೋರಲಿ: ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

0
17

ಕಲಬುರಗಿ:   “ಧೈರ್ಯ ಹೊಂದಿವಿದೆಂದರೆ ಕುಸ್ತಿ ಆಡುವುದಕ್ಕೆ ಸಿದ್ದವೆಂದಲ್ಲ ಅಶ್ವತ್ಥ್ ನಾರಾಯಣ ಅವರಿಗೆ ಧೈರ್ಯವಿದ್ದರೆ  ಪಿಎಂ ಮೋದಿಯವರೊಂದಿಗೆ ಮಾತನಾಡಲು ಅವಕಾಶ ಪಡೆಯಿರಿ ಮತ್ತು ರಾಜ್ಯದ ಪ್ರವಾಹ ಪೀಡಿತರಿಗೆ ಪರಿಹಾರವನ್ನು ತನ್ನಿರಿ” ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪಮುಖ್ಯಮಂತ್ರಿ  ಅಶ್ವತ್ಥ್ ನಾರಾಯಣ ವಿರುದ್ಧ ಹರಿಹಾಯ್ದಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಧೈರ್ಯವನ್ನು ಹೊಂದಿರುವುದು ಎಂದರೆ ಕುಸ್ತಿ ಅಖಾಡಕ್ಕಿಳಿದು ಕುಸ್ತಿಯಾಡುವುದು ಎಂದಲ್ಲ.ಅಶ್ವತ್ಥ್ ನಾರಾಯಣ ಅವರಿಗೆ ಧೈರ್ಯವಿದ್ದರೆ  ಪಿಎಂ ಮೋದಿಯವರೊಂದಿಗೆ ಮಾತ ರಾಜ್ಯಕ್ಕೆ ಪ್ರವಾಹ ಪರಿಹಾರ ಒದಗಿಸಬೇಕು. ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರೂ, ಅವರಿಂದ ಯಾವ ಪ್ರಯೋಜನವಾಗಿಲ್ಲ. ಅಶ್ವತ್ಥ್ ನಾರಾಯಣ ಅವರು ನನಗಿಂತ 10 ಪಟ್ಟು ಹೆಚ್ಚು ಧೈರ್ಯವನ್ನು ಹೊಂದಿರಲಿ.ಆದರೆ ಪ್ರಧಾನಿ ಮೋದಿ ಅವರಿಂದ ಪರಿಹಾರವನ್ನು ತರಲು ಅವರು ಅದನ್ನು ಬಳಸಲಿ”

“ಪ್ರವಾಹ ಪೀಡಿತರಿಗೆ ಇನ್ನೂ ಒಂದು ರೂಪಾಯಿ ಪರಿಹಾರ ಸಿಕ್ಕಿಲ್ಲ. ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ ರಾಜ್ಯ ಸರ್ಕಾರ ಪ್ರಧಾನ ಮಂತ್ರಿಯನ್ನು ಸಂಪರ್ಕಿಸುವ ಧೈರ್ಯಹೊಂದಿಲ್ಲ. ಅವರು ಸರ್ವಪಕ್ಷ ನಿಯೋಗವನ್ನು ಕರೆಯಲಿ ನಾವು ಪರಿಹಾರ ಕೇಳುತ್ತೇವೆ. ಇಲ್ಲವೆ ಬಿಜೆಪಿ ಪ್ರಧಾನಮಂತ್ರಿಯ ಬಳಿಗೆ ಹೋಗಿ ಹೆಚ್ಚಿನ ಪರಿಹಾರವನ್ನು ಕೇಳುವ ಧೈರ್ಯವನ್ನು ತೋರಲಿ

“ಸಿಎಂ ಯಡಿಯೂರಪ್ಪ ಅವರು ಚೆಕ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದರು. ಅವರ ಮಗ ಆರ್ಟಿಜಿಎಸ್ ಮೂಲಕ ಸ್ವೀಕರಿಸುತ್ತಿದ್ದಾರೆ. ಯಡಿಯೂರಪ್ಪ ಹಳೆಯ ವಿಧಾನ ಅನುಸರಿಸಿದ್ದರೆ ಅವರ ಮಗ ಲಂಚ ಪಡೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.   ಆರ್‌ಟಿಜಿಎಸ್ ಮೂಲಕ ನೇರವಾಗಿ ತನ್ನ ಖಾತೆಗೆ 7.40 ಕೋಟಿ ರೂ ಜಮೆ ಮಾಡಿಸಿಕೊಂಡಿದ್ದಾರೆ.  ಸರ್ಕಾರವು ಸಂಪೂರ್ಣವಾಗಿ ಭ್ರಷ್ಟತೆಯಿಂದ ಕೂಡಿದೆ. ಅಲ್ಲದೆ ಹಗಲು ವೇಳೆಯಲ್ಲೇ ಲೂಟಿ ಹೊಡೆಯುತ್ತಿದೆ.  ಪ್ರವಾಹ ಪೀಡಿತರ ದುಃಸ್ಥಿತಿಯನ್ನು ಅವರು ಕೇಳಲು ಬಯಸುವುದಿಲ್ಲ. ಅವರು ಲೂಟಿ ಮಾಡುವುದನ್ನು ತಮ್ಮ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ.” ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು ಮುಂದಿನ ಸಿಎಂ ಸಿದ್ದರಾಮಯ್ಯನವರೇ ಆಗಬೇಕೆಂದು ಘೋಷಣೆಗಳನ್ನು ಕೂಗಿದರು. ಬೆಂಬಲಿಗರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಮುಂದಿನ ಸಿಎಂ ಯಾರು ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಜನರು ನನ್ನ ಬಗ್ಗೆ ಇರುವ ಗೌರವದಿಂದಾಗಿ ನಾನು ಸಿಎಂ ಆಗಬೇಕೆಂದು ಜನರು ಬಯಸುತ್ತಾರೆ. ಇದೀಗ ಸಿಎಂ ಹುದ್ದೆ ಖಾಲಿ ಇಲ್ಲ ಮತ್ತು ಚುನಾವಣೆಗಳು ಸಹ ಸಧ್ಯದಲ್ಲಿಲ್ಲ” ಎಂದರು.

ಪ್ರವಾಹ, ರೈತರ ಸಂಕಷ್ಟ ಚರ್ಚೆಗೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಿರಿ

ಇನ್ನು ಬೀದರ್ ನಲ್ಲಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ರೈತರು ಬೆಳೆ-ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೀದರ್ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಸವಕಲ್ಯಾಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ಕೊರೊನಾ, ಇನ್ನೊಂದೆಡೆ ಪ್ರವಾಹ, ಮತ್ತೊಂದೆಡೆ ಹಾಳಾಗಿ ಹೋಗಿರುವ ಶಾಂತಿ ಮತ್ತು ಸುವ್ಯವಸ್ಥೆ ಇವೆಲ್ಲದರ ನಡುವೆ ಭ್ರಷ್ಟಾಚಾರದ ಹಗರಣಗಳು. ಇವೆಲ್ಲದರ ಬಗ್ಗೆ ಶಾಸಕರು ಚರ್ಚೆ ನಡೆಸಲು ವಿಧಾನಮಂಡಲವೇ ಸೂಕ್ತ ವೇದಿಕೆ. ವಿರೋಧಪಕ್ಷಗಳನ್ನು ಎದುರಿಸುವ ಧೈರ್ಯ ಇಲ್ಲದ ರಾಜ್ಯ ಸರ್ಕಾರ ಅಧಿವೇಶನವನ್ನೇ ನಡೆಸದೆ ತಪ್ಪಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಇಲ್ಲಿಯ ವರೆಗೆ ರಾಜ್ಯ ಸರ್ಕಾರ ಪ್ರವಾಹದಿಂದಾಗಿರುವ ನಷ್ಟದ ಸಮೀಕ್ಷೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು ವಿಮಾನದಲ್ಲಿ ನೋಡಿ ಹೋದರು, ಕಂದಾಯ ಸಚಿವರು ಕಾಟಾಚಾರಕ್ಕೆ ಭೇಟಿ ನೀಡಿದರು, ಜಿಲ್ಲಾ ಸಚಿವರಾಗಲಿ, ಅಧಿಕಾರಿಗಳು ಜನರ ಬಳಿ ಹೋಗಿಯೇ ಇಲ್ಲ. ಇಡೀ ಸರ್ಕಾರವೇ ನೆರೆಯಲ್ಲಿ ಕೊಚ್ಚಿಕೊಂಡ ಹೋಗಿರುವಂತಹ ದುಸ್ಥಿತಿ ಇದೆ ಎಂದು ಹರಿಹಾಯ್ದರು.

LEAVE A REPLY

Please enter your comment!
Please enter your name here