ಕೋವಿಡ್ ನಿಯಮ ಪಾಲಿಸಿ, ಶಾಂತಿಯುತವಾಗಿ ಹಬ್ಬ ಆಚರಿಸಿ: ಉಮೇಶ ಕಾಂಬ್ಳೆ

ಮಿಲಾದುನ್ನಬಿ (ಸ್ವ), ಮಹರ್ಷಿ ವಾಲ್ಮೀಕಿ ಅವರ ಜಯಂತಿ ಹಿನ್ನಲೆಯಲ್ಲಿ ನಡೆದ ಶಾಂತಿ ಸಭೆ

0
100

ಮಿಲಾದುನ್ನಬಿ, ವಾಲ್ಮೀಕಿ ಜಯಂತಿ: ಶಾಂತಿಸಭೆ.

ಕೋವಿಡ್ ನಿಯಮ ಪಾಲಿಸಿ, ಶಾಂತಿಯುತವಾಗಿ ಹಬ್ಬ ಆಚರಿಸಿ: ಉಮೇಶ ಕಾಂಬ್ಳೆ

ಸಿಂಧನೂರು.ಅ.೧೬ –
ಕೋವಿಡ್ ಹಿನ್ನಲೆಯಲ್ಲಿ ಸರ್ಕಾರದಿಂದ ಹೊರಡಿಸಿರುವ ನಿಯಮಗಳನ್ನು ಪಾಲಿಸುವ ಮೂಲಕ ಶಾಂತಿಯುತವಾಗಿ ಹಬ್ಬ ಆಚರಿಸಿ ಎಂದು ಸಿಪಿಐ ಉಮೇಶ ಕಾಂಬ್ಳೆ ಹೇಳಿದರು.
ಅವರು ಶನಿವಾರ ಸಂಜೆ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಮಿಲಾದುನ್ನಬಿ (ಸ್ವ), ಮಹರ್ಷಿ ವಾಲ್ಮೀಕಿ ಅವರ ಜಯಂತಿ ಹಿನ್ನಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಹಬ್ಬಗಳ ಆಚರಣೆ ಕುರಿತಂತೆ ಈಗಾಗಲೇ ಸರ್ಕಾರದಿಂದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ. ಅದರಂತೆ ಪ್ರತಿಯೊಬ್ಬರು ಶಾಂತಿ ಸೌಹಾರ್ದತೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಹಬ್ಬಗಳನ್ನು ಆಚರಣೆ ಮಾಡಬೇಕು. ಶಾಂತಿ ಕದಡಲು ಯಾರೂ ಆಸ್ಪದ ಮಾಡಿಕೊಡಬಾರದು. ಅಂತಹ ಘಟನೆಗಳು ಕಂಡುಬAದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ರಾಜ್ಯಾದ್ಯಂತ ಗೃಹ ಇಲಾಖೆಯಿಂದ ೧೧೨ ವಾಹನಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಸಾರ್ವಜನಿಕರು ಈ ಸಂಖ್ಯೆಯನ್ನು ಬಳಸಿ ದೂರವಾಣಿ ಕರೆ ಮಾಡುವ ಮೂಲಕ ತಮಗೆ ಆಗುವ ಅವಘಡಗಳ ಬಗ್ಗೆ ತಿಳಿಸಿದರೆ, ತಕ್ಷಣವೇ ಆಯಾ ಭಾಗದ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆಯವರು ತಮಗೆ ಸಂಪರ್ಕಿಸಿ ಸಹಾಯಕ್ಕೆ ಮುಂದಾಗುತ್ತಾರೆ ಎಂದರು.

ಡಿವೈಎಸ್ಪಿ ವೆಂಕಟಪ್ಪ ನಾಯಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನಾಯಕ ಸಮಾಜದ ಅಧ್ಯಕ್ಷ ವೆಂಕೋಬ ನಾಯಕ, ಮುಸ್ಲಿಂ ಸಮಾಜದ ಮುಖಂಡರಾದ ಬಾಬರ್‌ಪಾಷಾ, ನದೀಮ್‌ಮುಲ್ಲಾ, ಮೆಹಬೂಬ್‌ಖಾನ್, ಕೆ.ಜಿಲಾನಿಪಾಷಾ, ಶಪ್ಪುಖಾನ್, ನಿಸಾರ್‌ಖಾನ್ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು, ನಾಯಕ ಸಮಾಜದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ನಗರ ಠಾಣೆಯ ಪಿಎಸ್‌ಐ ಸೌಮ್ಯ ಕೊನೆಗೆ ವಂದನಾರ್ಪಣೆ ಮಾಡಿದರು.
———————————————————————–
(ಈ ಸುದ್ದಿ್ದ್್ದದ್

LEAVE A REPLY

Please enter your comment!
Please enter your name here