ಪಡಿತರ ವ್ಯವಸ್ಥೆ ಗೊಂದಲ, ದೂರು ಸ್ವೀಕರಿಸಲು ಟೋಲ್ ಫ್ರೀ ನಂಬರ್ .

ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು

0
149

ನವದೆಹಲಿ:  ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು ಗಮನಿಸಬಹುದಾಗಿದೆ. ಸರ್ಕಾರದ ವಿತರಣಾ ವ್ಯವಸ್ಥೆಯಡಿ ಗೋಧಿ, ಅಕ್ಕಿ, ಇತ್ಯಾದಿಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಜನತೆಗೆ ನೀಡುತ್ತದೆ ಕೂಡ.

ಆದರೆ ಇತ್ತೀಚಿನ ದಿನದಲ್ಲಿ ಪಡಿತರ ಆಹಾರ ವಿತರಣೆ ಯ ದಿನಗಳಂದು ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು. ಪಡಿತರ ಅಂಗಡಿಗಳು ಸಮಯಕ್ಕೆ ಸರಿಯಾಗಿ ಅಂಗಡಿಯನ್ನು ತೆರೆಯದೇ ಇರುವುದು, ಆಹಾರ ಪದಾರ್ಥಗಳನ್ನು ಜನತೆಗೆ ಹಂಚದೇ ಇರುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ನಿಮಗೂ ಕೂಡ ಈ ರೀತಿಯ ಸಮಸ್ಯೆ ಎದುರಾದರೆ ಟೋಲ್ ಫ್ರೀ ನಂಬರ್ ನಲ್ಲಿ ದೂರು ನೀಡಬಹುದಾಗಿದೆ.

ಹೌದು, NFSA ವೆಬ್ ಸೈಟ್ ನಲ್ಲಿ, ಪ್ರತಿ ರಾಜ್ಯಕ್ಕೆ ವಿವಿಧ ಟೋಲ್ ಫ್ರೀ ಸಂಖ್ಯೆಗಳನ್ನು(ಕರ್ನಾಟಕ- 1800-425-9339) ನೀಡಿದ್ದು ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ (NFSA) ನಲ್ಲಿ ದೂರುಗಳನ್ನು ಒದಗಿಸಬಹುದಾಗಿದೆ.

ನೀವು ಬಯಸಿದರೆ NFSA ವೆಬ್ ಸೈಟ್ ಗೆ ಭೇಟಿ ನೀಡಿ. ಈ ವೆಬ್ ಸೈಟ್ ನಲ್ಲಿ ಮೇಲ್ ಮತ್ತು ದೂರವಾಣಿ ಸಂಖ್ಯೆ ಮೂಲಕ ದೂರುಗಳನ್ನು ದಾಖಲು ಮಾಡಲಾಗಿದೆ. ಪ್ರತಿಯೊಂದು ರಾಜ್ಯವು ಬೇರೆ ಬೇರೆ ಟೋಲ್ ಫ್ರೀ ಸಂಖ್ಯೆಗಳನ್ನು ಹೊಂದಿದೆ.

LEAVE A REPLY

Please enter your comment!
Please enter your name here