ಅಸ್ಸಾಂ ಶಾಂತಿಯುತ ಪ್ರತಿಭಟನಕಾರರ ಮೇಲೆ ಪೊಲೀಸರ ಗುಂಡಿನ ದಾಳಿ – ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಖಂಡನೆ

ಪೋಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕು ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಕರ್ನಾಟಕ ಆಗ್ರಹಿಸುತ್ತದೆ

0
77

ಅಸ್ಸಾಂ ಶಾಂತಿಯುತ ಪ್ರತಿಭಟನಕಾರರ ಮೇಲೆ ಪೊಲೀಸರ ಗುಂಡಿನ ದಾಳಿ – ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಖಂಡನ

ಅಸ್ಸಾಮಿನ ಅಮಾಯಕ ನಾಗರಿಕರ ಮೇಲೆ ಪೊಲೀಸ್ ದಾಳಿ ಖಂಡನೀಯವಾಗಿದೆ. ರಾಜ್ಯ ಸರಕಾರವು ಬಲವಂತವಾಗಿ ನಾಗರಿಕರನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಮುಂದಾದ ಪರಿಣಾಮ ಇಬ್ಬರು ಅಮಾಯಕ ನಾಗರಿಕರು ಹತ್ಯೆಗೀಡಾಗಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದ್ದು ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಯಬೇಕು. ಜನಾಂಗೀಯ ಮತ್ತು ಕೋಮು ವಿಭಜನೆಯ ಲಾಭವನ್ನು ಪಡೆಯಲು ಯತ್ನಿಸುವ ಅಸ್ಸಾಮ್ ಮುಖ್ಯಮಂತ್ರಿ ಹೀಮಾಂತ ಬಿಸ್ವಾ ಶರ್ಮಾ ರಾಜೀನಾಮೆ ನೀಡಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫರೀದ್ ಉಮರಿ ಹೇಳಿದರು

ಪೊಲೀಸರು ಯಾವುದೇ ಎಚ್ಚರಿಕೆ ನೀಡದೆ, ಮಕ್ಕಳು ಮತ್ತು ಮಹಿಳೆಯರು ಸೇರಿ ಸಾವಿರಾರು ನಾಗರೀಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಲಾಠಿ ಮತ್ತು ಬಂದೂಕು ಹೊಂದಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ಅಟ್ಟಾಡಿಸಿಕೊಂಡು ಹೊಡೆದು, ಗುಂಡು ಹಾರಿಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಇದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅಸ್ಸಾಂ ಸರಕಾರ ಅಕ್ರಮ ಒತ್ತುವರಿ ಎಂದು ಆರೋಪಿಸಿ, ಯಾವುದೇ ಪುನರ್ವಸತಿ ಯೋಜನೆಯನ್ನು ಕಲ್ಪಿಸದೆ ಸುಮಾರು 900ಕ್ಕೂ ಅಧಿಕ ಕುಟುಂಬಗಳನ್ನು ತೆರವುಗೊಳಿಸಿದ್ದು, ಕನಿಷ್ಠ 20,000 ಜನರು ನಿರ್ವಸಿತರಾಗಿದ್ದಾರೆ. ದರಾಂಗ್ ಜಿಲ್ಲೆಯ ಗೋರುಖುಟಿ,ಸಿಪಾಜಪುರ ಪ್ರದೇಶಗಳಲ್ಲಿ ಒಕ್ಕಲೆಬ್ಬಿಸಿದ ಸುಮಾರು 77,000 ಬಿಘಾ ಭೂಮಿಯನ್ನು ಕೃಷಿಗಾಗಿ ಬಳಸಿಕೊಳ್ಳುವುದೆಂದು ಸರ್ಕಾರ ಹೇಳುತ್ತಿದೆ. ವಿಪರ್ಯಾಸವೆಂದರೆ ಈ ಸಂಬಂಧ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಸ್ಥಳೀಯ ಜನರನ್ನು ಒಕ್ಕಲೆಬ್ಬಿಸಿ ಯಾವ ಅಭಿವೃದ್ಧಿಯನ್ನು ಅಸ್ಸಾಂ ಸರಕಾರ ಮಾಡಲು ಹೊರಟಿದೆ? ಈ ತೆರವು ಕಾರ್ಯಾಚರಣೆನ್ನು ಈ ಕೂಡಲೇ ನಿಲ್ಲಿಸಬೇಕು, ಗುಂಡೇಟಿಗೆ ಬಲಿಯಾದ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ಕೊಡಬೇಕು ಹಾಗೂ ಈ ಪೋಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕು ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಕರ್ನಾಟಕ ಆಗ್ರಹಿಸುತ್ತದೆ ಎಂದು ಮೂಮೆಂಟ್ ಅಧ್ಯಕ್ಷ ನಾಸಿರ್ ಅಲಿ ಹೇಳಿದರು.

ನಂತರ ಸೊಲಿಡಾರಿಟಿ ಯೂತ್ ಮೂಮೆಂಟ್ ನ ಪದಾಧಿಕಾರಿಗಳ ತಹಸೀಲ್ದಾರ್ ಮಾನವಿ ಇವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಕೊಡಲಾಯಿತು

ಈ ಸಂದರ್ಭದಲ್ಲಿ ನಾಸಿರ್ ಅಲಿ ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಮಾನ್ವಿ ಅಧ್ಯಕ್ಷರು. ಅಲೀಮ್ ಖಾನ್ ಉಪಾಧ್ಯಕ್ಷರು, ಮೊಹಮ್ಮದ್ ಹಸೀಬುರ್ರಹ್ಮಾನ್ ಕಾರ್ಯದರ್ಶಿ, ಹಾರೂನ್, ಮುಹಮ್ಮದ್ ಜೀನಿಯಸ್, ಆಜಮ್, ಅತೀಕ್ ಪಾಷ, ಆಸಿಫ್ ಜೀನಿಯಸ್, ನಿಜಾಮ್, ವಸೀಮ್ ಪಾಶ, ಆಮಿರ್, ಹುಸೇನ್ ನಾಯಕ್, ಸುಹೈಲ್, ಸುಹೈಲ್ ಖುರೇಶಿ, ಚಾಂದ್ ಟೈಲರ್, ಇಮ್ತಿಯಾಜ್ ಹುಸೇನ್, ಅಬ್ದುಲ್ ಖೈಯುಮ್, ಶರ್ಫುದ್ದೀನ್, ರಫೀಕ್ ಬಾಗಲ್ ಕೊಟ್, ಸಮೀರ್ ಪಾಶ, ಆಮೀರ್ ಹುಸೈನ್, ಅಬ್ದುಲ್ ಜಬ್ಬಾರ್, ಇಸ್ಹಾಕ್, ಸುಹೇಲ್ ಮನ್ಸೂರಿ , ಅಬ್ದುಲ್ ಅಝೀಝ್ ಎಸ್ ಐ ಓ, ಮಾನ್ವಿ ಅಧ್ಯಕ್ಷ, ಹಾಗೂ ಪುರಸಭೆ ಸದಸ್ಯ ಫರೀದ್ ಉಮರಿ, ಜಮಾತೇ ಇಸ್ಲಾಮಿ ಮಾನ್ವಿ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ವೆಲ್ಫೇರ್ ಪಾರ್ಟಿ ಅಧ್ಯಕ್ಷ ಬಾಬ ಹುಸೇನ್ ಮತ್ತು ಇತರೇ ಪದಾಧಿಕಾರಿಗಳು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here