23 ರಂದು ಪೌರತ್ವ ಕಾಯ್ದೆಯ ಬಗ್ಗೆ ವಿಚಾರ ಸಂಕಿರಣ.ಪ್ರಿತಮ್ ಕೊಡ್ಲಿ.

0
94
ಮಾನ್ವಿ:ಜ.21 ಇದೆ ತಿಂಗಳ 23ರಂದು ಪಟ್ಟಣದ ಶಾದಿಮಾಹಲ್ ನಲ್ಲಿ ಮಾಜಿ ಐಎಎಸ್‌ ಅಧಿಕಾರಗಳಾದ ಸೆಸಿಕಾಂಥ್ ಸಿಂತೆಲ್ ಅವರಿಂದ ಪೌರತ್ವ ಕಾಯ್ದೆಯ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ವಿದ್ಯಾರ್ಥಿ ಒಕ್ಕೂಟದ ಯುವ ಮುಖಂಡರಾದ ‌ಪ್ರಿತಮ್‌ ಕೊಡ್ಲಿ ಹೇಳಿದರು.
 ಪ್ರವಾಸ ಮಂದಿರದಲ್ಲಿ  ಕರೆದಿದ್ದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ದೇಶದೆಲ್ಲೆಡೆ ‌ಪರ ವಿರೋಧಕ್ಕೆ ಗುರಿಯಾಗಿ ಜನರ ನೆಮ್ಮದಿ ಹಾಳು ಮಾಡಿದ ಸಿಎಎ, ಎನ್‌.ಆರ್.ಸಿ, ಎನ್.ಪಿ.ಆರ್.ಕಾಯ್ದೆಗಳ ಬಗ್ಗೆ ವಿಚಾರ ಸಂಕಿರಣ ಇದ್ದು ಇದರ ಒಂದು ಮಾಹಿತಿಯನ್ನ ಇದರ ಒಂದು ಉದ್ದೇಶವನ್ನು ತಿಳಿದುಕೊಳ್ಳಲು ಎಲ್ಲಾ ವಿದ್ಯಾರ್ಥಿಗಳು ಬಂದು ಭಾಗವಹಿಸಿ ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳಿ ಎಂದು ಹೇಳಿದರು ‌.
ಇದೇ ಸಂಧರ್ಭದಲ್ಲಿ ಝೀಶಾನ್ ಮಾತನಾಡಿ ನಮ್ಮದು ಪ್ರಜಾಪ್ರಭುತ್ವ ದೇಶ ಪರ ವಿರೋಧ ಎಲ್ಲಾವನ್ನು ಆಲಿಸಬೇಕಾಗುತ್ತದೆ ಈ ಒಂದು ಪ್ರಜಾತಂತ್ರದ ಆಶಯಗಳನ್ನು ಎತ್ತಿ ಹಿಡಿಯಬೇಕೆಂಬ ನಿಟ್ಟಿನಲ್ಲಿ  ಈ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಿದ್ದು ಈ ಎಲ್ಲಾ ಎಬಿವಿಪಿ, ಆರ್.ಎಸ್.ಎಸ್.ಸಂಘಟನೆ ಸೇರಿದಂತೆ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಿ ಮುಕ್ತವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ  ಈ ಕಾಯ್ದೆಯ ನಿಜ ರೂಪ ಏನು   ಎನ್ನುವುದನ್ನು ನಾವೆಲ್ಲರೂ ತಿಳಿದುಕೊಳ್ಳೊಣ ಎಂದು ‌ಹೇಳಿದರು.
ಈ ಸಂಧರ್ಭದಲ್ಲಿ ದತ್ತಾತ್ರೇಯ ಹಿರೇಕೊಟ್ನೆಕಲ್, ವಿಶಾಂತ್ ಮಾನ್ವಿ, ವಿಜಯಕುಮಾರ್ ಮಾಚನೂರು, ಜಬೇರ್ ಖಾನ್ ಮಾನ್ವಿ, ರಹಮಾನ್‌ ಬೇಗ್ ಮಾನ್ವಿ, ನವಾಜ್, ಸಲ್ಮಾನ್ ಫಾರ್ಷಿ‌.ಇನ್ನೂ ಮುಂತಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here