ವಕೀಲರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಾನ್ವಿ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ತಾ. ವಕೀಲರ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಕೀಲರಿಗಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆಶಪ್ಪ ಬಿ.ಸಣ್ಣಮನಿ ಉದ್ಘಾಟಿಸಿ ಮಾತನಾಡಿದರು.

0
166

ವಕೀಲರ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಾನ್ವಿ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ತಾ. ವಕೀಲರ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಕೀಲರಿಗಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆಶಪ್ಪ ಬಿ.ಸಣ್ಣಮನಿ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರು ಕಾರ್ಯಂಗ,ಶಾಸಕಾAಗ ಕಿಂತಲೂ ನ್ಯಾಯಾಂಗದ ಮೇಲೆ ಅಪಾರವಾದ ವಿಶ್ವಸವನ್ನು ಇಟ್ಟುಕೊಂಡಿದ್ದು ವಕೀಲ ವೃತ್ತಿ ನ್ಯಾಯ ಮತ್ತು ನಿಷ್ಟೆಗೆ ವಿಶ್ವದಲ್ಲಿಯೇ ಅತ್ಯಂತ ಹೆಸರು ಪಡೆದಿದ್ದು ಕಕ್ಷಿದಾರರಿಗೆ ಉತ್ತಮ ನ್ಯಾಯದಾನವನ್ನು ಮಾಡುವ ಮೂಲಕ ಅವರ ವಿಶ್ವಾಸವನ್ನು ಉಳಿಸಿಕೊಳ್ಳವ ಅಗತ್ಯವಿದೆ ಇಂದು ವಕೀಲರು ದೇವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ದೇಶದಲ್ಲಿ ಸೂಸುತ್ರವಾದ ಕಾನೂನುಗಳ ಪಾಲನೆ ಮಾಡುವಲ್ಲಿ ಮಹತ್ತಾರವಾದ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಶೆಖರಯ್ಯ ಸ್ವಾಮಿ ಮಾತನಾಡಿ ವಕೀಲರು ಇಂದಿನ ಒತ್ತಾಡದ ಜೀವನದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವಕೀಲರ ಆರೋಗ್ಯ ತಪಾಸಣೆ ಹಾಗೂ ರಕ್ತದ ಒತ್ತಡ,ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಅರ್ಚನಾ ಹನುಮೇಶ, ಡಾ.ಅಂಬಿಕಾ ಮಧುಸೂಧನ ತಾ. ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಕಾರ್ಯದರ್ಶಿ ರವಿಕುಮಾರಪಾಟೀಲ್, ಹಿರಿಯ ನ್ಯಾಯವಾದಿಗಳಾದ ಎ,ಬಿ,ಉಪಳಮಠ,ಗುಮ್ಮ ಬಸವರಾಜ,ಅಮರೇಶಪ್ಪ,ಅಯ್ಯಪ್ಪನಾಯಕ ಸೇರಿದಂತೆ ವಕೀಲರು ಇದ್ದರು.

ಮಾನ್ವಿ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ತಾ. ವಕೀಲರ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಕೀಲರಿಗಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆಶಪ್ಪ ಬಿ.ಸಣ್ಣಮನಿ ಉದ್ಘಾಟಿಸಿ ಮಾತನಾಡಿದರು.

LEAVE A REPLY

Please enter your comment!
Please enter your name here