ರಾಜಕಾರಣಿಗಳೇ ನಾಚುವಂತೆ ನಡೆದ ಶಿಕ್ಷಕರ ಚುನಾವಣೆ: ಶೇ.86.09 ಶಾಂತಿಯುತ ಮತದಾನ

0
186

ಸಿಂಧನೂರು.ಜ.31 – ಸಿಂಧನೂರು ನಗರದ ಪಿಡಬ್ಲೂö್ಯಡಿ ಕ್ಯಾಂಪಿನ ಬಿಆರ್‌ಸಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಸಿಂಧನೂರು ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಶೇ.೮೬.೦೯ರಷ್ಟು ಶಾಂತಿಯುತ ಮತದಾನ ನಡೆದಿದೆ.
ಮತಚಲಾಯಿಸಲು ಒಟ್ಟು ಮೂರು ಬೂತ್‌ಗಳನ್ನು ಮಾಡಲಾಗಿತ್ತು. ೮೩೪ ಜನ ಮತದಾರರ ಪೈಕಿ ೭೧೮ ಶಿಕ್ಷಕರು ತಮ್ಮ ತಮ್ಮ ಬೂತ್‌ಗಳಿಗೆ ತೆರಳಿ ಮತ ಚಲಾವಣೆ ಮಾಡಿದರು. 15 ಸ್ಥಾನಗಳಿಗೆ ಏರ್ಪಟ್ಟಿದ್ದ ಚುನಾವಣೆಗೆ ಒಟ್ಟು 30 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಚುನಾವಣಾಧಿಕಾರಿ ಬಿ.ರವಿಯಪ್ಪ ತಿಳಿಸಿದರು.

ಬೆಳಗ್ಗೆಯಿಂದಲೇ ಆರಂಭವಾದ ಮತದಾನ ಸಂಜೆ ೪ಗಂಟೆಗೆವರೆಗೆ ನಡೆಯಿತು. ಶಿಕ್ಷಕರು ತಮ್ಮ ತಮ್ಮ ಗುರುತಿನ ಚೀಟಿಗಳನ್ನು ಹಿಡಿದುಕೊಂಡು ಬಂದು ಮತಚಲಾಯಿಸಿದರು.

ರಾಜಕೀಯ:
ಚುನಾವಣೆ ನಡೆಸಲು ರಾಜಕಾರಣಿಗಳೇ ಮೇಲು ಎನ್ನುವ ಮಾತಿದೆ. ಆದರೆ ರಾಜಕಾರಣಿಗಳೇ ನಾಚುವಂತೆ ಶಿಕ್ಷಕರು ಚುನಾವಣೆ ನಡೆಸಿದರು. ಬೆಳಿಗ್ಗೆಯಿಂದಲೇ ಶಿಕ್ಷಕರು ತಮ್ಮ ತಮ್ಮ ಶಾಲೆಗೆ ಗುಡ್‌ಬೈ ಹೇಳಿ ರಾಜಕೀಯ ಅಖಾಡಕ್ಕೆ ಇಳಿದಿದ್ದರು. ಅಭ್ಯರ್ಥಿಗಳು ತಾವು ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದರು. ಶಿಕ್ಷಕರು ಮತಚಲಾವಣೆಗೆ ಬಂದಾಗ ಕೈ ಮುಗಿದು ಸರ್ ನಿಮ್ಮ ಮತ ನಮಗೆ ಹಾಕಿ ಎಂದು ಮನವಿ ಮಾಡುತ್ತಿರುವುದು ಶಿಕ್ಷಕರು ಸಹ ರಾಜಕೀಯ ನಾಯಕರಂತೆ ಮತ ಕೇಳುವುದರಲ್ಲಿ ಕಮ್ಮಿ ಏನು ಇಲ್ಲ ಎನ್ನುವುದು ಕಾಣುತ್ತಿತ್ತು. ಶಿಕ್ಷಕರಾದ ವಿ.ಬಸವರಾಜ ಹಾಗೂ ರಾಜೇಂದ್ರಕುಮಾರ್ ಪೆನಾಲ್‌ನ ಮಧ್ಯೆ ಚುನಾವಣೆ ನಡೆಯಿತು. ಚುನಾವಣಾ ಬೂತ್‌ಗಳಿಗೆ ಹೋಗುವ ದಾರಿಯಲ್ಲೇ ಬಹಿರಂಗವಾಗಿ ಎರಡು ಪೆನಾಲ್‌ಗಳ ಬ್ಯಾನರ್‌ಗಳು ಹಾಕಲಾಗಿತ್ತು.
ಗುಡ್‌ಬೈ:
ಶಿಕ್ಷಕರು ಶನಿವಾರ ತಮ್ಮ ತಮ್ಮ ಶಾಲೆಗಳಿಗೆ ಹೋಗಿ ಪಾಠ ಮಾಡದೇ ಚುನಾವಣಾ ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಬೆಳಗ್ಗೆಯಿಂದಲೇ ಚುನಾವಣೆ ಆರಂಭವಾದ ಹಿನ್ನಲೆಯಲ್ಲಿ ಶಿಕ್ಷಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ವಿದ್ಯಾರ್ಥಿಗಳನ್ನೆ ಮರೆತು ಬಿಟ್ಟಿದ್ದರು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ಮೌನ ವಹಿಸಿದ್ದು, ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here