ಕಾನೂನು ಸೇವಾ ಸಮಿತಿಯ ಮೂಲಕ ಉಚಿತವಾಗಿ ಕಾನೂನಿನ ನೆರವನ್ನು ಪಡೆದುಕೊಳ್ಳಿ: ಆಶಪ್ಪ ಸಣ್ಣಮನಿ

ಮಾನ್ವಿ: ತಾಲೂಕಿನ ಪೋತ್ನಾಳ ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಆಶಪ್ಪ ಸಣ್ಣಮನಿ ಮಾತನಾಡಿದರು.

0
63

ಕಾನೂನು ಸೇವಾ ಸಮಿತಿಯ ಮೂಲಕ ಉಚಿತವಾಗಿ ಕಾನೂನಿನ ನೆರವನ್ನು ಪಡೆದುಕೊಳ್ಳಿ: ಆಶಪ್ಪ ಸಣ್ಣಮನಿ

ಮಾನ್ವಿ: ತಾಲೂಕಿನ ಪೋತ್ನಾಳ ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಗ್ರಾಮ ಪಂಚಾಯಿತಿ ಸಂಯುಕ್ತಶ್ರಯದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆಶಪ್ಪ ಸಣ್ಣಮನಿ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಕಾನೂನಿನ ನೆರವು ದೊರೆಯಬೇಕು ಎನ್ನುವ ಉದ್ದೇಶದಿಂದ ಅರ್ಥಿಕ,ಸಮಾಜಿಕ ದುರ್ಬಲವರ್ಗದವರಿಗೆ,ವಿಶೇಷ ಚೇತನರಿಗೆ, ಮಹಿಳೆಯರಿಗೆ ತಾಲೂಕು ಕಾನೂನು ಸೇವಾ ಸಮಿತಿಯ ಮೂಲಕ ಉಚಿತವಾಗಿ ಕಾನೂನಿನ ನೆರವನ್ನು ನೀಡುವ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಪಿ.ಐ. ಪಂಚಮುಖಿ ಮಹದೇವಪ್ಪ ಮಾತನಾಡಿ ಅಪ್ರಾಪ್ತವಯಸ್ಸಿನÀ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಸುವುದನ್ನು ತಪ್ಪಿಸುವ ಉದ್ದೇಶದಿಂದ ಪೋಕ್ಸೋ ಕಾಯಿದೆಯನ್ನು ರೂಪಿಸಲಾಗಿದೆ ಹಾಗೂ ದ್ವಿಚಕ್ರವಾಹನ ಸೇರಿದಂತೆ ಇತರ ವಾಹನÀಗಳನ್ನು ಚಾಲಯಿಸುವವರು ಕಡ್ಡಾಯವಾಗಿ ವಾಹನಚಾಲನ ಪರವಾನಿಗೆಯನ್ನು ಪಡೆಯಬೇಕು ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದುಕೊಂಡು ಕಾನೂನಿನ ಜ್ಞಾನವನ್ನು ತಿಳಿದುಕೊಂಡಲ್ಲಿ ಮಾತ್ರ ಉತ್ತಮವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ತಾ.ಪಂ.ಇ.ಒ.ಅಣ್ಣರಾವ್, ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ಸರಕಾರಿ ಸಹಾಯಕ ಅಭಿಯೋಜಕರಾದ ಅರ್ಚನಾ ಯಾದವ್,ಹಿರಿಯ ನ್ಯಾಯವಾದಿ ವೀರನಗೌಡ, ಗುಮ್ಮಾ ಬಸವರಾಜ,ಬಿ,ಕೆ.ಅಮರೇಶಪ್ಪ, ಮನೋಹರ ವಿಶ್ವಕರ್ಮ, ಯಲ್ಲಪ್ಪ ಹಿರೇಬಾದರದ್ದಿನ್ನಿ, ನಾಗನಗೌಡ, ಹನುಮಂತರಾಯ, ತನುಜಾ, ಮಾಳಿಂಗರಾಯ, ಅಯ್ಯಪ್ಪ, ಅಮರೇಶ ಗುಜ್ಜಾಲ್, ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಶಿವರಾಜ, ಸೇರಿದಂತೆ ಇನ್ನಿತರರು ಇದ್ದರು.

೧೦-ಮಾನ್ವಿ-೧:

ಮಾನ್ವಿ: ತಾಲೂಕಿನ ಪೋತ್ನಾಳ ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಆಶಪ್ಪ ಸಣ್ಣಮನಿ ಮಾತನಾಡಿದರು.

LEAVE A REPLY

Please enter your comment!
Please enter your name here