ಮಾನ್ವಿ ಕೋನಾಪೂರೇಟೆ ರಸ್ತೆ ತಾಯಿಮಕ್ಕಳ ಆಸ್ಪತ್ರೆ ಉದ್ಘಾಟನೆಮಾಡುವಂತೆ ಉಪಮುಖ್ಯಮಂತ್ರಿಗೆ  ಜನಶಕ್ತಿ ಕೇಂದ್ರದಿಂದ ಮನವಿ

0
181
 ಮಾನ್ವಿ. ಅ.19 ಪಟ್ಟಣದಲ್ಲಿ ನಿರ್ಮಿಸಿರುವ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ ಹಾಗೂ   ಆಸ್ಪತ್ರೆ ಹೋಗುವ ರಸ್ತೆಯನ್ನು ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿರುವ ಟೆಂಡರ್ ಪಡೆದ ಗುತ್ತರಾದ ಮತ್ತು ಅಧಿಕಾರಿಗಳ ವಿರುದ್ಧ  ಮೇಲೆ ಕ್ರಮ ತೆಗೆದುಕೊಳ್ಳುವಂತೆ  ಜನಶಕ್ತಿ ಕೇಂದ್ರ ಅಧ್ಯಕ್ಷ ಪ್ರಭುರಾಜ ಕೊಡ್ಲಿ  ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಹಲವಾರು ದಿನಗಳಿಂದ ರಾಯಚೂರು ಜಿಲ್ಲೆಯಲ್ಲಿ ಬಾರಿ ಮಳೆಯಿಂದ ಅನೇಕ ಭಾಗದಲ್ಲಿ ನದಿಯ ಪ್ರವಾಹವಾಗಿ ರೈತರ ಹೊಲಗದ್ದೆಗಳು ಹಾಗೂ ಮನೆಗಳು ನೆಲಸಮವಾಗಿದ್ದು ಅವುಗಳನ್ನು ವೀಕ್ಷಣೆ ಮಾಡುವುದಕ್ಕಾಗಿ ಇಂದು ಮಾನವಿ ಪಟ್ಟಣದ ಮೂಲಕ ಹಾದು ಹೋಗುವಾಗ ಜನಶಕ್ತಿ ಕೇಂದ್ರ ಸಂಘಟನೆಯಿಂದ ಕೋನಾಪುರ ರಸ್ತೆ ನಿರ್ಮಾಣ ಹಾಗೂ  ನಿರ್ಮಾಣವಾಗಿರು ತಾಯಿ ಮಕ್ಕಳ ಆಸ್ಪತ್ರೆಯ ಉದ್ಘಾಟನೆ ಮಾಡಬೇಕು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮೂಲಭೂತ ಸಮಸ್ಯೆ ಗಳನ್ನು ಈಡೇರಿಸುವಂತೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಪ್ರಯೋಜನ ಗೊಂಡೆಲ್ಲ ಎಂದು ಹೇಳಿದರು,
ಸಂಘಟನೆಯ ಬೇಡಿಕೆಗಳಾದ ಪಟ್ಟಣದಲ್ಲಿ ನಿರ್ಮಿಸಿರುವ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡುವಂತೆ ಮತ್ತು ಆಸ್ಪತ್ರೆಗೆ ಹೋಗುವ ರಸ್ತೆಯನ್ನು ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿರುವ ಟೆಂಡರ್ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಹಾಗೂ ನೂತನ ಬಸ್‌ ನಿಲ್ದಾಣ ಮತ್ತು ಮಿನಿ ವಿಧಾನಸೌದ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳಬೇಕು, ತಾಲೂಕು ಪಂಚಾಯಿತಿ ಇ.ಓ ಹುದ್ದೆ ಸರಿದಂತೆ ಇನ್ನಿತರ ಅಧಿಕಾರಿಗಳನ್ನು ನೇಮಕ ಮಾಡಬೇಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ಮಾನವಿ ತಾಲೂಕಿನಲ್ಲಿ ದುರ್ಬಳಕೆ ಆಗುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು,ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಜನಶಕ್ತಿ ಸಂಘಟನೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here