ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ವಶಕ್ಕೆ

0
221

ಸಿರವಾರ.ನ.6- ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಚನ್ನಬಸವ ಗಡ್ಲ್ ಬಿಜೆಪಿ ಬಂಡಾಯ ಅಭ್ಯರ್ಥಿ, ಅವರು ೬ ತಿಂಗಳ ಹಿಂದೆಯೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಅದರಿಂದ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ವಶವಾಗಿದೆ ಎಂದು ಮಾಜಿ ಶಾಸಕ ಜಿ.ಹಂಪಯ್ಯ ಸಾಹುಕಾರ ಹೇಳಿದ್ದರು.
ಪಟ್ಟಣದ ಚುಕ್ಕಿ ತೇಜಸ್ ಮಹಲ್‌ನಲ್ಲಿ ಗುರುವಾರ ಮಾತನಾಡಿದ ಅವರು ಮಿಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಪಕ್ಷದಿಂದ ಸದಸ್ಯರು ಇಲ್ಲದ ಕಾರಣ ಸ್ಪರ್ಧೆ ಮಾಡಿಲ್ಲ, ಹಿಂದೆ ಬಿಜೆಪಿಯಿಂದ ಶರಣಯ್ಯ ಗುಡದಿನ್ನಿ, ಬ್ರೀಜೇಶ ಪಾಟೀಲ್ ಕಾಂಗ್ರೇಸ್ ಸೇರ್ಪಡೆಯಾದಾಗ, ಅವರ ಜೊತೆ ಪ.ಪಂಚಾಯತಿ ೫ ಜನ ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು, ಆದರಿಂದ ಸದಸ್ಯ ನಾಗರಾಜ ಚಿನ್ನಾನ್ ಅವರ ಬದಲಾಗಿ ಚನ್ನಬಸವ ಗಡ್ಲ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ವರಿಷ್ಠರ ನಿರ್ಧಾರದಂತೆ ಮಾಡಲಾಗಿದೆ. ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ವಶವಾಗಲೂ, ೫ ಜನ ಸದಸ್ಯರನ್ನು ಒಂದೇ ಕಡೆ ಹಿಡಿದಿಟ್ಟು ಕೊಳ್ಳಲು ಬ್ರೀಜೇಶ ಪಾಟೀಲ್ ಹಾಗೂ ಶರಣಯ್ಯ ಗುಡದಿನ್ನಿ ಶ್ರಮ ಅಧಿಕವಾಗಿದೆ. ವೀಪ್ ಜಾರಿ ಮಾಡಿ ಸದಸ್ಯರನ್ನು ಅಮಾನತು ಮಾಡುವ ಮೊದಲು ೨೦೧೮ ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿರುವ ಕೃಷ್ಣ ನಾಯಕರನ್ನು ಅಮಾನತು ಮಾಡಿ ಶಿಸ್ತಿನ ಪಕ್ಷವೆಂದು ತೊರಿಸಲಿ ಎಂದು ಮಾಜಿ ಶಾಸಕರು ಸವಾಲು ಹಾಕಿದರು.
ಚುಕ್ಕಿ ಸೂಗಪ್ಪ ಸಾಹುಕಾರ, ಬ್ರೀಜೇಶ ಪಾಟೀಲ್, ಶರಣಯ್ಯ ಗುಡದಿನ್ನಿ, ಬಿಕೆ ಅಮರೇಶಪ್ಪ, ರಮೇಶ ದರ್ಶನಕರ್, ತಾ.ಪಂ ಮಾಜಿ ಅಧ್ಯಕ್ಷ ದಾನನಗೌಡ, ಎಂ.ಶ್ರೀನಿವಾಸ್, ಚುಕ್ಕಿ ಶಿವಕುಮಾರ, ಅರಕೇರಿ ಶಿವಶರಣಸಾಹುಕಾರ, ಉಮಾಶಂಕರ, ಹನುಮಂತ್ರಾಯ ಆಕಳಕುಂಪೆ, ಚಂದ್ರು ಕಳಸ, ಚಂದ್ರಶೇಖರ್, ಹಸೇನ್ ಅಲಿ, ಮೌಲಾಸಾಬ್ ವರ್ಚಸ್, ಮಹಿಬೂಬ್ ಸಾಬ್, ಬಸವರಾಜ ಗಡ್ಲ, ಉಪಾದ್ಯಕ್ಷ ಚನ್ನಬಸವಗಡ್ಲ, ಸದಸ್ಯರಾದ ನಾಗರಾಜ ಚಿನ್ನಾನ್, ಚನ್ನಪ್ಪ ನಾಗೋಲಿ, ಖಾಸಿಂಮೋತಿ, ದೇವರಾಜಸುಂಕೇಶ್ವರಹಾಳ, ರಾಜಮಹ್ಮದ್, ತಿಪ್ಪಣ್ಣ,ತಿಮ್ಮಣ್ಣ, ಎನ್.ಮಲ್ಲಪ್ಪ, ಮಾರ್ಕಪ್ಪ ಸೇರಿದಂತೆ ಇನ್ನಿತರರು ಇದ್ದರು.

ಉಮಹಲ್‌ನಲ್ಲಿ ಗುರುವಾರ ಮಾತನಾಡಿದ ಅವರು ಮಿಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ನಮ್ಮ ಪಕ್ಷದಿಂದ ಸದಸ್ಯರು ಇಲ್ಲದ ಕಾರಣ ಸ್ಪರ್ಧೆ ಮಾಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ವಶಕ್ಕೆ

LEAVE A REPLY

Please enter your comment!
Please enter your name here