ವಿದ್ಯಾರ್ಥಿಗಳು ಕೊರತೆಗಳ ಮದ್ಯೆಯೇ ಪುಟಿದೇಳಬೇಕು : ವೀರೇಶಸೌದ್ರಿ ; ಮೊರಾರ್ಜಿ ದೇಸಾಯಿ (ಹಿಂ.ವ) ವಸತಿ ಶಾಲೆಯಲ್ಲಿ ಮೊರಾರ್ಜಿ ದೇಸಾಯಿಯವರ ಜನ್ಮ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

0
201

ಮಸ್ಕಿ. ಮಾ,03 : ವಿದ್ಯಾರ್ಥಿ ಜೀವನದಲ್ಲಿ ಬಡತನ, ಸಿರಿತವೆಂಬುದು ಬರದೇ, ಕೊರತೆಗಳ ಮದ್ಯೆಯೇ ಉಜ್ವಲ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಜೆಆರ್‌ಎಂ ಶಾಲೆಯ ಕಾರ್ಯದರ್ಶಿ ವೀರೇಶ ಸೌದ್ರಿ ಶನಿವಾರ ಹೇಳಿದರು.

ಪಟ್ಟಣದ 15ನೇ ವಾರ್ಡ ಪಿಂಜಾರ ಓಣಿಯಲ್ಲಿರುವ ಮೊರಾರ್ಜಿ ದೇಸಾಯಿ (ಹಿಂ.ವ) ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮೊರಾರ್ಜಿ ದೇಸಾಯಿಯವರ ಜನ್ಮ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನೂಕೂಲವಾಗಲೆಂದು ಸರಕಾರ ಮೊರಾರ್ಜಿ ದೇಸಾಯಿಯವರ ಹೆಸರಿನಲ್ಲಿ ವಸತಿ ಶಾಲೆಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ಉನ್ನತಸ್ಥಾನಮಾನ ಪಡೆದುಕೊಳ್ಳುವ ಗುರಿ ಹೊಂದಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಉನ್ನತ ಸ್ಥಾನಕ್ಕೆರಿವರು ಹಿಂದುಳಿದ ವರ್ಗದವೇ ಆಗಿದ್ದಾರೆ. ವಸತಿ ಶಾಲೆಯಲ್ಲಿ ಮಕ್ಕಳಿಗೆ ಸಾಕಷ್ಟು ಕೊರತೆಗಳಿದ್ದರೂ ಇಲ್ಲಿನ ವಿದ್ಯಾರ್ಥಿಗಳು ಕಳೆದ ಹಲವು ವರ್ಷಗಳಿಂದ ಹೆಚ್ಚಿನ ಉತ್ತಮ ಅಂಕಗಳನ್ನುಗಳಿಸುತ್ತಾ ಬಂದಿದ್ದಾರೆ. ಈ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಹ ಉತ್ತಮ ಅಂಕಗಳನ್ನು ಪಡೆದುಕೊಂಡು ಶಾಲೆ ಹಾಗೂ ಪೊಷಕರ ಪ್ರೀತಿಗೆ ಪಾತ್ರರಾಗಬೇಕು. ಅಲ್ಲದೇ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಿಸ್ತನ್ನು ಮೈಗೂಡಿಸೊಳ್ಳಬೇಕು ಎಂದರು. ನಂತರ ಪ್ರಭಾರಿ ಪ್ರಾಂಶುಪಾಲ ಸುಭಾಷಚಂದ್ರ ಮಾತನಾಡಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರ ಎಲ್ಲಾ ರೀತಿಯಿಂದಲೂ ಸೌಕಾರ್ಯಗಳನ್ನು ಒದಗಿಸುತ್ತಿದ್ದು, ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕರಾದ ಚಂದ್ರಪ್ಪ ಟಿ.ಆರ್. ಅಖಂಡಯ್ಯ ಹಿರೇಮಠ, ಸಿಕಿಂದರ್‌ಷಾ, ಪವನಕುಮಾರ್, ಚಾಂದ್‌ಪಾಷ ದಿದ್ದಿಗಿ, ಮಾನಪ್ಪ ಮಾತನಾಡಿದರು.

ನೆನಪಿನ ಕಾಣಿಕೆ: ಹತ್ತನೆ ತರಗತಿ ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಾಕ್ತಪಡಿಸಿ ನಂತರ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಂದ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಗಳು ಜರುಗಿದವು.
ಪ್ರಭಾರಿ ನಿಲಯಪಾಲಕಿ ಶರೀಪಾ ಬೇಗಂ, ಅಂಜಿನೇಯ, ಸಿಬ್ಬಂದಿಗಳಾದ ರಂಗನಾಥ, ಸೋಮಣ್ಣ ಮುರಾರಿ ಸೇರಿದಂತೆ ಇನ್ನಿತರರಿದ್ದರು.

 

LEAVE A REPLY

Please enter your comment!
Please enter your name here