ಸಂಗೀತ ವಿದ್ವಾನ್ ಶ್ರೀ ಅಂಬಯ್ಯ ನುಲಿ ಇವರಿಗೆ ಆತ್ಮೀಯವಾಗಿ ಸನ್ಮಾನ.

0
108

ಸಂಗೀತ ವಿದ್ವಾನ್ ಶ್ರೀ ಅಂಬಯ್ಯ ನುಲಿ ಇವರಿಗೆ ಆತ್ಮೀಯವಾಗಿ ಸನ್ಮಾನ.

ಮಾನವಿ.14 -11- 2020  ಮಾನ್ವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಗೀತ ವಿದ್ವಾನ್ ಶ್ರೀ ಅಂಬಯ್ಯ ನುಲಿ ಇವರಿಗೆ ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮ ದಲ್ಲಿ  ಮಾನವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ ಅಧ್ಯಕ್ಷ ಶ್ರೀ ಶರ್ಫುದ್ದೀನ್ ಪೊತ್ನಾಳ ಮಾತನಾಡುತ್ತಾ ನಮ್ಮ ಸ್ನೇಹಿತರಾದ ಸಂಗೀತ ವಿದ್ವಾನ್ ಶ್ರೀ ಅಂಬಯ್ಯ ನುಲಿ ಇವರಿಗೆ ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ದೊರಕಿರುವುದು ಸಂತೋಷದ ವಿಷಯ. ವಿವಿಧ ಖಾಸಗಿ ಶಾಲೆಗಳು ಸುಮಾರು ವರ್ಷ ಗಳಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಗೀತ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಈ ಭಾಗದ ಪ್ರತಿಭಾವಂತರರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿರುವುದು ಎಲ್ಲರಿಗೂ ಸಂತೋಷ ತಂದು ಕೊಟ್ಟಿದೆ ಬಹಳಷ್ಟು ಜನ ಪ್ರಶಸ್ತಿಯನ್ನು ಪಡೆಯಲು ಏನೇನೋ ಕಸರತ್ತು ಮಾಡುತ್ತಾರೆ ಅಡ್ಡ ದಾರಿ ಹಿಡಿದು ಪ್ರಶಸ್ತಿ ಪಡೆದ ಉದಾಹರಣೆಗಳಿವೆ ಆದರೆ ಅಂಬಯ್ಯ ನುಲಿ ಯವರಿಗೆ  ಸರ್ಕಾರ ಅವರ ಪ್ರತಿಭೆಯನ್ನ ಮತ್ತು ಅವರ ಸೇವೆಯನ್ನ ಮನಗಂಡು ನೈಜವಾಗಿ ಸೂಕ್ತ ಪ್ರಶಸ್ತಿ ನೀಡಿರುವುದು ಉತ್ತಮ ಕಾರ್ಯ. ಇವರಿಗೆ ಸಿಕ್ಕಿರುವ ಪ್ರಶಸ್ತಿ ಈ ಭಾಗದ ಜನರಿಗೆ ಮಾದರಿ ಜೊತೆಗೆ ನಮ್ಮ ಭಾಗದ ಹಣೆಪಟ್ಟಿ ಗೆ ಅಂಟಿಕೊಂಡಿರುವ ಹಿಂದುಳಿದ ಪ್ರದೇಶ ಎಂಬ ಕಳಂಕವನ್ನು ಹೊಗಲಾಡಿಸವ ಹೆಮ್ಮೆಯ ಕೆಲಸ ಎಂದು ಹೇಳಿದರು.

ಈ ಸಂದರ್ಭದಲ್ಲಿ ಒಕ್ಕೂಟ ದ ಪ್ರಧಾನ ಕಾರ್ಯದರ್ಶಿ ರಾಜು ತಾಳಿ ಕೊಟಿ, ಖಜಾಂಚಿ ಎಮ್ ಎ ಎಚ್ ಮುಕೀಮ್, ಪದಾಧಿಕಾರಿಗಳಾದ ಬಿ ವಿ ರೆಡ್ಡಿ. ಕುಮಾರಿ ಸರಿತಾ ಜೈನ್, ನರಸಿಂಹ,  ರಫೀಕ್, ಆಂಜನೇಯ ದಡಿ, ಭೀಮರಾವ್ ಮತ್ತು ಇತರೇ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here