ಮಕ್ಕಳ ಕಲಿಕೆಗೆ ಪ್ರೊತ್ಸಾಹ ಅಗತ್ಯ- ರಾಜಾ ವೆಂಕಟಪ್ಪ ನಾಯಕ್ ಶಾಸಕರು

0
227

ಮಾನ್ವಿ : ಮಕ್ಕಳ ಕಲಿಕೆಗೆ ಶಿಕ್ಷಕರ ಪೋತ್ಸಾಹ ಅಗತ್ಯವಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಮಂಗಳವಾರ ಪಟ್ಟಣದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ ನೂತನ ೭ ಕೂಠಡಿಗಳ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ. ಶಿಕ್ಷಕರು ಮಕ್ಕಳಗೆ ಉತ್ತಮ ಪಠ್ಯ ಭೋಧನೆ ಮಾಡುವುದರ ಮಕ್ಕಳ ಉನ್ನತ ಕಲಿಕೆಗೆ ಪೋತ್ಸಾಹ ನೀಡಬೇಕಾಗಿದೆ ಈಗಾಗಲೇ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪಲಿತಾಂಶದಲ್ಲಿ ಮಕ್ಕಳು ಹೆಚ್ಚಿನ ಅಂಕಗಳು ಗಳಿಸುವುದರ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.
ತಾಲೂಕಿನ್ಯಾದಂತ ವಿವಿಧ ಯೋಜನೆಗಳ ಅಡಿಯಲ್ಲಿ ತಾಲೂಕಿನ ಶಾಲೆಗಳ ಅಭಿವೃದ್ದಿ, .ಕಟ್ಟಡ, ಕೌಂಪೌAಡ, ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿ ಚಾಲನೆ ನೀಡಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಗೆ ೨೦೧೯-೨೦ ನೇ ಸಾಲಿನ ಕೆಕೆಅರ್‌ಡಿಬಿ ಯೋಜನೆ ಅಡಿಯಲ್ಲಿ ಸುಮಾರು ೭೧ ಲಕ್ಷ ವೆಚ್ಚದ ನೂತನ ೭ ಕೂಠಡಿ ಚಾಲನೆ ನೀಡಲಾಗಿದ್ದು. ಉಳಿದ ಕಾಲೇಜು ಕಟ್ಟಡ ಕಾಮಗಾರಿಯು ವಿಳಂಬವಾಗಿದ್ದರಿAದ ಸರ್ಕಾರಕ್ಕೆ ಒತ್ತಾಯ ಮಾಡಿ ೬೮ ಲಕ್ಷ ವೆಚ್ಚವನ್ನು ಕಾಮಗಾರಿ ಕೈಗೆತ್ತಿಕೂಳ್ಳಲಾಗಿದೆ ಎಂದರು.
ಶಾಸಕರ ಅನುದಾನದಲ್ಲಿ ಶಾಲೆಯ ವಿವಿಧ ಮೂಲಭೂತ ಸೌಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಕಾಮಗಾರಿಗಳ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ,ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಶೈಲ ಗೌಡ, ಸುರೇಶ್ ಕುರ್ಡಿ ರಾಜ್ಯ ಜೆಡಿಎಸ್ ರಾಜ್ಯ ಯುವ ಮುಂಖಡರಾದ ರಾಜಾ ರಾಮಚಂದ್ರ ನಾಯಕ, ವೆಂಕಟ ನರಸಿಂಹ ಗೌಡ ವಕೀಲ, ಪುರಸಭೆಯ ಸದ್ಯಸರಾದ ಶರಣಪ್ಪ ಮೇದ್, ಭಾಷ ಸಾಬ್,ಜೆಡಿಎಸ್ ಮುಖಂಡರಾದ ಶಿವರಾಜ ನಾಯಕ, ಹನುಮಂತ ಭೋವಿ, ಸಬೀರ್ ಸಾಬ್,ನಾಗರಾಜ ಭೋಗಾವತಿ, ಈರಣ್ಣ ಪೋತ್ನಾಳ, ಗೋಪಾಲ ನಾಯಕ ಹರವಿ,ಮೌಲ ಸಾಬ್,ಎಸ್ ಯಕೋಬ, ಜೆ ಎಚ್ ದೇವರಾಜ, ಸುಬಾನ್ ಬೇಗ್, ಫ್ರೂಟ್ ಖಾಜಾ, ಗುರುರಾಜ ಕುಲಕರ್ಣಿ, ಹನುಮೇಶ ನಾಯಕ,ಶ್ರೀನಿವಾಸ ನಾಯಕ ಮಾನವಿ, ನಾಗರಾಜ ನಾಯಕ, ಮೈಬೂಬ್ ಖುರೀಷ ಕುರ್ಡಿ ಶಿಕ್ಷಕರಾದ ಹಂಪಣ್ಣ ಚಡೋರ್,ಸಿದಯ್ಯ ಹಿರೇಮಠ, ರಾಮಣ್ಣ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು

LEAVE A REPLY

Please enter your comment!
Please enter your name here