ಬೇಕಿದ್ದರೆ ನನ್ನ ಮಗನನ್ನು ಜೈಲಿನಲ್ಲೇ ಇಟ್ಟು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಆಕ್ರೋಶ

0
210

ಬೆಂಗಳೂರು, ಅ.5- ಸುಮ್ಮನೇ ನನ್ನ ಹೊಟ್ಟೆ ಯಾಕೆ ಉರಿಸುತ್ತಿರಾ ಏನಾದರೂ ಮಾಡಿಕೊಳ್ಳಲಿ. ಬೇಕಿದ್ದರೆ ನನ್ನ ಮಗನನ್ನು ಜೈಲಿನಲ್ಲೇ ಇಟ್ಟು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ತಮ್ಮ ಆಕ್ರೋಶವನ್ನು ಹೊರ ಹಾಕಿದರು. ನಾನು ಅವಿದ್ಯಾವಂತೆ ಮತನಾಡಲು ಬರುವುದಿಲ್ಲ. ಸದ್ಯಕ್ಕೆ ನನಗೆ ಹುಷಾರಿಲ್ಲ. ನಾನೇನು ಮಾತನಾಡುವುದಿಲ್ಲ.

ಹುಷಾರಾದ ಮೇಲೆ ಮಾತನಾಡುತ್ತೇನೆ ಎಂದಿದ್ದಾರೆ, ಸಿಬಿಐನವರು ನಮ್ಮ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಏನು ಬೇಕಾದರೂ ಮಾಡಿಕೊಳ್ಳಲಿ. ಬೀರು ಬೀಗಗಳನ್ನು ಹೊಡೆದು ಅಲ್ಲೇನಿದೆ ಎಂದು ನೋಡಿಕೊಳ್ಳಲಿ. ಮತ್ತೆ ಅವು ಹೇಗಿದ್ದವೋ ಹಾಗೆ ಸರಿ ಮಾಡಿಸಿಕೊಡಲಿ. ನಾನು ಯಾವುದನ್ನು ಬೇಡ ಎನ್ನಲ್ಲ ಎಂದರು.

ಅವರು ಸಾಯುವವರೆಗೂ ನಮಗೆ ನೆಮ್ಮದಿ ಇಲ್ಲ. ಅಕಾರಿಗಳಂತೆ ಅಕಾರಿಗಳು ಲಂಚ ಲಂಚ ಎಂದು ಸಾಯುತ್ತಾರೆ. ಈ ಮೊದಲು ನನ್ನ ಮಗನನ್ನು ಜೈಲಿಗೆ ಕಳುಹಿಸಿದ್ದರು. ಈಗಲೂ ಜೈಲಿಗೆ ಕಳುಹಿಸಲಿ. ನಾನೇ ಹೇಳಿ ಕಳುಹಿಸುತ್ತೇನೆ ಜೈಲಿಗೆ ಹೋಗಪ್ಪ ಎಂದು.

ಸಂಸದ ಡಿ.ಕೆ.ಸುರೇಶ್ ಮನೆಯ ಮೇಲೂ ದಾಳಿಯಾಗಿದ್ದರೇ ಅವನನ್ನೂ ಬಂಸಿ ಕರೆದುಕೊಂಡು ಹೋಗಲಿ. ನಾವು ಹೊಲದಲ್ಲಿ ದುಡಿದುಕೊಂಡು ತಿನ್ನುತ್ತೇವೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು ಗೌರಮ್ಮ ತಮ್ಮ ನಿವಾಸಕ್ಕೆ ಬಂದ ಸಿಬಿಐ ಅಕಾರಿಗಳನ್ನು ಗೌರಮ್ಮ ಅವರು ಟೀ ಕೊಟ್ಟು ಸ್ವಾಗತಿಸಿದ್ದಾರೆ. ದೊಡ್ಡಹಾಲನಹಳ್ಳಿ ನಿವಾಸದ ಮೇಲೂ ದಾಳಿ ನಡೆಸಿದ ಸಿಬಿಐ ಅಕಾರಿಗಳು ಕೆಲ ದಾಖಲೆಗಳನ್ನು ಪರಿಶೀಲನೆ ನಡೆಸಿ ನಂತರ ಕೊಡಿಹಳ್ಳಿ ನಿವಾಸಕ್ಕೆ ಬಂದು ಗೌರಮ್ಮ ಅವರ ಸಮ್ಮತಿ ಪಡೆದು ಶೋಧನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here