ಅತ್ಯಾಚಾರವೂ ಆಗಿಲ್ಲ, ಮರ್ಯಾದಾ ಹತ್ಯೆಯೂ ಅಲ್ಲ, ಇದು ಬೆತ್ತಲೆ ಜಗತ್ತು..!

0
148

ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ,ಇಡೀ ದೇಶದ ತುಂಬಾ ಇದ್ದಾರೆ ಚರ್ಚೆ. ಇದು ಹತ್ಯಾಕಾಂಡವೂ ಅಲ್ಲ. ಮರ್ಯಾದ ಹತ್ಯೆ ಸಹ ಅಲ್ಲ, ಅತ್ಯಾಚಾರ ಆಗಿಲ್ಲ. ರೇಪ್ ಆಗಿಲ್ಲವೆಂದಾದರೆ ಸಾಮೂಹಿಕ ರೇಪ್ ಮಾಡುವ ಪ್ರಶ್ನೆಯಂತೂ ಉದ್ಭವವಾಗುವ ಪ್ರಮೇಯವೇ ಇಲ್ಲ.

ಆವೇಶದಲ್ಲಿ ಮನೀಷಳನ್ನು ಥಳಿಸಿದರಿಂದ ನಡೆದ ದೊಡ್ಡ ಅನಾಹುತ ಮತ್ತು ಆ ಯುವತಿಯ ದುರಂತ. ಈ ದುರಂತದಲ್ಲಿ ನತದೃಷ್ಟೆ ಮನೀಷ ಸಾವನಪ್ಪಿರೋದು.ಈ ದೌರ್ಭಾಗ್ಯವಂತ ಹುಡುಗಿಯ ಸಾವಿಗೆ ಆಕೆಯ ಕುಟುಂಬ ಸದಸ್ಯರೇ ಕಾರಣ. ಮನೀಷಳ ಅಣ್ಣ ಮತ್ತು ಅವರಮ್ಮ ಈ ಕುರಿತು ವಿಸ್ತೃತ ವರದಿ.

ಅಸಲಿ ವಿಷಯಕ್ಕೆ ಬರೋಣ,ಇದೊಂದು ಪ್ರೇಮ್ ಕಹಾನಿ, ಸಂದೀಪ್ ಉಚ್ಚ ಜಾತಿಯ ಯುವಕ ಮತ್ತು ಮೃತ ಯುವತಿ ಮನೀಷಳ ನಡುವೆ ಲಾಕ್ ಡೌನ್ ಪ್ರಯುಕ್ತ ವಿರಳ ಜನ ಸಂಖ್ಯೆ ಇರುವುದರಿಂದ ಪ್ರೀತಿ-ಪ್ರೇಮ ಶುರುವಾಗಿರುತ್ತದೆ. ಆಗಾಗ ಭೇಟಿಯಾಗುತ್ತಿರುತ್ತಾರೆ. ಇಷ್ಕï ಜುನೂನ್ ಜಬ್ ಹದ್ ಸೇ ಬಡ್ ಜಾಯೇ.

ಹಸತೇ ಹಸತೇ ಆಶಿಕ್ ಶೂಲಿ ಚಡ್ ಜಾಯೇ. ಏನ್ ಬೇಕಾದ್ರೂ ಮಾಡಿ ಪ್ರೀತಿಗೆ ಅಡ್ಡ ಬರಬೇಡಿ.ಇದು ಸಂದೀಪ್ ಮತ್ತು ಮನೀಷಳ ಇಬ್ಬರ ನಿಲುವಾಗಿರುತ್ತದೆ. ಜಾತಿ ಧರ್ಮದ ಭೇದವಿಲ್ಲದೆ ಪರಸ್ಪರ ಪ್ರೀತಿಸುವ ಪ್ರತಿ ಪ್ರೇಮಿಗಳು ಹಾಗೆ ಇರಬೇಕು. ಕುಟುಂಬದವರೂ ಸಹ ಈ ನಿಷ್ಕಲ್ಮಷ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಬೇಕು ಅರ್ಥ ಮಾಡಿಕೊಂಡಿದ್ದರೆ ಪ್ರಾಯಶಃ ಈ ದುರಂತ ಘಟನೆ ಸಂಭವಿಸುತ್ತಿರಲಿಲ್ಲ.

ಸಂದೀಪ್ ಮತ್ತು ಮನೀಷ ನಡುವೆ ಸಹಜ ರೀತಿಯಲ್ಲಿ ಮೇ ತಿಂಗಳಲ್ಲಿ ಪ್ರೀತಿ ಪರಸ್ಪರ ಪ್ರೀತಿಸಲು ಶುರು ಮಾಡುತ್ತಾರೆ. ಇಬ್ಬರೂ ಜುಲೈ ತಿಂಗಳಲ್ಲಿ ಗಾಢವಾಗಿ ಬಿಟ್ಟಿರಲಾಗದಷ್ಟು ಒಬ್ಬರೊನ್ನೊಬ್ಬರು ಹಚ್ಚಿಕೊಳ್ಳುತ್ತಾರೆ. ಆದ ಕಾರಣ ಠಾಕೂರ್ ಸಂದೀಪ್ ಯುವತಿಗೆ ಒಂದು ಮೊಬೈಲ್ ಫೋನ್ ಕೊಡಿಸುತ್ತಾನೆ.ಆಗಲೇ ನೋಡಿ ಇವರಿಬ್ಬರ ಆಕಾಶದೆತ್ತರಕ್ಕೆ ಬೆಳೆಯುತ್ತದೆ.

ಗಂಟೆಗಟ್ಟಲೇ ಇಬ್ಬರು ಫೋನ್ ನಲ್ಲೆ ಹರಟುತ್ತಾರೆ. ದೈನಂದಿನ ದಿನಚರಿಯ ಬಗ್ಗೆ ಪ್ರತಿ ವಿಷಯಗಳನ್ನು ಮುಗ್ದ ಪ್ರೇಮಿಗಳು ಪರಸ್ಪರ ಹಂಚಿಕೊಳ್ಳುತ್ತಾರೆ ನಿವೇದನೆ ಮಾಡಿಕೊಳ್ಳುತ್ತಾರೆ. ಬದುಕಿನ ಬಗ್ಗೆ ಹೊಸ ಹೊಸ ಕನಸುಗಳನ್ನು ಹೆಣೆಯುತ್ತಾರೆ. ದಿನ ಕಳೆದಂತೆ ಇವರಿಬ್ಬರ ಪ್ರೀತಿಯ ವಿಚಾರ ಎರಡೂ ಕುಟುಂಬದವರಿಗೆ ಗೊತ್ತಾಗುತ್ತದೆ.

ಮೊದಲೇ ಎರಡೂ ಕುಟುಂಬಗಳಲ್ಲಿ ವಿರೋಧ ಇರುತ್ತದೆ. ಜಗಳವೂ ಆಗಿರುತ್ತದೆ.ಆಗಲೇ ನೋಡಿ ಮನೀಷ ಹತ್ತಿರವಿದ್ದ ಮೊಬೈಲ್ ಫೋನ್ ಕಸಿದುಕೊಂಡು, ಅಣ್ಣ ತಾಯಿ ಫೋನ್‍ನನ್ನು ಜಜ್ಜಿ ಹಾಕುತ್ತಾರೆ. ಇದರಿಂದ ಮನೀಷ ಬಹಳ ನೊಂದಿರುತ್ತಾಳೆ. ಇಷ್ಟಕ್ಕೆ ನಿಲ್ಲದ ಇವರ ವಿಕೃತ ಮನಸ್ಥಿತಿ ಮನೀಷಳಿಗೆ ಪ್ರತಿ ಕ್ಷಣ ಮನೆಯಲ್ಲಿ ಕಾಟ ಕೊಡುತ್ತಿರುತ್ತಾರೆ.

ಇನ್ನೊಂದು ಕಡೆ ಯುವಕ ಸಂದೀಪನನ್ನು ಅವರ ಕುಟುಂಬದವರು ದೆಹಲಿಯಲ್ಲಿರುವ ಚಿಕ್ಕಪ್ಪನ ಹತ್ತಿರಕ್ಕೆ ಕಳಿಸಿಕೊಡುತ್ತಾರೆ. ಅವನು ಅಲ್ಲಿ ಎರಡು ತಿಂಗಳು ಇದ್ದು ಸೆ.10ಕ್ಕೆ ಮತ್ತೆ ಬುಲ್ಗಡಿಗೆ ವಾಪಸ್ ಬರುತ್ತಾನೆ. ಅವನ ಹುಟ್ಟೂರಿಗೆ ಬರಲು ಅವನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೆಹಲಿಯಿಂದ ಬರುವಾಗ ಇನ್ನೊಂದು ಹೊಸ ಮೊಬೈಲ್ ತಂದಿರುತ್ತಾನೆ.

ಅವಳು ತಾಯಿಯ ಜೊತೆ ಹುಲ್ಲು ಕೊಯ್ಕೊಂಡು ಬರಲು ಹೊಲಕ್ಕೆ ಹೋಗುವುದನ್ನು ಸಂದೀಪ್ ನೋಡಿರುತ್ತಾನೆ. ಮಾಮೂಲಿ ಲವರ್ಸ್‍ಗೆ ಒಂದು ಫೇವರಿಟ್ ಫಿಕ್ಸೆಡ್ ಸ್ಪಾಟ್ ಅಂತ ಮಾಡಿಕೊಂಡಿರುತ್ತಾರೆ. ಯುವತಿ ತಾಯಿಯನ್ನು ಒಂದು ಕಡೆ ಬಿಟ್ಟು ಕೊಂಚ ದೂರಕ್ಕೆ ಹೋಗಿರುತ್ತಾಳೆ. ಪ್ರಿಯಕರ ಬರುತ್ತಾನೆಂದು, ಸಂದೀಪ್ ಬಂದಿರುತ್ತಾನೆ.

ಯುವತಿಗಾಗಿ ತಂದಿದ್ದ ಮೊಬೈಲ್ ಪೋನ್ ಕೊಡುತ್ತಾನೆ. ತಾಯಿಗೆ ಮಗಳು ಕಾಣದಿರುವದನ್ನು ನೋಡಿ ಅನುಮಾನಗೊಂಡು ಹೊಲದ ಇನ್ನೊಂದು ಕಡೆ ಹೋಗಿ ನೋಡಿದಾಗ ಇಬ್ಬರೂ ಅಲ್ಲಿರುತ್ತಾರೆ, ಹುಡುಗಿಯ ಅಣ್ಣನನ್ನು ತಾಯಿ ಕರೆಯುತ್ತಾಳೆ. ಇಬ್ಬರೂ ಸೇರಿಕೊಂಡು ಸಂದೀಪ್ ಜೊತೆಗೆ ಗಲಾಟೆ ಮಾಡುತ್ತಾರೆ.

ಸಂದೀಪನನ್ನು ಹೊಡೆಯಲು ಹೋಗುತ್ತಾನೆ ಹುಡುಗಿ ಅಣ್ಣ . ತಳ್ಳಾಟ ನೂಕಾಟದ ನಡುವೆ ಸಂದೀಪ್ ಅಲ್ಲಿಂದ ಹೊರಟು ಹೋಗುತ್ತಾನೆ. ಮತ್ತೊಂದು ಕಡೆ ಮನೀಷಳ ಅಣ್ಣ ಅಮ್ಮ ಅವಳ ಕೆನ್ನೆಗೆ ಬಾರಿಸಿ ದೆಹಲಿಯಿಂದ ಸಂದೀಪ್ ತಂದುಕೊಟ್ಟಿದ್ದ ಹೊಸ ಮೊಬೈಲ್ ಫೆÇೀನ್‍ನನ್ನು ಕಸಿದುಕೊಂಡು ಜಜ್ಜಿ ಹಾಕುತ್ತಾರೆ.

ಅಷ್ಟಕ್ಕೆ ಸುಮ್ಮನಾಗದ ಅವಳ ಅಣ್ಣ ಹೊಲದ ಮೆರೆಯಲ್ಲಿ ನೆಟ್ಟಿದ್ದ ಬೇಲಿಯ ಕಟ್ಟಿಗೆಯ ಕಂಬ ಕಿತ್ತುಕೊಂಡು ಯುವತಿಯನ್ನು ಮನಸೋ ಇಚ್ಛೆ ಥಳಿಸುತ್ತಾನೆ. ತುಂಬಾ ಬಲವಾಗಿ ಹೊಡೆದಿದ್ದರಿಂದ ಮನೀಷಳ ಸ್ಪೈನಲ್ ಕಾರ್ಡ್ ಮೂಳೆ ಮುರಿಯುತ್ತದೆ, ಸ್ಪೋನಡಿಲಿಸಿಸ್ ಸಮಸ್ಯೆ ಸೃಷ್ಟಿ ಸುವ ನರ್ವ್‍ಗೆ ಹೊಡೆತ ಬಿದ್ದಿದ್ದರಿಂದ ಪ್ರಜ್ಞೆ ತಪ್ಪುತ್ತಾಳೆ.

ತಾಯಿ ಅಣ್ಣ ಯುವತಿಯನ್ನು ಎತ್ತಿಕೊಂಡು ಮನೆಗೆ ಹೋಗಿ ಮಲಗಿಸಿ, ಅಣ್ಣ ಸಂದೀಪ ಯುವತಿಯ ಪ್ರಿಯಕರನ ಮೇಲೆ ಒಂದು ಕಿ.ಮೀ ದೂರದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾನೆ. ದೂರಿನಲ್ಲಿ ಹೊಡೆದಾಟ ಆಯಿತು, ಆಮೇಲೆ ಅವನು ಹೊರಟು ಹೋದ ಎಂದು ದೂರಲ್ಲಿ ನಮೂದಿಸಿದ್ದಾನೆ. ಜೊತೆಗೆ ದಲಿತ ದೌರ್ಜನ್ಯ ಬಗ್ಗೆ ದೂರಲ್ಲಿ ಬರೆದಿದ್ದಾನೆ. ನಿಮಗೆ ಗೊತ್ತಿರಲಿ ದೂರಿನಲ್ಲಿ ಅತ್ಯಾಚಾರದ ಬಗ್ಗೆ ಒಂದೇ ಒಂದು ಚಕಾರವಿಲ್ಲ.

ತುಂಬಾ ಜರ್ಝರಿತವಾಗಿ ದೈಹಿಕ ಹಲ್ಲೆಗೊಳಗಾಗಿದ್ದ ಮನೀಷಳಿಗೆ ಚಿಕಿತ್ಸೆ ಕೊಡಿಸಲು ತಡ ಮಾಡಿದ್ದು ಆಕೆಯ ಮನೆಯವರೇ. ಜಿಲ್ಲಾ ಆಸ್ಪತ್ರೆಯಿಂದ 19/9ಕ್ಕೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸೇರಿಸುತ್ತಾರೆ. ಮನೀಷಳ ಭಾವಚಿತ್ರದಲ್ಲಿ ಕಾಲರ್ ಹಾಕಿದ್ದನ್ನು ಕಾಣಬಹುದು. ಹತ್ರಾಸ್ ಪ್ರಾಥಮಿಕ ವೈದ್ಯಕೀಯ ವರದಿ ಪ್ರಕಾರ ಸ್ಪೈನಲ್ ಕಾರ್ಡ್ ನರ್ವ್ ಬ್ರೇಕೇಜ್‍ಯಿಂದ ಸೀರಿಯಸ್ ಸಮಸ್ಯೆ ಆಗಿದೆ ಎಂದು ರಿಪೋರ್ಟ್ ಹಾಕುತ್ತಾರೆ.

ಈ ರಿಪೋರ್ಟ್‍ನಲ್ಲಿ ಎಲ್ಲೂ ಸಹ ರೇಪ್ ಪ್ರಸ್ತಾಪವಾಗಿಲ್ಲ, ಜೊತೆಗೆ ಸಫ್ದರ್ ಜಂಗ್ ಆಸ್ಪತ್ರೆಯ ಮೆಡಿಕಲ್ ರಿಪೋರ್ಟ್ ನಲ್ಲಿ ಸಹ ರೇಪ್ ಪ್ರಸ್ತಾಪವಿಲ್ಲ. ಪೋಸ್ಟ್ ಮಾರ್ಟಮ್ ರಿಪೋರ್ಟ್‍ನಲ್ಲು ರೇಪ್ ವರದಿ ಇಲ್ಲ. ಹಾಗಾದರೆ ಕಾಂಗ್ರೆಸ್‍ನ ರಾಹುಲ್ ಗಾಂ ಮತ್ತು ಪ್ರಿಯಾಂಕಾ ಗಾಂ ಮತ್ತು ಕೆಲವು ಪೈಡ್ ಚಾನೆಲ್‍ಗಳು ಇಡೀ ದೇಶಕ್ಕೆ ಗ್ಯಾಂಗ್ ರೇಪ್‍ನ ಕಥೆ ಕಟ್ಟಿ ಸುಳ್ಳು ಹೇಳುತ್ತಿದ್ದಾರಲ್ಲ. ಹಾಗಾದರೆ ಇಲ್ಲಿ ಸಾಮೂಹಿಕ ಬಲಾತ್ಕಾರದ ಪ್ರಶ್ನೆ ಎಲ್ಲಿಂದ ಬಂತು.

ಹುಡುಗಿ ಸೀರಿಯಸ್ ಆಗಿ ಬಿದ್ದಿದ್ದಾಗ, ಏನಾಗುತ್ತಿದೆಯೆಂದು ನೋಡಿಕೊಂಡು ಬರಲು, ಪ್ರಿಯಕರ ಸಂದೀಪ್ ತನ್ನ ಗೆಳೆಯ ಲವಕುಶನನ್ನು ಕಳಿಸಿರುತ್ತಾನೆ. ಅವನನ್ನು ನೋಡಿ ಹುಡುಗಿ ತಾಯಿ ನೀರು ತರಲು ಹೇಳುತ್ತಾರೆ. ಅವನು ನೀರು ತಂದೂ ಕುಡಿಸುತ್ತಾನೆ. ಆಗ ಹುಡುಗಿ ನೀರು ಕುಡಿದ ಮೇಲೆ ಸ್ವಲ್ಪ ಚೇತರಿಸಿಕೊಳ್ಳುತ್ತಾಳೆ. ಸಂದೀಪ್ ಲವ್ ಕುಶ್ ಜೊತೆಗೆ ಇನ್ನಿಬ್ಬರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿದ್ದಾರೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಜಿಲ್ಲಾಕಾರಿ ಶಾಮೀಲಾಗಿದ್ದಾರೆ. ಅದಕ್ಕಾಗಿ ಮೀಡಿಯಾವನ್ನು ನಿರ್ಬಂಸಿದ್ದು, ತರಾತುರಿಯಲ್ಲಿ ಶವಸಂಸ್ಕಾರ ಮಾಡಿಸಿ ಯೋಗಿ ಆದಿತ್ಯನಾಥರ ಸರಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ.

ಎಡಪಂಥೀಯ ಜಿಲ್ಲಾಕಾರಿ ಕಾಂಗ್ರೆಸ್ ಮತ್ತು ಪೈಡ್ ಚಾನೆಲ್‍ಗಳ ಜೊತೆ ಶಾಮೀಲಾಗಿ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದು ಯೋಗಿ ಸರಕಾರಕ್ಕೆ ಮುಜುಗರ ತರಲು. ಸುಳ್ಳು ಸುದ್ಧಿ ನಾಟಿ ಮಾಡುವ ಪ್ರಯತ್ನ ಮಾಡಿವೆ. ಪ್ರಿಯಾಂಕಾ ಗಾಂ ಅವರನ್ನು ರಾಜಕೀಯವಾಗಿ ರಿಲಾಂಚ್ ಮಾಡಲು ಮುಂದಾಗಿವೆ.

ಈಗಾಗಲೇ ಯೋಗಿ ಸರಕಾರ ಹತ್ರಾಸ್ ಘಟನೆ ಕುರಿತು ಎಸ್‍ಐಟಿ ರಚನೆ ಮಾಡಿ ತನಿಖೆ ಶುರುವಿಟ್ಟುಕೊಂಡ ಮೇಲೆ ಕೆಲವು ಮಹತ್ವದ ಸುಳಿವು ಷಡ್ಯಂತ್ರ ಗೊತ್ತಾದ ಮೇಲೆ ಯೋಗಿಯವರು ಸಂಬಂಧಪಟ್ಟವರನ್ನು ಮುಲಾಜಿಲ್ಲದೆ ಸಸ್ಪೆಂಡ್ ಮಾಡಿ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿಯವರು ಸರಕಾರಿ ಅಕಾರಿಗಳು, ಪೊಲಿಸ್ ಅಕಾರಿಗಳ ಮತ್ತು ಸುಳ್ಳು ಆರೋಪದಲ್ಲಿ ಅಂದರ್ ಆಗಿರುವ 4 ಆರೋಪಿಗಳು ಮತ್ತು ಮೃತ ಯುವತಿ ಕುಟುಂಬದವರನ್ನು ಸತ್ಯಾಸತ್ಯತೆಯ ವಿಚಾರಣೆ ದೃಷ್ಟಿಯಿಂದ ನಾರ್ಕೊ ಅನಾಲಿಸಿಸ್ ಪರೀಕ್ಷೆ ಮಾಡಲು ಆದೇಶಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಾರ್ಕೊಗೆ ಬಲವಂತ ಮಾಡುವಂತಿಲ್ಲ. ಯುವತಿ ಜೀವಂತವಾಗಿಲ್ಲದಿದ್ದರಿಂದ, ಜೊತೆಗೆ ಇಬ್ಬರು ಸಂದೀಪ್ ಹೆಸರಿನವರಿರುವದರಿಂದ(ಮನೀಷಳ ಸಹೋದರ ಮತ್ತು ಪ್ರಿಯತಮ) ಸಾಯುವ ಮುಂಚೆ ಪೊಲೀಸ್ ಮಹಜರಿನಲ್ಲಿ ಮನೀಷ ಸಂದೀಪ್ ಹೊಡೆದಿದ್ದು ಎಂದು ಹೇಳಿಕೆ ನೀಡಿದ್ದರಿಂದ, ನಾರ್ಕೊ ಮಾಡಿಸಲೇಬೇಕಾಗಿದೆ.

ಸರಕಾರಿ ಅಕಾರಿಗಳಿಗೆ ತೊಂದರೆ ಇಲ್ಲ, ಆರೋಪದಲ್ಲಿ ಜೈಲಿನಲ್ಲಿರುವ 4 ಆರೋಪಿಗಳಿಗೂ ಮತ್ತು ಕುಟುಂಬದವರಿಗೂ ನಾರ್ಕೊ ಸಮಸ್ಯೆಯಿಲ್ಲ. ಆದರೆ ಯುವತಿಯ ತಾಯಿ ಅಣ್ಣ ಮಾತ್ರ ನಾರ್ಕೊ ಟೆಸ್ಟ್ ಬೇಡವೆಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇಲ್ಲೊಂದು ನ್ಯಾಯಾದೀಶರ ಜಾಣ್ಮೆಯ ಕಥೆ ನೆನಪಾಗುತ್ತದೆ.ಯಾವುದೋ ಪ್ರಕರಣ ಒಂದು ಮಗುವಿಗೆ ಇಬ್ಬರು ತಾಯಿಯರು ಹಕ್ಕು ಮಂಡಿಸುತ್ತಿರುತ್ತಾರೆ. ಮಗು ನನ್ನದು ಈ ಮಗು ನನ್ನದೆಂದು, ಎಲ್ಲಾ ಹಂತಗಳಲ್ಲಿ ಮಗುವಿನ ತಾಯಿ ಯಾರೆಂದು ತಿಳಿಯಲು ವಿಫಲವಾದಾಗ ಸುಪ್ರೀಂಕೋರ್ಟ್ ಮೊರೆ ಹೋಗುತ್ತಾರೆ.

ಆಗ ನ್ಯಾಯಾೀಶರು ಹೇಳುವರಂತೆ, ಮಗು ಇಬ್ಬರದು ಎಂದಾದರೆ ಮಗುವನ್ನು ಸಮಾನವಾಗಿ ಸೀಳಿ ಅರ್ಧರ್ಧ ಭಾಗವನ್ನು ಇಬ್ಬರಿಗೂ ಹಂಚಿ ಬಿಡಿ ಎನ್ನುವರಂತೆ, ಆಗ ನಿಜವಾದ ತಾಯಿಯಾದವಳು, ಮಗು ನನ್ನದಲ್ಲ ಮಗುವನ್ನು ಸೀಳಬೇಡಿ ಪೂರ್ತಿ ಮಗುವನ್ನು ಅವಳಿಗೆ ಕೊಟ್ಟುಬಿಡಿ ಎಂದು ಸುಳ್ಳು ತಾಯಿನ ತೋರಿಸಿ ಅವಳೇ ನಿಜವಾದ ತಾಯಿ. ಅವಳಿಗೆ ಕೊಡಿ ಎಂದಾಗ ನ್ಯಾಯಾೀಶರು ಹೇಳಿದರಂತೆ. ಮಗು ಅವಳದಲ್ಲ ನಿಜವಾಗಲೂ ನಿನ್ನದೆಂದು ನ್ಯಾಯಾಲಯಕ್ಕೆ ಮಾನವರಿಕೆಯಾಗಿದೆ ಎಂದು ಮಗುವನ್ನು ನನ್ನದಲ್ಲ ಎಂದ ತಾಯಿಗೆ ಕೊಟ್ಟರಂತೆ.

ಈಗ ಯೋಗಿಯವರೂ ನತದೃಷ್ಟೆ ಮನೀಷಳ ಹತ್ಯೆಗೆ ಕಾರಣ ಯಾರು ಎಂಬುದನ್ನು ಕಂಡು ಹಿಡಿಯಲು ನಿಜವಾದ ಹಂತಕರನ್ನು ಪತ್ತೆ ಮಾಡಲು ನಾರ್ಕೊ ಮೊರೆ ಹೋಗಿದ್ದಾರೆ. ಅವರು ಕೇವಲ ಕುಟುಂಬದವರದು ಮಾಡಿ ಮಿಕ್ಕವರದು ಬೇಡವೆಂದರೆ ಸುಪ್ರೀಂ ಆದೇಶ ಅನ್ವಯ ಆಗುತ್ತಿತ್ತು, ಬೇಡ ಅನ್ನುವವರು ಬೇಡವೆನ್ನಬಹುದಿತ್ತು, ಕೋರ್ಟ್ ಕೇಳುತ್ತಿತ್ತು.

ಪ್ರಕರಣದಲ್ಲಿ ಮೂವರನ್ನು ಪಾರ್ಟಿ ಮಾಡಲಾಗಿದೆ, ಇಬ್ಬರದು ಅಭ್ಯಂತರವಿಲ್ಲ, ಯಾವ ಟೆಸ್ಟ್ ಬೇಕಾದರೂ ಮಾಡಿಸಿ ಸಿದ್ಧ ಎನ್ನುತ್ತಿದ್ದಾರೆ. ಬೇಡವೆನ್ನುತ್ತಿರುವದು ಯುವತಿಯ ಕುಟುಂಬವೇಕೆ? ಇದರಿಂದ ಏನು ಗೊತ್ತಾಗುತ್ತದೆ? ಬೇರೆಯವರು ಶಾಮೀಲಾಗಿಲ್ಲ, ರೇಪ್ ನಡೆದಿಲ್ಲ ಎನ್ನುವುದು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮ್ ಆರ್ಮಿ, ಇತರೆ ಸ್ಥಳೀಯ ಮುಖಂಡರು ಯೋಗಿಯವರನ್ನು ಟಾರ್ಗೆಟ್ ಮಾಡಲು ಹೋಗಿ ತಾವೇ ಹಳ್ಳಕ್ಕೆ ಬೀಳುವ ಎಲ್ಲಾಸಾಧ್ಯತೆಗಳಿವೆ. 25, 50 ಲಕ್ಷ, ಸುಳ್ಳು ಇಂಟರ್‍ವ್ಯೂ ಕಥೆಗಳು, ಊರ ಜನರ ಹೇಳಿಕೆ ಎಲ್ಲರ ಕಣ್ಣ ಮುಂದಿವೆ. ಯೋಗಿ ರಾಜ್ಯದಲ್ಲಿ ದೂದ್ ಕಾ ದೂದ್ ಪಾನಿ ಕಾ ಪಾನಿ ಹೋ ಜಾಯೆಗಾ.

ಮಹಾಂತೇಶ್ ಬ್ರಹ್ಮ

LEAVE A REPLY

Please enter your comment!
Please enter your name here