ದಸರಾ ಹಬ್ಬ ಆಯುಧಗಳಿಗೆ ಪೂಜೆ; ಪೋಲಿಸ್ ಇಲಾಖೆ

ಪೋಲಿಸರು ಸದಾ ಕಳ್ಳತನ, ಕೇಸು, ಬಂದೋಬಸ್ತು, ಎನ್ನುತ್ತಿದ್ದ ಪೋಲಿಸರು ಇಂದು ದಸರಾ ಹಬ್ಬದ ಆಯುಧ ಪೂಜೆ ನಿಮ್ಮತ್ತ ಆಯುಧಗಳಿಗೆ ಪೂಜೆಯನ್ನ ಅದ್ದೂರಿಯಾಗಿ ನೆರವೇರಿಸಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

0
230

ರಾಯಚೂರು.ಅ.25. ಪೋಲಿಸರು ಸದಾ ಕಳ್ಳತನ, ಕೇಸು, ಬಂದೋಬಸ್ತು, ಎನ್ನುತ್ತಿದ್ದ ಪೋಲಿಸರು ಇಂದು ದಸರಾ ಹಬ್ಬದ ಆಯುಧ ಪೂಜೆ ನಿಮ್ಮತ್ತ ಆಯುಧಗಳಿಗೆ ಪೂಜೆಯನ್ನ ಅದ್ದೂರಿಯಾಗಿ ನೆರವೇರಿಸಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಜಿಲ್ಲಾ ಪೋಲಿಸ್ ಕಚೇರಿ ಆವರಣದಲ್ಲಿ ಪಿಸ್ತೂಲ್, ರೈಫಲ್ಸ್, ಸೇರಿದಂತೆ ಅನೇಕ ಆಯು ಧಗಳಿಗೆ ಅಲಕಾರ ಮಾಡಲಾಗಿತ್ತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಆಯುಧಗಳಿಗೆ ಪೂಜೆ ಮಾಡಿ ಸಿಬ್ಬಂದಿಗಳಿಗೆ ದಸರಾ ಹಬ್ಬದ ಶುಭಾಶಯ ಕೋರಿ ಮಾಧ್ಯಮಗಾರರೊಂದಿಗೆ ಮಾತನಾಡಿ ಪೋಲಿಸರಿಗೆ ಆಚರಣೆ ಮಾಡುವ ಹಬ್ಬವಾಗಿದ್ದು, ವಿಶೇಚವಾಗಿ ಪೋಲಿಸರ ಆಯುಧಗಳಿಗೆ ಪೂಜೆ ಸಲ್ಲಿಸುವ ದಿನ ಎಲ್ಲಾ ಪೋಲಿಸ್ ಠಾಣೆ ಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದರು.
ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕೇಂದ್ರದಲ್ಲು ಅದ್ದೂರಿಯಾಗಿ ಆಯುಧಪೂಜೆ ಆಚರಿಸಲಾಯಿತು. ಪೊಲೀಸ್ ರೈಫಲ್ಸ್ ಸೇರಿದಂತೆ ಗನ್, ಸೆಲ್ಫ್ ಲೋಡಿಂಗ್ ಎಕೆ 47, ಡಿ-ಸ್ಯಾಟ್, 303, ರಿವಳ್ವಾರ್, ಪಾಯಟ್, ಕ್ಯಾಲಿಬರ್, ಮಾರ್ಕ 5, ಗ್ಲಾಸೋ ಟು,ಪಿಸ್ತೂಲ್, ಟಿಆರ್ ಗನ್,ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಗ್ರಾಮೀಣ ಪೊಲೀಸ್ ಠಾಣೆ ವೆಸ್ಟ್ ಪೋಲಿಸ್ ಠಾಣೆ, ಸದರ್ ಬಜಾರ್ ಪೋಲಿಸ್ ಠಾಣೆ, ನೇತಾಜಿ ಪೋಲಿಸ್ ಠಾಣೆ ಯಲ್ಲಿ ಆಯುಧಗಳಿಗೆ ಪೂಜೆಯನ್ನು ಆಚರಿಸಲಾಯ್ತು. ಪ್ರತಿನಿತ್ಯ ಕಚೇರಿಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ ಪೊಲೀಸರು ಇಂದು ತಮ್ಮ ಕುಟುಂಬದವರ ಜೊತೆಗೂ ಹಬ್ಬದಲ್ಲಿ ಭಾಗವಹಿಸಿ ಹಬ್ಬವನ್ನು ಆಚರಣೆ ಮಾಡಿದರು.

LEAVE A REPLY

Please enter your comment!
Please enter your name here