60 ವರ್ಷ ತುಂಬಿದ ಎಲ್ಲಾ ನಾಗರೀಕರಿಗೂ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ; ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ

60 ವರ್ಷ ಮೇಲ್ಪಟ್ಟವರಿಗೆ ಯಾವುದೇ ಪ್ರಮಾಣ ಪತ್ರ ಅಗತ್ಯವಿರುವುದಿಲ್ಲ. 40 ರಿಂದ 59 ವರ್ಷದ ಅವಧಿಯಲ್ಲಿರುವವರಿಗೆ ಗಂಭೀರ ಸ್ವರೂಪದ ಕಾಯಿಲೆಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆನ್ನುವ ವೈದ್ಯರ ಪ್ರಮಾಣ ಪತ್ರ ಅಗತ್ಯವಾಗಿದೆ.

0
132

ರಾಯಚೂರು.ಮಾ.02- ಕೋವಿಡ್ ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತಿದ್ದು, ಮೊದಲನೇ ಹಂತದಲ್ಲಿ ಡಾಕ್ಟರ್ ಮತ್ತು ಆರೋಗ್ಯ ಸೇವಕರಿಗೆ ಲಸಿಕೆ ನೀಡಲಾಗಿದ್ದು, ಎರಡನೇಯದ್ದಾಗಿ ಮುಂಚೂಣಿಯಲ್ಲಿ ಕೆಲಸ ಮಾಡುವಂತಹ ಇಲಾಖೆಗಳ ಸಿಬ್ಬಂದಿಗೆ ಲಸಿಕೆ ನೀಡಲಾಗಿದ್ದು, ಮೂರನೇ ಹಂತದ ಕೋವಿಡ್ ಲಸಿಕೆಯನ್ನು 60 ವರ್ಷ ತುಂಬಿದ ಎಲ್ಲಾ ನಾಗರೀಕರಿಗೂ ಹಾಕುವ ಪ್ರಕ್ರಿಯೆ ಆರಂಭಗೊಂಡಿದೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ಹೇಳಿದರು.
http://kalyanatimes.com/?p=2803&preview=true

ಅವರಿಂದು 60 ವರ್ಷ ಮೇಲ್ಪಟ್ಟವರಿಗೆ ಯಾವುದೇ ಪ್ರಮಾಣ ಪತ್ರ ಅಗತ್ಯವಿರುವುದಿಲ್ಲ. 40 ರಿಂದ 59 ವರ್ಷದ ಅವಧಿಯಲ್ಲಿರುವವರಿಗೆ ಗಂಭೀರ ಸ್ವರೂಪದ ಕಾಯಿಲೆಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆನ್ನುವ ವೈದ್ಯರ ಪ್ರಮಾಣ ಪತ್ರ ಅಗತ್ಯವಾಗಿದೆ. ಮೊದಲನೆ 10 ದಿನ ಪ್ರಸ್ತುತ ಪ್ರಾಯೋಗಿಕವಾಗಿ ಲಸಿಕೆಯನ್ನು ನೀಡಲಾಗುತ್ತಿದೆ. ಈ ಹಿಂದೆ ಎರಡು ಹಂತಗಳಲ್ಲಿ ನೋಂದಾಯಿಸಿಕೊಂಡು ಲಸಿಕೆ ನೀಡಲಾಗುತ್ತಿತ್ತು. ಆದರೆ, ಈಗ ಅವರೇ ಆನ್ ಲೈನ್ ಮೂಲಕ ನೋಂದಾಯಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ.

ಜಿಲ್ಲೆಯ ಒಟ್ಟು 7 ಆಸ್ಪತ್ರೆಗಳಲ್ಲಿ ಈ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 4 ತಾಲೂಕು ಆಸ್ಪತ್ರೆ ಮತ್ತು ರಿಮ್ಸ್ ಆಸ್ಪತ್ರೆ, ಎರಡು ಖಾಸಗಿ ಆಸ್ಪತ್ರೆಗಳಾದ ನವೋದಯ ಮತ್ತು ಬಾಲಂಕು ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ. ಜನರ ಸಂಖ್ಯೆಯನ್ನು ಅವಲಂಬಿಸಿ, ಮುಂಬರುವ ದಿನಗಳಲ್ಲಿ ಲಸಿಕೆಯ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಪ್ರಥಮ ಹಂತದಲ್ಲಿ ನಾಗರೀಕರು ನೇರವಾಗಿ ಬರಬಹುದು. ಆದರೆ, ಆನ್ ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಆಸ್ಪತ್ರೆಗೆ ಬಂದರೇ ಅವರಿಗೂ ಸಹ ನೀಡಲಾಗುತ್ತದೆ.

ನಾಗರೀಕರು ಇದನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಕೇಳಿದ ಅವರು, ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಹೆಲ್ತ್ ಸರ್ವೇ ಮಾಡಲಾಗಿದೆ. 1.74 ಲಕ್ಷ 60 ವರ್ಷ ಮೇಲ್ಪಟ್ಟವರಿರುವುದಾಗಿ ತಿಳಿದು ಬಂದಿದೆ. 48 ಸಾವಿರ ಜನ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಎರಡು ಸೇರಿದರೇ 2.21 ಲಕ್ಷ ಜನ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಮೊದಲನೇ ಹಂತದಲ್ಲಿ ಸರ್ಕಾರ 30 ಸಾವಿರ ಲಸಿಕೆ ನೀಡಿದ್ದು, ಈ ಎಲ್ಲಾ ಲಸಿಕೆ ನಂತರ ಮತ್ತೇ ನಮಗೆ ಲಸಿಕೆ ಲಭ್ಯವಾಗುತ್ತದೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here