ಪದವೀಧರ ಕ್ಷೇತ್ರ ಚುನಾವಣೆ. ಅಕ್ಟೋಬರ್ 26 ರಿಂದ 28ರವರೆಗೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧ

0
62

ಕಾರವಾರ, ಅ 25 :   ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ   ಅಕ್ಟೋಬರ್ 28 ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದೆ.

ಚುನಾವಣಾ  ಸಮಯದಲ್ಲಿ ಜಿಲ್ಲೆಯಲ್ಲಿ  ಯಾವುದೇ  ರೀತಿಯ  ಅಹಿತಕರ ಘಟನೆಗಳಿಗೆ  ಅವಕಾಶವಾಗದಂತೆ  ಅಕ್ಟೋಬರ್ 26ರ ಸಾಯಂಕಾಲ 5 ಗಂಟೆಯಿಂದ ಅಕ್ಟೋಬರ್ 28ರ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯಾದ್ಯಂತ ಮದ್ಯಮಾರಾಟ, ಸಾಗಾಣಿಕೆ ಹಾಗೂ ಸಂಗ್ರಹಣೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ  ಡಾ.  ಹರೀಶ ಕುಮಾರ ಕೆ  ಅವರು ಆದೇಶ ಹೊರಡಿಸಿದ್ದಾರೆ.

ನಿಷೇಧಿತ ದಿನಗಳನ್ನು ಶುಷ್ಕ ದಿವಸಗಳೆಂದು ಘೋಷಿಸಲಾಗಿರುತ್ತದೆ. ಈ  ಅವಧಿಯಲ್ಲಿ  ಯಾರಾದರೂ  ಮದ್ಯವನ್ನು  ಸ್ವಾಧೀನದಲ್ಲಿಟ್ಟುಕೊಂಡಿರುವುದು  ಅಥವಾ  ಮದ್ಯವನ್ನು  ಸೇವಿಸಿ ಸಾರ್ವಜನಿಕರಿಗೆ  ಉಪದ್ರವ,  ಬೀದಿ  ರಂಪಾಟ  ಮಾಡುತ್ತಿರುವುದು  ಕಂಡು ಬಂದಲ್ಲಿ   ಮುನ್ನೆಚ್ಚರಿಕೆ  ಕ್ರಮವಾಗಿ  ಚುನಾವಣೆ  ಮುಕ್ತಾಯವಾಗುವವರೆಗೂ  ಅವರನ್ನು  ಕಸ್ಟಡಿಯಲ್ಲಿ ಇಡತಕ್ಕದ್ದು  ಎಂದು  ಅವರು  ಆದೇಶದಲ್ಲಿ  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here