ಕಂಕಣ ಸೂರ್ಯ ಗ್ರಹಣದ ಸಂದರ್ಭದಲ್ಲಿ ಅಂಗವಿಕಲ ಮಕ್ಕಳನ್ನ ತಿಪ್ಪೆಯಲ್ಲಿ ಹೂತಿಡುವ ಮೂಡನಂಬಿಕೆ ಇನ್ನೂ ಇರುವುದು ವಿಪರ್ಯಾಸ

0
225

ಕಲಬುರಗಿ: ದೇಶದೆಲ್ಲೆಡೆ ಅಸಂಖ್ಯಾತ ಜನರು ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಳ್ಳುತ್ತಿದ್ದು.ವರ್ಷಗಳ ಬಳಿಕ ಬಾನಂಗಳದಲ್ಲಿ ಉಂಟಾಗಿರುವ ಕೌತುಕಕ್ಕೆ ಜನರು ಸಾಕ್ಷಿಯಾಗುತ್ತಿದ್ದಾರೆ.

ರಾಜ್ಯದ ಬೆಂಗಳೂರಿನಲ್ಲಿ ಕೆಲವರು ಮೂಡನಂಬಿಕೆಯನ್ನ ಹೊಗಲಾಡಿಸುವ ನಿಟ್ಟಿನಲ್ಲಿ ಗ್ರಹಣ ಸಂದರ್ಭದಲ್ಲಿ ತೆರೆದಿರುವ ಆಕಾಶದ ಕೆಳಗೆ ಸಾರ್ವಜನಿಕ ಭೊಜನಾ ವ್ಯವಸ್ಥೆ ಮಾಡಿ ಊಟ ಮಾಡಿರುವ ಸುದ್ದಿ ಒಂದೆಡೆ ಇದ್ದರೆ ಇನ್ನೊಂದೆಡೆ ಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಜನರು ವಿಭಿನ್ನವಾಗಿ ಆಚರಣೆಯಲ್ಲಿ ತೊಡಗಿರುವುದು ಮತ್ತೊಂದು ರೀತಿಯ ಸೋಜಿಗವೆನಿಸಿದೆ.

ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಅಂಗವೈಕಲ್ಯ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.‌

ಗ್ರಹಣ ಸಮಯದಲ್ಲಿ ತಿಪ್ಪೆ ಮತ್ತು‌ ಮಣ್ಣನಲ್ಲಿ ಹೂತಿಟ್ಟರೆ ಅಂಗವೈಕಲ್ಯ ಸರಿಯಾಗುತ್ತದೆ ಎಂಬ ಮೂಢನಂಬಿಕೆ ಜನರಲ್ಲಿ ಇದೆ. ಹೀಗಾಗಿ ಚಿಕ್ಕ-ಚಿಕ್ಕ ಮಕ್ಕಳನ್ನು ಪೋಷಕರು ಹೂತಿಟ್ಟಿದ್ದರು.

ಕಲಬುರಗಿ ತಾಲೂಕಿನ ತಾಜ್ ಸುಲ್ತಾನ್ ಪುರ ಗ್ರಾಮದಲ್ಲಿ ಮೂವರು ಮಕ್ಕಳು ಹಾಗೂ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ಸುಮಾರು ನಾಲ್ವರು ಮಕ್ಕಳನ್ನು ಮೂಢನಂಬಿಕೆಯಿಂದ ಸೂರ್ಯಗ್ರಹಣ ಕಾಲಕ್ಕೆ ಅಂಗವಿಕಲ ಮಕ್ಕಳನ್ನು ತಿಪ್ಪೆ ಗುಂಡಿಯಲ್ಲಿ ಕುತ್ತಿಗೆ ಮಟ್ಟ ಹೂತಿಡಲಾಗಿತ್ತು

ಹೀಗೆ ಮಾಡುವುದರಿಂದ ಅಂಗವಿಕಲತೆ ಹೋಗುತ್ತದೆ ಎಂಬ  ಮೂಡ ನಂಬಿಕೆ ಇದೆ.

ಈ ಅಧುನಿಕ ಜಗತ್ತಿವಲ್ಲಿ ಜನರ ಮದ್ಯೆ ಆಳವಾದ ಮೂಡನಂಬಿಕೆ ಇನ್ನು ಬಾಕಿ ಇರುವುದು ವಿಪರ್ಯಾಸ.

LEAVE A REPLY

Please enter your comment!
Please enter your name here