ಸಂಸತ್ತಿನಲ್ಲಿ 105 ಪ್ರಶ್ನೆ ಕೇಳಿದ ರಾಯಚೂರ ಸಂಸದ ಅಮರೇಶ್ವರ ನಾಯಕ

0
261

ರಾಯಚೂರು,ಜ.04- ಜಿಲ್ಲೆಯ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ 17ನೇ
ಲೋಕಸಭಾ ಅಧಿವೇಶನದಲ್ಲಿ ಶೇ 100 ರಷ್ಟು ಹಾಜರಾತಿ ಹಾಗೂ ಪ್ರಶ್ನೆ ಕೇಳುವದರಲ್ಲಿ ಕರ್ನಾಟಕ ರಾಜ್ಯದ
ಸಂಸದರಲ್ಲಿ ಪ್ರಥಮರಾಗಿದ್ದು ಟಾಪ್ ಸ್ಥಾನ ಪಡೆದಿದ್ದಾರೆ.

ಲೋಕಸಭೆಗೆ ರಾಯಚೂರ ಕ್ಷೇತ್ರದಿಂದ 2019ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಪ್ರವೇಶಿಸಿದ್ದು
ಲೋಕಸಭೆಯ 2 ಅಧೀವೇಶನದಲ್ಲಿ ದೇಶದ ಹಲವಾರು ಮಹತ್ವಪೂರ್ಣ ಬಿಲ್ ನಿರ್ಣಯಗಳನ್ನು
ಅಂಗಿಕರಿಸಿದ್ದು, ರಾಜ್ಯದ ಸಂಸದರು ಲೋಕಸಭ ಅಧಿವೇಶನ ಹಾಜರಾತಿ ಶೇ.77 ಇದ್ದರೆ ರಾಯಚೂರ ಸಂಸದ
ರಾಜಾ ಅಮರೇಶ್ವರ ನಾಯಕ 57 ದಿನವೂ ಹಾಜರಾಗಿದ್ದು ಕರ್ನಾಟಕದ ಪ್ರಥಮ ಸಂಸದರಾಗಿ ಹೊರಹಮ್ಮಿದ್ದು
ಶೇ.100ರಷ್ಟು ಭಾಗವಹಿಸುವಿಕೆ ಇತಿಹಾಸ ಸೃಷ್ಠಿಸಿದೆ. ಎರಡು ಅಧಿವೇಶನದಲ್ಲಿ ಸಂಸದ ರಾಜಾ ಅಮರೇಶ್ವರ
ನಾಯಕ ಒಟ್ಟು 105 ಪ್ರಶ್ನೆಗಳನ್ನು ಕೇಳಿದ್ದು ಹೆಚ್ಚಿನವು ರಾಯಚೂರ ಲೋಕಸಭಾ ವ್ಯಾಪ್ತಿಯ ಅಭಿವೃದ್ದಿ
ವಿಷಯವಾಗಿದ್ದು ಇಲ್ಲಿಯೂ ಪ್ರಥಮರಾಗಿದ್ದಾರೆ.

ಕರ್ನಾಟಕದಿಂದ 28 ಸಂಸದರಾಗಿದ್ದು ಅದರಲ್ಲಿ ನೂತನವಾಗಿ ಪ್ರಥಮ ಬಾರಿಗೆ ಆಯ್ಕೆಯಾದ ಸಂಸದ
ರಾಜಾ ಅಮರೇಶ್ವರ ನಾಯಕ ಸಾಧನೆ ಇಚ್ಚಾಶಕ್ತಿ ಈ ಭಾಗದ ಜನರ ಹೆಮ್ಮೆಯಾಗಿದೆ.
ಸಂಸದ ರಾಜಾ ಅಮರೇಶ್ವರ ನಾಯಕ ಸ್ವಲ್ಪ ಅವಧಿಯಲ್ಲಿ ಹಿಂದುಳಿದ ರಾಯಚೂರ ಯಾದಗಿರಿ ಜಿಲ್ಲೆಗಳ
ಅನೇಕ ಜಲ್ವಂತ ಸಮಸ್ಯೆಗಳು ಅಭಿವೃದ್ದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಬAಧಿಸಿದ ಇಲಾಖೆ ಸಚಿವರನ್ನು
ಕಂಡು ಮನವಿ ಪತ್ರಗಳು ಸಲ್ಲಿಸಿದ್ದಾರೆ.

ಲಿಂಗಸುಗೂರ ತಾಲೂಕಿನ ಹಟ್ಟಿ ಚಿನ್ನದಗಣಿ ದೇಶದಲ್ಲಿ ಪ್ರಥಮವಾಗಿದ್ದು ಇನ್ನು ಹೆಚ್ಚಿನ ಅಭಿವೃದ್ದಿಗೆ
ಹಾಗೂ ಈ ಭಾಗದ ಯವಕರ ನಿರುದ್ಯೋಗ ಸಮಸ್ಯೆಗಾಗಿ ಕೂಡಲೆ ಜಿಲ್ಲೆಯಲ್ಲಿ ಮೈನಿಂಗ ಕಾಲೇಜ ಆರಂಭಿಸಲು
ಒತ್ತಾಯಿಸಿದ್ದು, ಹಾಗೂ ಈ ಭಾಗದ ರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆ ರೇಲ್ವೆ ಕಾಮಗಾರಿಗಳು ತ್ವರಿತ
ಆರಂಭಕ್ಕೆ ಮತ್ತು ರಾಯಚೂರನಲ್ಲಿ ಏಮ್ಸ್ ಕಾಲೇಜ ಆರಂಭ ಯಾದಗಿರಿನಲ್ಲಿ ಕೈಗಾರಿಕೆ ಹಬ್ ಆರಂಭಿಸಲು
ಆರ್‌ಟಿಪಿಎಸ್ ಸುಧಾರಣೆ ಹಾಗೂ ನೀರಾವರಿ ಯೋಜನೆಗಳ ತ್ವರಿತ ಜಾರಿ ಇನ್ನು ಅನೇಕ ಒಟ್ಟು 105
ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ.

ಸಂಸದ ರಾಜಾ ಅಮರೇಶ್ವರ ನಾಯಕ ಕೇಂದ್ರ ಗೃಹ ಇಲಾಖೆಯ ಸದಸ್ಯರಾಗಿದ್ದು ಹಾಗೂ ಬೃಹತ್
ಕೈಗಾರಿಕೆಗಳ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಎರಡು ಬಾರಿ ರಾಜ್ಯ ಸಚಿವರಾಗಿ ಅನುಭವವಿರುವ ಸಂಸದ
ರಾಜಾ ಅಮರೇಶ್ವರ ನಾಯಕ ಲೋಕಸಭಾ ಅಧಿವೇಶನದಲ್ಲಿ ಶೇ 100ರಷ್ಟು ಭಾಗವವಹಿಸುವಿಕೆಯಿಂದ ಪ್ರಥಮ
ಸ್ಥಾನ ಪಡೆದಿದ್ದಾರೆ

LEAVE A REPLY

Please enter your comment!
Please enter your name here