ಕೆ ಎಸ್ ಈಶ್ವರಪ್ಪನವರಿಗೆ ಸಚಿವ ಸ್ಥಾನದಿಂದ ವಜಾಗೊಳಿಸಬೇಕು; ವಿಕಲಚೇತನರ ಆಗ್ರಹ

ವಿಕಲಚೇತನರ ಬಗ್ಗೆ ಈ ರೀತಿ ತಾತ್ಸಾರ ಮನೋಭಾವದಿಂದ ಮಾತನಾಡಿರುವುದು ಅವರ ಸಚಿವ ಸ್ಥಾನಕ್ಕೂ ಚ್ಯುತಿ ತಂದುಕೊಂಡಿದ್ದಾರೆ

0
133

ವಿಕಲಚೇತನರಿಗೆ ನೋವುಂಟು ಮಾಡಿದ ಕೆ.ಎಸ್.ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ : ವಿಕಲಚೇತನರ ಮನವಿ

ಮಾನ್ವಿ : ವಿಕಲಚೇತನರ‌ ಸಮುದಾಯಕ್ಕೆ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ರವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಮಾನವಿ ತಾಲೂಕು ವಿಕಲಚೇತನರ ಸಂಘಟನೆಗಳ ಒಕ್ಕೂಟ.
ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪನವರು ಜೆ.ಡಿ.ಎಸ್.ಪಕ್ಷವನ್ನು ದೂರುವ ಸಂಧರ್ಭದಲ್ಲಿ “ಕುಂಟನಿಗೆ ಎದುರಿಗಿರುವ ಪೈಲ್ವಾನನಿಗೆ ಹೆದರಿಸುವ ಶಕ್ತಿ ಇರಲ್ಲ, ಹಾಗಾಗಿ ಸುಮ್ಮನೆ ಹೆದರಿಸಲು ಬಂದು ಒದೆಯುತ್ತೇನೆ ಎಂದು ಹೇಳುತ್ತಾನೆ” ಎಂದು ಹೇಳುವ ಮೂಲಕ ವಿಕಲಚೇತನರ ಅವಹೇಳನಕಾರಿಯಾಗಿ ಮಾತನಾಡಿರುವುದು ಇಡೀ ವಿಕಲಚೇತನರ ಸಮುದಾಯಕ್ಕೆ ಮಾನಸಿಕವಾಗಿ ನೋವುಂಟುಮಾಡುವ ಮಾತನಾಡಿದ್ದಾರೆ.

ಯಾರ ಮನಸ್ಸಿಗೂ ನೋವು, ಧಕ್ಕೆ ಉಂಟಾಗದಂತೆ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಸಚಿವರಾದ ಈಶ್ವರಪ್ಪನವರು ವಿಕಲಚೇತನರನ್ನು ಬಳಸಿಕೊಂಡಿರುವುದು ಅಂಗವಿಕಲರ ವ್ಯಕ್ತಿಗಳ ಕಾಯಿದೆ – 2016 ರ ಪ್ರಕಾರ ಘೋರ ಅಪರಾಧವಾಗಿದೆ. ವಿಕಲಚೇತನರು ಸಮಾಜದಲ್ಲಿ ಘನತೆ, ಗೌರವದಿಂದ ಸ್ವಾಭಿಮಾನಿಯಾಗಿ ಬದುಕಲು ಬೇಕಾದ ಯೋಜನೆಗಳು, ಕಾನೂನು, ಶಾಸನಗಳನ್ನು ರೂಪಿಸುವ ಜವಬ್ದಾರಿಯುತ ಸ್ಥಾನಮಾನ ಹೊಂದಿರುವ ಸಚಿವರು, ವಿಕಲಚೇತನರ ಬಗ್ಗೆ ಈ ರೀತಿ ತಾತ್ಸಾರ ಮನೋಭಾವದಿಂದ ಮಾತನಾಡಿರುವುದು ಅವರ ಸಚಿವ ಸ್ಥಾನಕ್ಕೂ ಚ್ಯುತಿ ತಂದುಕೊಂಡಿದ್ದಾರೆ ಮಾತ್ರವಲ್ಲ ಅಪಚಾರವನ್ನುಂಟು ಮಾಡಿದ್ದಾರೆ. ಇಂಥ ಮನಸ್ಥಿತಿ ಹೊಂದಿರುವ ಈಶ್ವರಪ್ಪನವರಿಂದ ವಿಕಲಚೇತನರಿಗೆ ಯಾವ ಅಭಿವೃದ್ಧಿಯಯನ್ನು ನಿರೀಕ್ಷಿಸಲು ಸಾಧ್ಯವೆಂಬುದು ನಮ್ಮೆಲ್ಲರ ಮುಂದಿರುವ ಪ್ರಶ್ನೆಯಾಗಿದೆ.

ಕೆ ಎಸ್ ಈಶ್ವರಪ್ಪನವರಿಗೆ ಸಚಿವ ಸ್ಥಾನದಿಂದ ವಜಾಗೊಳಿಸಬೇಕು; ವಿಕಲಚೇತನರ ಆಗ್ರಹ

ಈ ಹಿನ್ನೆಲೆಯಲ್ಲಿ ಅವರ ಅಸಂಭದ್ಧ ಹೇಳಿಕೆಯಿಂದಾಗಿ ದೊಡ್ಡ ಪ್ರಮಾದವೆಸಗುವ ಮೂಲಕ ವಿಕಲಚೇತನರ ಸ್ವಾಭಿಮಾನ ಮತ್ತು ಘನತೆಗೆ ಧಕ್ಕೆ ಉಂಟುಮಾಡಿರುವ ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಕೂಡಲೆ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ವಿಕಚೇತನರು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ
ಶಿವಕುಮಾರ್ ಚಲ್ಮಲ್, ಎಂ.ಡಿ.ಜಾಫರ್, ಡಿ.ಹನುಮಂತ ಕಪಗಲ್, ವಿ.ಎಸ್.ರಾಘವೇಂದ್ರ, ನಿಂಗನಗೌಡ ಗಚ್ಚಿನಮನೆ, ಹನುಮೇಶ ಕಾತರಿಕಿ, ನರಸಪ್ಪ ಚೀಕಲಪರ್ವಿ, ಮಹೇಶ ವಿಶ್ವಕರ್ಮ, ಯಲ್ಲಪ್ಪ ಬಾಗಲವಾಡ, ನಿಂಗಣ್ಣ ಮುಸ್ಟೂರು, ಹೊನ್ನುರಯ್ಯ, ತಿಮ್ಮಯ್ಯ ನಾಯಕ, ಸುಂಕಯ್ಯ ಆಲ್ದಾಳ್, ಅಯ್ಯಪ್ಪ, ಅಯ್ಯಣ್ಣ, ಭೀಮಪ್ಪ, ನರಸಪ್ಪ ಕಾತರಿಕಿ, ಕೆ.ಬಾಷುಸಾಬ್, ಸಾದಿಕ್, ಸಿ.ವೀರೇಶ್, ಎನ್.ಮಂಜುನಾಥ ಮತ್ತು ಭೀಮರಾಯ ಇದ್ದರು

LEAVE A REPLY

Please enter your comment!
Please enter your name here