ಕೇಂದ್ರದ ಬಿಜೆಪಿ ಸರಕಾರದ ನಿಲುವುಗಳು ಬ್ರಿಟಿಷ್ ಸರ್ಕಾರಕ್ಕಿಂತಲೂ ಕ್ರೂರವಾಗಿವೆ. ವೆಲ್ಫೇರ್ ಪಾರ್ಟಿ ಕರ್ನಾಟಕ

1
286

ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ನಿಲುವುಗಳು ಬ್ರಿಟಿಷ್ ಸರ್ಕಾರಕ್ಕಿಂತ ಕ್ರೂರವಾಗಿವೆ ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಕಿಡಿಕಾರಿದ್ದಾರೆ.

ಬ್ರಿಟೀಷರ ಕಾಲ ಮರಳಿ ಬಂದಿದಿಯಾ? ಎಂಬ ಕಲ್ಪನೆ ಮೂಡುವಂತಿದೆ ಇಂದಿನ ಪರಿಸ್ಥಿತಿ, ಸಂವಿಧಾನಿಕ ಚೌಕಟ್ಟಿನಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಗರಿಕರನ್ನು ಕೊಲ್ಲುತ್ತಿರುವ ಕೊಮುವಾದಿ ಸರ್ಕಾರವು ಗೌಹಾಟಿಯಲ್ಲಿ ಅಮಾಯಕ ನಾಗರಿಕರನ್ನು  ಗೋಲಿಬಾರ್ ಮಾಡುವ ಮೂಲಕ ಕೊಲೆ ಮಾಡುತ್ತಿರುವುದು ಅತ್ಯಂತ ಖಂಡನೀಯವಾದದ್ದು ಎಂದು ತಾಹೇರ್ ಹುಸೇನ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಮಸೂದೆ 2019 ಜಾರಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನ ಹೋರಾಟಗಳನ್ನು ಹತ್ತಿಕ್ಕಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗೋಲಿಬಾರ್ ಮೂಲಕ ಮುಂದಾಗಿದೆ, ಆದರೆ ಇಂತಹ ಗೋಲಿಬಾರ್, ಗೂಂಡಾಗಿರಿ ಮೂಲಕ ಜನಪರ ಚಳುವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇದರ ತಕ್ಕ ಪರಿಣಾಮಗಳು ಮೋದಿ ಮತ್ತು ಬಿಜೆಪಿ ಎದುರಿಸುವ ಮೂಲಕ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದ ಅವರು ಸಾರ್ವಜನಿಕರು , ಪ್ರಗತಿಪರ ಸಂಘಟನೆಗಳು, ವಿಚಾರವಾದಿಗಳು, ದಲಿತ ಮುಖಂಡರು, ಅಲ್ಪಸಂಖ್ಯಾತ ಬಂಧುಗಳು ಎಲ್ಲರೂ   ಜಂಟಿಯಾಗಿ  ಮೊದಿ ಸರಕಾರದ ದ್ವಂದ್ವ ನೀತಿಗಳ ವಿರುದ್ಧ ಹೂರಾಟಗಳನ್ನು  ತೀವ್ರಗೊಳಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದ್ದಾರೆ.

1 COMMENT

LEAVE A REPLY

Please enter your comment!
Please enter your name here