ನ.26ರ ಅಖಿಲ ಭಾರತ ಬಂದ್ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಬಲ.

ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಯಿಂದ ಮಾನವಿ ಬಂದ್

0
167

ಮಾನವಿ, ನ.21- ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಗಳನ್ನ ತರುವ ಮೂಲಕ ದೇಶವನ್ನು ನಾಶಮಾಡಲು ಹೊರಟಿದೆ ಕಾರಣ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನ ವಿರೋಧಿಸಿ ನ. 26ರಂದು ನಡೆಯುವ ಅಖಿಲ ಭಾರತ ಬಂದ್ ಮುಷ್ಕರವನ್ನು ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಮಾನವಿ ಬಂದ್ ಆಚರಿಸಲಾಗುತ್ತದೆ ಎಂದು ಸಿಐಟಿಯು ಅಧ್ಯಕ್ಷಶ ರ್ಫುದ್ದೀನ್ ಪೊತ್ನಾಳ ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ದೇಶದಲ್ಲಿ ಕೊವಿಡ್ 19 ಮಹಾಮಾರಿ ಯಿಂದ  ವಲಸೆ ಕಾರ್ಮಮಿಕರು, ಅಸಂಘಟಿತ ಕಾರ್ಮಿಕರು ಕೆಲಸ ವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ

ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ 44 ಕಾಯ್ದೆ ಗಳನ್ನು ತಿದ್ದುಪಡಿ ಮಾಡಿರುವುದು ಖಂಡನೀಯ ಕಾರಣ ಕೂಡಲೇ ಅವುಗಳನ್ನ ಕೈಬಿಡಬೇಕು

ಮತ್ತು ಸಾರ್ವಜನಿಕ ರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ವ ಮುಚ್ಚುವ ಮೂಲಕ ಮಾನವಿ ಬಂದ್ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕಾರ್ಮಿಕ ಸಂಘಗಟನೆಗಳ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here