ರಮಜಾನ್ ತಿಂಗಳ ಉಪವಾಸದ ಮಹತ್ವ: ಮೌಲಾನ ಶೇಕ್ ಫರೀದ್ ಉಮರಿ ಮಾನವಿ. 

ಉಪವಾಸ ಆಚರಣೆ ಮಾಡುವ ಮುಖ್ಯ ಉದ್ದೇಶ: ಮನುಷ್ಯರಲ್ಲಿ ಅಲ್ಲಾಹನ ತಕ್ವಾ (ಭಯಭಕ್ತಿ) ಉಂಟಾಗಬೇಕಂಬುದಾಗಿದೆ. ಜೊತೆಗೆ ಕುರಾನ್ ಅವತೀರ್ಣವಾದುದರಿಂದ ಅಲ್ಲಾಹನಿಗೆ ವಿಧೇಯರಾಗಿ ಪ್ರವಾದಿ ಚರ್ಚೆಗೆ ಅನುಗುಣವಾಗಿ ಅಲ್ಲಾಹ್ ಮತ್ತು ಪ್ರವಾದಿಗಳಿಗೆ ಕೃತಜ್ಞತೆ ಗಳನ್ನು ಸಲ್ಲಿಸಲಿಕ್ಕಾಗಿ ಉಪವಾಸ ಮಾಡಬೇಕು

0
38

ರಮಜಾನ್ ತಿಂಗಳ ಉಪವಾಸದ ಮಹತ್ವ: ಮೌಲಾನ ಶೇಕ್ ಫರೀದ್ ಉಮರಿ ಮಾನವಿ. 

ಪ್ರವಾದಿ ಮೊಹಮ್ಮದ್ (ಸ) ಹೇಳಿದರು : ರೊಜಾ ಉಪವಾಸ ವೃತಾಚರಣೆ ಮಾಡುವವನಿಗಾಗಿ ಸ್ವರ್ಗದಲ್ಲಿ ಬಾಬುರ್ರೈಯ್ಯಾನ್ ಹೆಸರಿನಲ್ಲಿ ಒಂದು ವಿಶೇಷ ಬಾಗಿಲು ನಿರ್ಮಾಣ ಮಾಡಲಾಗಿದೆ ಆ ಬಾಗಿಲಿನಿಂದ ಕೇವಲ ಉಪವಾಸ ಆಚರಿಸುವವರಿಗೆ ಮಾತ್ರ ಸ್ವರ್ಗಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ.

ರಮಜಾನ್ ಉಪವಾಸ ಪ್ರತಿಯೊಬ್ಬ ಮುಸಲ್ಮಾನ ಪುರುಷ ಮತ್ತು ಮಹಿಳೆಯರ ಮೇಲೆ ಸಮಾನವಾಗಿ ಕಡ್ಡಾಯ ವಾಗಿದೆ.

ರಿಯಾಯಿತಿ: ದೀರ್ಘ ಕಾಲದ ಪ್ರವಾಸ ಕೈಗೊಂಡ ಪ್ರವಾಸಿ, ಚಿಕಿತ್ಸೆಯಲ್ಲಿರುವ ಅಥವ ಫಲಕಾರಿಯಾಗದೆ ಇರುವ ರೋಗಿ, ಗರ್ಭಿಣಿ ಮತ್ತು ಹಾಲುಣಿಸುವ ತಾಯಿಯರಿಗೆ, ಬಾಣಂತಿ ಹಾಗೂ ಋತುವಿಲ್ಲಿರುವ ಮಹಿಳೆಯರಿಗೆ ರಿಯಾಯಿತಿ ಇದೆ ಆ ಸಂಕಷ್ಟ ದ ಸಮಯದಲ್ಲಿ ಉಪವಾಸ ಆಚರಿಸಲು ಇರಲು ರಿಯಾಯಿತಿ ಕೊಡಲಾಗಿದೆ ಆದರೆ ನಂತರದ ದಿನಗಳಲ್ಲಿ ಇವರುಗಳು ಉಪವಾಸ ವೃತ ಆಚರಿಸಬೇಕು ಎಂದು ಕುರಾನ್ ಹೇಳುತ್ತದೆ.

ಉಪವಾಸ ಒಂದು ಪರಿಕಲ್ಪನೆಯಂತೆ ಸಾಮಾನ್ಯವಾಗಿ ಎಲ್ಲಾ ಧರ್ಮದಲ್ಲೂ ಇರುತ್ತದೆ. ಉದಾಹರಣೆಗೆ, ಹಿಂದೂ ಧರ್ಮದಲ್ಲಿ ಬಹುತೇಕ ಸಂದರ್ಭಗಳಲ್ಲಿ ಉಪವಾಸ ಆಚರಿಸುವುದು ಸಾಮಾನ್ಯ. ಹಾಗೆಯೇ, ಕ್ರಿಶ್ಚಿಯನ್ ಜನಾಂಗದಲ್ಲೂ ಲೆಂಟ್ ಅವಧಿಯಲ್ಲಿ, ಅಂದರೆ ಆಶ್ ಬುಧವಾರದ 40 ದಿನಗಳ ಹಿಂದಿನಿಂದ, ಉಪವಾಸದ ಆಚರಣೆಯಿರುತ್ತದೆ. ಆದರೆ ಮುಸ್ಲಿಂ ಜನಾಂಗದಲ್ಲಿ ಉಪವಾಸದ ಆಚರಣೆಯು ವಿಭಿನ್ನವಾಗಿರುತ್ತದೆ. ರಮ್ ಜಾನ್ ಉಪವಾಸದ ಆಚರಣೆ ಕೇವಲ ಆಹಾರಗಳಿಂದ ದೂರವಿರುವುದಲ್ಲದೆ ತಮ್ಮ ಜೀವಮಾನದ ಅವಧಿಯಲ್ಲಿ ಪ್ರತಿ ಮಾನವನು ಎದುರಿಸಬೇಕಾದ ಪಿಡುಗುಗಳು ಮತ್ತು ಅನಿಷ್ಟಗಳಿಂದ ದೂರವಿರಬೇಕೆಂಬುದಾಗಿದೆ ಅದಕ್ಕಾಗಿ ಅನ್ನಪಾನೀಯಗಳಿಂದ ದೂರವಿದ್ದು ಉಪವಾಸ ಆಚರಿಸುವ ಜೊತೆಗೆ ಬಾಯಿ ಕಿವಿ ಮತ್ತು ಕೈ ಕಾಲುಗಳ ಉಪವಾಸವೂ ಆಚರಿಸಬೇಕು ಎಂದು ಪ್ರವಾದಿ ಮೊಹಮ್ಮದ್(ಸ) ಹೇಳಿದ್ದಾರೆ ಮಾನವ ತನ್ನ ಜೀವಮಾನದಲ್ಲಿ ಮತ್ತು ವಿಶೇಷವಾಗಿ ರಮಜಾನಿನ ಉಪವಾಸ ಆಚರಣೆಯ ಸಂದರ್ಭದಲ್ಲಿ ಕಣ್ಣಿನಿಂದ ಕೆಟ್ಟದ್ದನ್ನು ನೋಡಬಾರದು, ಬಾಯಿಂದ ಕೆಟ್ಟದ್ದನ್ನು ಆಡಬಾರದು ಕಿವಿ ಯಿಂದ ಕೆಟ್ಟದ್ದನ್ನು ಆಲಿಸಬಾರದು, ಕೈಕಾಲು ಗಳಿಂದ ಯಾವುದೇ ಕೆಟ್ಟದ್ದನ್ನು ಮಾಡಬಾರದು ಜೊತೆಗೆ ತಮ್ಮ ಜೀವಮಾನದ ಅವಧಿಯಲ್ಲಿ ಪ್ರತಿ ಮಾನವನು ಎದುರಿಸಬೇಕಾದ ಪಿಡುಗುಗಳು ಮತ್ತು ಅನಿಷ್ಟಗಳಿಂದ ದೂರವಿರಬೇಕೆಂಬ ವಿಶ್ವಾಸ ತನ್ನಲ್ಲಿ ಮೂಡಿಸಬೇಕು ಇದುವೇ ನಿಜವಾದ ಉಪವಾಸ.

ರಮಜಾನ್ ಉಪವಾಸ ಒಂದು ತಿಂಗಳಕಾಲ ಇರುತ್ತದೆ ಇದು ಇಸ್ಲಾಮಿಕ್ ಕ್ಯಾಲೆಂಡರ್ ನ ಒಂಬತ್ತನೇ ತಿಂಗಳಾಗಿದ್ದು ಈ ಸಮಯದಲ್ಲಿ ಮನುಷ್ಯನು ಎಲ್ಲಾ ರೀತಿಗಳ ದುರಭ್ಯಾಸಗಳು, ಲೈಂಗಿಕ ಚಟುವಟಿಕೆಗಳಿಂದ ದೂರವಿದ್ದು ತನ್ನ ಜೀವನದಲ್ಲಿ ಶೋಚನೀಯ ಪರಿಸ್ಥಿತಿಯು ಉಂಟಾಗಬಹುದನ್ನು ತಡೆಯುವುದು. ರಮಜಾನ್ ಸಮಯದಲ್ಲಿ ದೇವರಮೇಲೆ ತೀವ್ರ ಪ್ರೀತಿ ಭಯ ಭಕ್ತಿಯಿಟ್ಟು ಉಪವಾಸವನ್ನು ಆಚರಿಸಬೇಕು

ಉಪವಾಸ ಆಚರಣೆ ಮಾಡುವ ಮುಖ್ಯ ಉದ್ದೇಶ: ಮನುಷ್ಯರಲ್ಲಿ ಅಲ್ಲಾಹನ ತಕ್ವಾ (ಭಯಭಕ್ತಿ) ಉಂಟಾಗಬೇಕಂಬುದಾಗಿದೆ. ಜೊತೆಗೆ ಕುರಾನ್ ಅವತೀರ್ಣವಾದುದರಿಂದ ಅಲ್ಲಾಹನಿಗೆ ವಿಧೇಯರಾಗಿ ಪ್ರವಾದಿ ಚರ್ಚೆಗೆ ಅನುಗುಣವಾಗಿ ಅಲ್ಲಾಹ್ ಮತ್ತು ಪ್ರವಾದಿಗಳಿಗೆ ಕೃತಜ್ಞತೆ ಗಳನ್ನು ಸಲ್ಲಿಸಲಿಕ್ಕಾಗಿ ಉಪವಾಸ ಮಾಡಬೇಕು ಮತ್ತು ಉಪವಾಸ ವೃತ ಆಚರಿಸುವ ಮೂಲಕ ತುತ್ತು ಅನ್ನ ಸಿಗದೇ ಇರುವ ಬಡವರ ದೀನದಲಿತರ ಹಸಿವಿನ ಸಂಕಷ್ಟ ಏನೆಂಬುದು ಅರಿಯಬೇಕೆಂದು ತಿಳಿದು ಬಂದಿದೆ. ರಮಜಾನ್ ಸಮಯದಲ್ಲಿ ಮುಂಜಾನೆ ಸೂರ್ಯೋದಯದ ನಂತರದಿಂದ ಸೂರ್ಯಾಸ್ತಮವಾಗುವವರೆಗೆ ಉಪವಾಸ ಮಾಡಬೇಕು. ತದನಂತರ ದೇವರಲ್ಲಿ ಪ್ರಾರ್ಥನೆ ಮಾಡಿದ ಮೇಲೆಯೇ ಅಂದಿನ ದಿನದ ಆಹಾರದ ಮೊದಲ ತುತ್ತನ್ನು ತಿನ್ನಬೇಕು. ಸೂರ್ಯೋದಯದ ಮುಂಚೆ ರಾತ್ರಿಯ ಕೊನೇ ಘಳಿಗೆಯಲ್ಲಿ ಎದ್ದು ಬೆಳಗಿನ ನಮಾಜ್ ಗೆ ಅಜಾನ್ ಆಗುವ ಮುಂಚೆ ದೇವರು ಕೊಟ್ಟ ಅಹಾರವನ್ನು ಸೇವಿಸಿ ರೊಜಾ ಪ್ರಾರಂಭ ಮಾಡಲಾಗುತ್ತದೆ ಈ ಕ್ರಿಯೆ ಗೆ ಸಹೆರಿ ಎಂದು ಹೇಳಲಾಗುತ್ತದೆ ಸಂಜೆ ಸೂರ್ಯಾಸ್ತದ ತಕ್ಷಣ ಅಲ್ಲಾಹನ ನಾಮವನ್ನು ಜಪಿಸಿ ಖರ್ಜೂರ ಅಥವಾ ಇತರೇ ಅಹಾರವನ್ನು ಸೇವಿಸುವ ಮೂಲಕ ರೊಜಾ ಬಿಡಲಾಗುತ್ತದೆ ಇದಕ್ಕೆ ಇಫ್ತಾರ್ ಎಂದು ಕರೆಯಲಾಗುತ್ತದೆ.

ರಮಜಾನ್ ಉಪವಾಸದ ಪ್ರಾಮುಖ್ಯತೆಗೆ ಹಲವಾರು ಕಾರಣಗಳಿವೆ. ಆ ಪ್ರಾಮುಖ್ಯತೆಗೆ ಕಾರಣಗಳೇನೆಂದು ನೋಡೋಣ ಬನ್ನಿ:

ಪವಿತ್ರ ಖುರಾನ್: ಪ್ರವಾದಿ ಮೊಹಮ್ಮದ್ ಅವನಿಗೆ ರಂಜಾನ್ ಮಾಸದಲ್ಲಿ ಪವಿತ್ರ ಖುರಾನ್ ಗೋಚರವಾಯಿತು. ದೇವರು ಪ್ರವಾದಿ ಮೊಹಮ್ಮದ್ದನನ್ನು ತನ್ನ ಪ್ರತಿನಿಧಿಯೆಂದು ಆಯ್ಕೆಮಾಡಿ ಪವಿತ್ರ ಖುರಾನ್ ಗ್ರಂಥವನ್ನು ಅವತೀರ್ಣಗೊಳಿಸಿದನು.

ಪರಲೋಕದಲ್ಲಿ ಪರಿಪಾಲಕನಾದ ಅಲ್ಲಾಹನ ಮುಂದೆ ಜೀವಮಾನದ ಬಗ್ಗೆ ಉತ್ತರಿಸಲು ನಿಲ್ಲುವ ಪರಿಸ್ಥಿತಿಯನ್ನರಿತು ಭಯಪಟ್ಟು ತನ್ನ ಮನಚೇಷ್ಟೆಗಳಿಂದ ದೂರವಿದ್ದು ಬದುಕುತ್ತಾನೆ ಅವನಿಗೆ ಸ್ವರ್ಗ ಲಭಿಸುತ್ತದೆ.

ರಮಜಾನ್ ಮಾಸದ ಕೊನೆಯ ಹತ್ತು ದಿನಗಳ ಪೈಕಿ 21,23,25,27,29ನೇ ರಾತ್ರಿ ಗಳಲ್ಲಿ ಒಂದು ರಾತ್ರಿ ಶ್ರೇಷ್ಠ ರಾತ್ರಿ ಅಡಗಿದೆ ಆ ರಾತ್ರಿ ಯನ್ನು ಲಾಯಿಲತುಲ್ ಕದರ್ ( ಗೌರವದೊಂದಿಗೆ ಶಕ್ತಿ ಮತ್ತು ಅದೃಷ್ಟ ದ ರಾತ್ರಿ) ಎಂದು ಹೇಳಲಾಗುತ್ತದೆ ಈ ರಾತ್ರಿ ಯಲ್ಲಿ ದೇವಚರರು ಭೂಲೋಕಕ್ಕೆ ಬರುತ್ತಾರೆ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಅಪಾರ ಪ್ರಮಾಣದ ಅನುಗ್ರಹ ಗಳನ್ನು ಜನರಿಗೆ ಹಂಚುತ್ತಾ ಎಂದು ಕುರಾನಿನ ವಾದ ಈ ಕಾರಣದಿಂದ ಜನರು ರಮಜಾನ್ ಸಮಯದಲ್ಲಿ ಉಪವಾಸವನ್ನು ಆಚರಿಸಿ ಎಲ್ಲಾ ದುಷ್ಟ ಕೃತ್ಯಗಳಿಂದ ದೂರವಿರುತ್ತಾರೆ.

ಉಪವಾಸ ಮಾಡುವುದಕ್ಕೆ ಮುಖ್ಯ ವಾದ(ತರ್ಕ): 

ಪ್ರತಿ ಧರ್ಮದಲ್ಲಿಯೂ ಒಂದು ರೀತಿಯ ಪ್ರಾರಂಪರಿಕ ವಿನೋದಗಳನ್ನು ತ್ಯಜಿಸಿ ದೇವರ ಕೃಪೆಯನ್ನು ಪಡೆಯುವುದಕ್ಕೆ ಉಪವಾಸದ ಆಚರಣೆ ಒಂದು ವಿಧಾನವಾಗಿದೆ. ಒಬ್ಬ ಸಾಧಾರಣ ಮನುಷ್ಯನು ಸದಾ ತನ್ನ ಲೌಕಿಕ ಕರ್ತವ್ಯಗಳ ಮಧ್ಯೆ ಕಟ್ಟಿಹಾಕಿಕೊಂಡು, ದೇವರ ಬಗ್ಗೆ ಯೋಚನೆ ಮಾಡಲು ಸಮಯವೇ ಇರುವುದಿಲ್ಲ. ಉಪವಾಸವು ಒಂದು ರೀತಿಯ ತಪಸ್ಸಿನಂತೆ ಆಹಾರವನ್ನು ತ್ಯಜಿಸಿ ದೇವರಲ್ಲಿ ಸಂಪೂರ್ಣವಾಗಿ ಗಮನವನ್ನು ಕೇಂದ್ರೀಕೃತಮಾಡುವುದು. ಹಗಲಿನಲ್ಲಿ ಉಪವಾಸ ಮಾಡುವವನು ದೇವರಲ್ಲಿ ಪ್ರಾರ್ಥನೆ ಮಾಡುತ್ತ ಸಂಪೂರ್ಣವಾಗಿ ಮುಳುಗಿಹೋಗಿದ್ದರೆ ಪ್ರಪಂಚದಲ್ಲಿ ಇತರರಿಗೆ ಒಂದು ಸತ್ತ ಮನುಷ್ಯನಂತೆ ಸಂಕೇತಿಸುತ್ತದೆ. ಹಾಗೆಯೇ, ರಾತ್ರಿ ವೇಳೆ ಆಹಾರ ತೆಗೆದುಕೊಳ್ಳುವುದು ತನ್ನ ಜೀವಕ್ಕೆ ಆಧಾರದ ಸಂಕೇತವಾಗಿರುವುದು ಮತ್ತು ಕಾಣುವ ಪ್ರಪಂಚದಿಂದ ದೂರವಿರುವುದು. ಹೀಗೆ ಮಾಡುವುದರಿಂದ ಆಂತರಿಕ ಆಧ್ಯಾತ್ಮಿಕ ಪ್ರಪಂಚದ ಪುಷ್ಟಿಯನ್ನು ಸೆಳೆಯಬಹುದಾಗಿದೆಸೆಳೆಯಬಹುದಾಗಿದೆ.

ಕಾರಣ ರಮ್ಜಾನ್ ತಿಂಗಳ ಉಪವಾಸ ವೃತಾಚರಣೆ ಎಲ್ಲರೂ ಮಾಡಿ ತಮ್ಮ ಆತ್ಮ ಶುದ್ಧಿಗಾಗಿ ಪ್ರಯತ್ನಿಸೊಣ ದೇವರು ಎಲ್ಲರಿಗೂ ಶಕ್ತಿ ನೀಡಲಿ ಆತನನ್ನು

 

ಲೇಖಕರು :ಮೌಲಾನ ಶೇಕ್ ಫರೀದ್ ಉಮರಿ

ಅಧ್ಯಕ್ಷರು ಇಖ್ರಾ ಫೌಂಡೇಶನ್ ಮಾನವಿ.

LEAVE A REPLY

Please enter your comment!
Please enter your name here