ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ, ನಿರಂತರ ಪರಿಶ್ರಮ ಇದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ; ಎಚ್.ಶರ್ಪುದ್ದೀನ್ ಪೋತ್ನಾಳ

ಬಸವ ಐಟಿಐ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

0
187

ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಅಧ್ಯಯನದಲ್ಲಿ ಆಸಕ್ತಿ, ಪರಿಶ್ರಮ ಅವಶ್ಯ

ಮಾನ್ವಿ: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ, ನಿರಂತರ ಪರಿಶ್ರಮ ಇದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದು ಜ್ಞಾನಭಾರತಿ ವಿದ್ಯಾಮಂದಿರದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ ಹೇಳಿದರು.
ಮಂಗಳವಾರ ಪಟ್ಟಣದ ಪ್ರಗತಿ ಪಿಯು ಕಾಲೇಜು ಹಾಗೂ ಬಸವ ಐಟಿಐ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಶ್ರೀಲೇಖಾ (ಶೇ94) ಮತ್ತು ಸಹನಾ(ಶೇ93) ಅವರಿಗೆ ಜ್ಞಾನಭಾರತಿ ವಿದ್ಯಾಮಂದಿರ ಪ್ರಾಯೋಜಿತ ಬೆಳ್ಳಿ ಪದಕ ಹಾಗೂ ಪುಸ್ತಕ ಬಹುಮಾನ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಬಸವರಡ್ಡಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಬಸವರಾಜ ಭೋಗಾವತಿ, ಉಪನ್ಯಾಸಕರಾದ ಸುಮಾ ಟಿ.ಹೊಸಮನಿ, ರವಿಶರ್ಮಾ ಜಾನೇಕಲ್, ಶಿವಶಂಕರ ಹಿರೇಕೊಟ್ನೇಕಲ್, ಸುರೇಖಾ ಕರಡಿಗುಡ್ಡ, ಮಹಿಬೂಬ ಮದ್ಲಾಪುರ, ವೀರಭದ್ರಯ್ಯ ಸ್ವಾಮಿ ಉಟಕನೂರು, ಪ್ರಶಾಂತಿ ಹಾಗೂ ದೀಪಾ ಇದ್ದರು.

LEAVE A REPLY

Please enter your comment!
Please enter your name here