*ಅದರಲ್ಲೇ ನಿಮ್ಮ ಒಳಿತು ಅಡಗಿರಬಹುದು…*

0
248

*ಅದರಲ್ಲೇ ನಿಮ್ಮ ಒಳಿತು ಅಡಗಿರಬಹುದು…*
********************************************
ನಿಮ್ಮ ಪತ್ನಿಯಂದಿರು ಏನಾದರೊಂದು ಕಾರಣಕ್ಕೆ ನಿಮಗೆ ಇಷ್ಟವಾಗದೇ ಹೋದರೂ ನೀವು ಅವರನ್ನು ಸಹಿಸುವುದನ್ನು ಕಲಿಯಬೇಕು, ಅವರೊಂದಿಗೆ ಸದ್ವರ್ತನೆ ತೋರುತ್ತಿರಬೇಕು, ನಿಮ್ಮ ಮೇಲಿರುವ ಅವರ ಹಕ್ಕುಗಳನ್ನು ನೀಡುವುದರಲ್ಲಿ ಆಲಸ್ಯ ತೋರಬಾರದು… ಅವರಿಗೆ ಯಾವುದೇ ರೀತಿಯ ಅನ್ಯಾಯ ಮಾಡಬಾರದು… ಅವರು ನಿಮಗೆ ಇಷ್ಟವಾಗದಿರಲು ಏನಾದರೂ ಒಂದು ಕಾರಣವಿರಬಹುದು…ಆದರೆ ಅಲ್ಲಾಹನು ಮುಂದೆ ಅದನ್ನೇ ನಿಮಗೆ ಒಳಿತಾಗಿ ಮಾಡಬಹುದು…… ನಿಮಗೆ ಇಷ್ಟವಾಗದ ಆ ಒಂದು ಕಾರಣವನ್ನು ಸಹಿಸಿ ಮತ್ತು ತಕ್ಷಣದ ತನ್ನ ಉದ್ವೇಗವನ್ನು ನಿಯಂತ್ರಿಸಿ ಬಾಳ ಯಾತ್ರೆಯಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಮುಂದೆ ಸಾಗಿದರೆ ಆಕೆಯ ವತಿಯಿಂದ ನಿಮಗೆ ಇಷ್ಟವಾಗುವ ಅನೇಕ ಕಾರಣಗಳು ನಿಮ್ಮ ಕಣ್ಣಿಗೆ ಗೋಚರವಾಗಬಹುದು… ಅದು ನಿಮ್ಮ ಸಹನೆಯ ಅತ್ಯುತ್ತಮ ಫಲವಾಗಿರಬಹುದು.. ನಿಮ್ಮ ಮನಸ್ಸಿನ ನೆಮ್ಮದಿಗೆ ಕಾರಣವಾಗಿರಬಹುದು.. ಆಕೆಯ ಉದರದಿಂದ ನಿಮಗೆ ಹುಟ್ಟುವ ನಿಮ್ಮ ಸಂತಾನ ನಿಮ್ಮ ಸಂತೃಪ್ತಿ ಮತ್ತು ಸಮೃದ್ಧಿಗೆ ಹೇತುವಾಗಬಹುದು.. ನಿಮ್ಮ ಕಣ್ಣುಗಳನ್ನು ತಣಿಸಬಹುದು
ಇದು ವೈವಾಹಿಕ ಜೀವನಕ್ಕೆ ಮಾತ್ರ ಸಂಬಂಧಿಸಿಲ್ಲ.. ಬದುಕಿನಲ್ಲಿ ಯಾವುದೇ ಒಂದು ವಸ್ತು ಅಥವಾ ಸಂಗತಿ ನಿಮಗೆ ಇಷ್ಟವಾಗದೇ ಹೋಗಬಹುದು ಆದರೆ ನಿಮ್ಮ ಒಳಿತು ಅದರಲ್ಲೇ ಅಡಗಿರಬಹುದು… ಒಂದು ವಸ್ತುವನ್ನು ನೀವು ತುಂಬಾ ಪ್ರೀತಿಸುತ್ತಿರಬಹುದು ಆದರೆ ವಾಸ್ತವದಲ್ಲಿ ಅದು ನಿಮ್ಮ ಪಾಲಿಗೆ ಕೇಡಾಗಿರಲೂ ಬಹುದು.. ಇಷ್ಟ ಮತ್ತು ಅನಿಷ್ಟಗಳ ಸಾಂದರ್ಭಿಕ ತುಲನೆ ಅನೇಕ ಸಲ ತಪ್ಪಾಗಿರುತ್ತದೆ

(ಅಲ್ ಕುರ್’ಆನಿನ ಅಧ್ಯಾಯ 4 ವಚನ 19 ರ ಅರ್ಥವನರಸಿ)

~~ ಈಜಾಝುದ್ದೀನ್ ಉಮರಿ

LEAVE A REPLY

Please enter your comment!
Please enter your name here