ನಾಡು,ನೆಲ,ಜಲ,ಭಾಷೆಯ ರಕ್ಷಣೆಗಾಗಿ ನಾವೆಲ್ಲರು ಕಂಕಣ ಬದ್ದರಾಗೊಣ: ರಾಜಾ ವೆಂಕಟಪ್ಪ ನಾಯಕ

ಮಾನ್ವಿ ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ೬೬ನೇ ಕರ್ನಾಟಕ ರಾಜೋತ್ಸವ ಅಂಗವಾಗಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಪೂಜೆ ಸಲ್ಲಿಸಿದರು

0
98

ನಾಡು,ನೆಲ,ಜಲ,ಭಾಷೆಯ ರಕ್ಷಣೆಗಾಗಿ ನಾವೆಲ್ಲರು ಕಂಕಣ ಬದ್ದರಾಗೊಣ:
ರಾಜಾ ವೆಂಕಟಪ್ಪ ನಾಯಕ
ಮಾನ್ವಿ: ನಾಡು,ನೆಲ,ಜಲ,ಭಾಷೆಯ ರಕ್ಷಣೆಗಾಗಿ ನಾವೆಲ್ಲರು ಕಂಕಣ ಬದ್ದರಾಗೊಣ ತಾಲ್ಲೂಕಿನಲ್ಲಿ ಕನ್ನಡ ಪರ ಚಟುವಟಿಕೆಗಳಿಗಾಗಿ ಅವಶ್ಯಕವಾಗಿರುವ ಕನ್ನಡ ಭವನಕ್ಕೆ ೧೦ ಲಕ್ಷ ಅನುದಾನವನ್ನು ನೀಡಲಾಗುವುದು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು
ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ೬೬ನೇ ಕರ್ನಾಟಕ ರಾಜೋತ್ಸವ ಅಂಗವಾಗಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷೆಯಾಗಿದ್ದು ಕನ್ನಡ ಸಾಹಿತ್ಯ ಲೇಖಕರಿಗೆ ೮ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ ಜಿಲ್ಲೆಯ ಸಾಹಿತಿ ಡಾ.ಮಂಗಳಮೂರ್ತಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ೧೦ಜನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ ಎಂದು ತಿಳಿಸಿದರು
೬೬ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಹಸೀಲ್ದಾರ್ ಅಬ್ದುಲ್ ವಾಹಿದ್ ರಾಷ್ಟçಧ್ವಜರೋಹಣವನ್ನು ನೆರವೇರಿಸಿದರು
ಕಾರ್ಯಕ್ರಮದಲ್ಲಿ ತಾ.ಕ.ಸಾ.ಪ. ಅಧ್ಯಕ್ಷ ಮಹಮ್ಮದ್ ಮುಜೀಬ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಾಜಾ ರಾಮಚಂದ್ರನಾಯಕ,ಕೇತ್ರಶಿಕ್ಷಣಾಧಿಕಾರಿ ವೆಂಕಟೇಶಗುಡಿಹಾಳ್,ಪುರಸಭೆ ಮುಖ್ಯಧಿಕಾರಿ ಜಗದೀಶ ಭಂಡಾರಿ,ತಾ.ಆರೋಗ್ಯಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ,ಪಿ.ಐ.,ಮಹದೇವಪ್ಪ ಪಂಚಮುಖಿ,ಅಮರಯ್ಯ ಉಪ್ಪಳಮಠ,ಗುಮ್ಮ ಬಸವರಾಜ, ಶ್ರೀ ಶೈಲಗೌಡ, ಡಿ.ವೀರನಗೌಡ, ಚುಟುಕು ಸಾಹಿತ್ಯ ಪರೀಷತ್ ತಾ.ಅಧ್ಯಕ್ಷ ಸೈಯಾದ್ ತಾಜೂದ್ದಿನ್,ದಲಿತ ಸಾಹಿತ್ಯ ಪರೀಷತ್ ಅಧ್ಯಕ್ಷ ಆರ್.ಕೆ.ಈರಣ್ಣ,ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here