ಭೂ ಒಡೆತನ ಯೋಜನೆ ಅನುಷ್ಠಾನ ದರ ನಿಗಧಿಪಡಿಸಲು ಜಮೀನುದಾರರ ಅಭಿಪ್ರಾಯ ಸಂಗ್ರಹಿಸಿ- ಆರ್.ವೆಂಕಟೇಶ ಕುಮಾರ್

0
261

ರಾಯಚೂರು,ಜ.01- ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅರ್ಹ
ಫಲಾನುಭವಿಗಳನ್ನು ಆಯ್ಕೆ ಮಾಡಿ ಪ್ರತಿ ಎಕರೆಗೆ ದರ ನಿಗಧಿಪಡಿಸುವ ಕುರಿತು ಜಮೀನದಾರರಿಂದ ಅಭಿಪ್ರಾಯ
ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ
ಸೂಚಿಸಿದರು.

ಅವರು 2020 ಜನವರಿ 1ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2018-
19 ಮತ್ತು 2019-20ನೇ ಸಾಲಿನ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಗೆ ಭೂ ಒಡೆತನ ಯೋಜನೆಯ
ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭೂ ಒಡೆತನ ಯೋಜನೆಯಡಿ ಫಲಾನುಭವಿಗಳ ಕುಟುಂಬದ ವಂಶಾವಳಿ ಪ್ರಮಾಣ ಪತ್ರ ಪಡೆಯಬೇಕು,

ಫಲಾನುಭವಿಗಳ ಕುಟುಂಬಸ್ಥರ ಜಮೀನು ಇಲ್ಲದ ಇರುವ ಬಗ್ಗೆ ತಹಶೀಲ್ದಾರ ಅವರಿಂದ ಜಮೀನು ಸವರ್ೇ
ಮಾಡಿಸಿ ವರದಿ ನೀಡಬೇಕೆಂದರು. ಭೂ ಒಡೆತನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೀರಾವರಿ ಭೂಮಿ
1ಎಕರೆ ಅಥವಾ ಒಣ ಬೇಸಾಯದ ಭೂಮಿ(ಖುಷ್ಕಿ) 2 ಎಕರೆ ಜಮೀನು ಖರೀದಿಸಿ ಹಂಚಿಕೆ ಮಾಡಲಾಗುತ್ತದೆ.
ಸರಕಾರ ಮತ್ತು ನಿಗಮದ ನಿಯಮನುಸಾರ ಹಾಗೂ ಮಾರ್ಗಸೂಚಿಗಳನ್ವಯ ಭೂಮಿ ಮಾರಾಟ
ಮಾಡುವವರು ಅಥವಾ ಖರೀದಿಸಲು ಈಗಾಗಲೇ 31 ಅಜರ್ಿಗಳನ್ನು ಸಲ್ಲಿಸಿದ್ದಾರೆ. ಸುಮಾರು 151 ಎಕರೆ
ಭೂಮಿಯನ್ನು ಫಲಾನುಭವಿಗಳಿಗೆ ನೀಡಲಾಗುತ್ತದೆ. ಫಲಾನುಭವಿಗಳಿಗೆ 20 ಗುಂಟೆ ಜಮೀನು ನೀಡಿದರೆ ಅವರು
ಯಾವ ಬೆಳೆಯು ಬೆಳೆಯಲು ಸಾಧ್ಯವಿಲ್ಲ ಆದ್ದರಿಂದ ನೀರಾವರಿಗೆ 1 ಎಕರೆ ಮತು ್ತ ಖುಷ್ಕಿಗೆ 2 ಎಕರೆ
ನೀಡಬೇಕೆಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿಗೆ ಸೂಚಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಪ್ರತಿಯೊಬ್ಬ ಜಮೀನುದಾರರಿಂದ ಜಮೀನು ಖರೀದಿಸುವ ಬಗ್ಗೆ ವಿವಿಧ
ಅಭಿಪ್ರಾಯ ಸಂಗ್ರಹಿಸಿದರು. ಜಿಲ್ಲಾ ಉಪೊನೋಂದಣೆ ಅಧಿಕಾರಿಗಳ ಭೂಮಿಯನ್ನು ಯಾವ ಬೆಲೆಗೆ
ಖರೀದಿಸಬೇಕು ಎನ್ನುವ ವರದಿ ಮೇಲೆ ದರವನ್ನು ಪ್ರತಿ ಎಕರೆಗೆ ಮೂರು ಪಟ್ಟು ಹೆಚ್ಚಿಸಲಾಗುತ್ತದೆ. ಅಂತಿಮವಾಗಿ
ದರ ನಿಗಧಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳ ವಿವೇಚನಿಗೆ ಬಿಡಲಾಯಿತು.

ಈ ಸಭೆಯಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಸಂತೋಷ್, ಲಿಂಗಸೂಗೂರು ಸಹಾಯಕ
ಆಯುಕ್ತ ದಿಲೀಪ್, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here