ಕನಕದಾಸರ ಜಯಂತ್ಯೋತ್ಸವ ಅಂಗವಾಗಿ ಡಿ.೨೬ರಂದು ೫೦೧ ಸಾಮೂಹಿಕ ವಿವಾಹ: ಕೆ.ವಿರೂಪಾಕ್ಷಪ್ಪ

ಡಿ.೨೨ರಂದು ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು.

0
84

ಕನಕದಾಸರ ಜಯಂತ್ಯೋತ್ಸವ ಅಂಗವಾಗಿ ಡಿ.೨೬ರಂದು
೫೦೧ ಸಾಮೂಹಿಕ ವಿವಾಹ: ಕೆ.ವಿರೂಪಾಕ್ಷಪ್ಪ

ಸಿಂಧನೂರು.ನ.೦೧ – ತಾಲ್ಲೂಕು ಕುರುಬರ ಸಂಘದಿAದ ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಡಿ.೨೬ ರಂದು ಕನಕದಾಸ ಕಲ್ಯಾಣ ಮಂಟಪದಲ್ಲಿ ೫೦೧ ಸಾಮೂಹಿಕ ವಿವಾಹ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.
ಅವರು ನಗರದ ತಾಲ್ಲೂಕು ಕುರುಬರ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಕನಕದಾಸರ ಜಯಂತಿ ವಿಜೃಂಭಣೆಯಿAದ ಆಚರಣೆ ಮಾಡಲಾಗುತ್ತಿದ್ದು, ಜಯಂತಿ ಅಂಗವಾಗಿ ಡಿ.೨೬ರಂದು ಸರ್ವ ಜನಾಂಗದ ವಧು-ವರರ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರದ ಅನೇಕ ಮಂತ್ರಿಗಳು, ಕುರುಬ ಸಮಾಜದ ರಾಜಕೀಯ ಮುಖಂಡರು ಅನೇಕರು ಭಾಗವಹಿಸಲಿದ್ದಾರೆ. ಸರ್ಕಾರದ ಷರತ್ತುಗಳ ಅನ್ವಯ ವಿವಾಹ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಡಿ.೧೫ರೊಳಗಾಗಿ ಸ್ಥಳೀಯ ಕುರುಬ ಸಂಘದ ಕಛೇರಿ ಮುಖ್ಯಸ್ಥರಿಗೆ ಹೆಸರು ನೊಂದಾಯಿಸಬೇಕು ಎಂದರು.

ಡಿ.೨೨ರಂದು ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅಂದು ಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಗುವುದು. ನಂತರ ತಾಲ್ಲೂಕು ಕುರುಬರ ಸಂಘ ಹಾಗೂ ನೌಕರರ ಸಂಘದಿAದ ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಎಸ್‌ಎಸ್‌ಎಲ್‌ಸಿ ಪ್ರಥಮ ಶ್ರೇಣಿ ಪಡೆದ ಒಬ್ಬ ವಿದ್ಯಾರ್ಥಿ, ಪಿಯುಸಿ ಹಾಗೂ ಪದವಿ ಪ್ರಥಮ ಶ್ರೇಣಿ ಪಡೆದ ತಲಾ ೩ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಗುರುಗಳಾದ ಶ್ರೀ ನಂಜುAಡಯ್ಯ ಗುರುವಿನ್, ಮಾದಯ್ಯ ಗುರುವಿನ್ ತಾಲ್ಲೂಕು ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಪೂಜಪ್ಪ ಪೂಜಾರಿ, ಕಾರ್ಯಾಧ್ಯಕ್ಷ ವೆಂಕೋಬಣ್ಣ, ಕಾರ್ಯದರ್ಶಿ ಶಂಭಣ್ಣ ಕೆ.ಬಸ್ಸಾಪುರ, ಕನಕ ಯುವ ಸೇನೆಯ ತಾಲ್ಲೂಕು ಅಧ್ಯಕ್ಷ ನಾಗರಾಜ ಬಾದರ್ಲಿ, ಮುಖಂಡರಾದ ಭೀಮಣ್ಣ ಸಂಗಟಿ, ವೆಂಕಟೇಶ ಬಾದರ್ಲಿ, ವೆಂಕಟೇಶ ಸೇರಿದಂತೆ ಅನೇಕರು ಇದ್ದರು.

LEAVE A REPLY

Please enter your comment!
Please enter your name here