ಯುವಜನತೆಯಲ್ಲಿ ಮತದಾರರ ನೋಂದಣಿಗೆ ಜಾಗೃತಿ ಮೂಡಿಸಿ: ಚಂದ್ರಕಾಂತ್ 

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ೨೦೨೩ರ ಮತದಾರರ ಪಟ್ಟಿ ಪರಿಷ್ಕರಣಿಕಾರ್ಯ ಅಂಗವಾಗಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ತಹಸೀಲ್ದಾರ್ ಚಂದ್ರಕಾಂತ್ ಎಲ್.ಡಿ. ಮಾತನಾಡಿದರು

0
128

ಯುವಜನತೆಯಲ್ಲಿ ಮತದಾರರ ನೋಂದಣಿಗೆ ಜಾಗೃತಿ ಮೂಡಿಸಿ: ಚಂದ್ರಕಾಂತ್ 

ಮಾನ್ವಿ: ೧೮ ವರ್ಷ ತುಂಬಿದ ಪ್ರತಿಯೊಬ್ಬರು ಮತದಾನದ ಹಕ್ಕು ಹೊಂದಿದ್ದು ನೂತನ ಮತದಾರರ ನೋಂದಣಿಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿ.೩ಮತ್ತು ೪ರಂದು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಚಂದ್ರಕಾAತ್ ಎಲ್.ಡಿ. ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ೨೦೨೩ರ ಮತದಾರರ ಪಟ್ಟಿ ಪರಿಷ್ಕರಣಿ ಕಾರ್ಯ ಅಂಗವಾಗಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು, ಆನರ್ಹ ಮತದಾರರನ್ನು ತೆಗೆದು ಹಾಕಿ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ರಾಜಕೀಯ ಪಕ್ಷಗಳು ಕೂಡ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮತಗಟ್ಟೆ ಮಟ್ಟದ ಏಜೆಂಟರುಗಳನ್ನು ನೇಮಕ ಮಾಡಲು ಅವಕಾಶ ನೀಡಿರುವುದರಿಂದ ಅಂತಿಮ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಕ್ಷೇತ್ರದ ಎಲ್ಲಾ ರಾಜಕೀಯ ಪಕ್ಷಗಳು ೫೫ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ೨೭೬ ಮತಗಟೆಗಳ ಬೂತ್ ಮಟ್ಟದಲ್ಲಿ ಬಿ.ಎಲ್. ಏಜೆಂಟರುಗಳನ್ನು ನೇಮಕಮಾಡಿ ಅಂತಿಮ ಮತಪಟ್ಟಿಯನ್ನು ಸಿದ್ದಪಡಿಸಲು ಸಹಕಾರ ನೀಡಬೇಕು

ಮಾನ್ವಿ ವಿಧಾನಸಭಾ ಕ್ಷೇತ್ರವು ಮಾನ್ವಿ ಮತ್ತು ಸಿರವಾರ ತಾಲೂಕುಗಳನ್ನು ಒಳಗೊಂಡಿದ್ದು ವಿಧಾನಸಭಾ ಕ್ಷೇತ್ರದಲ್ಲಿ ೧,೦೯,೨೭೧ ಪುರುಷ ಹಾಗೂ ೧,೧೪,೦೬೫ ಮಹಿಳಾ ಮತದಾರರು ೬೩ ತೃತೀಯ ಲಿಂಗಿಗಳು ಸೇರಿ ೨,೨೩,೪೦೧ ಒಟ್ಟು ಮತದಾರರಿದ್ದಾರೆ ನ.೯ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಮಾಡಲಾಗಿದ್ದು ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯ ಕುರಿತು ಡಿ.೮ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.

ಅಂತಿಮ ಮತದಾರರ ಪಟ್ಟಿಯನ್ನು ಜ.೫, ೨೦೨೩ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮಾನ್ವಿ ವಿಧಾನಸಭಾ ಕ್ಷೇತ್ರದ ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಎಸ್ ಪಕ್ಷದಿಂದ ಸೈಯದ್ ತನವೀರ್ ಹಸನ್, ಕಾಂಗ್ರೇಸ್ ಪಕ್ಷದ ವತಿಯಿಂದ ಮಹಾಂತೇಶ ಸ್ವಾಮಿ ರೌಡೂರ್,ಎ.ಎ.ಪಿ ಪಕ್ಷದಿಂದ ಕೆ.ಶರಣೆಗೌಡ, ಬಿಜೆಪಿ ಪಕ್ಷದಿಂದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಗುರುಸಿದ್ದಪ್ಪ ಕಣ್ಣೂರು,ಶರಣಯ್ಯಸ್ವಾಮಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಸಿರವಾರ ತಾಲೂಕು ತಹಸೀಲ್ದಾರ್ ವಿಜಯೇಂದ್ರ ಹುಲಿನಾಯಕ, ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್, ಚುನವಾಣ ಶಿರಸ್ಥೆದರರಾದ ವಿನಾಯಕರಾವ್,ವಿಷಯ ನಿರ್ವಾಹಕರಾದ ಮಂಜುನಾಥ, ಶೇಕ್ಷವಾಲಿ,ಸೇರಿದಂತೆ ಪುರಸಭೆ ಅಧಿಕಾರಿಗಳು,ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು.

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ೨೦೨೩ರ ಮತದಾರರ ಪಟ್ಟಿ ಪರಿಷ್ಕರಣಿಕಾರ್ಯ ಅಂಗವಾಗಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ತಹಸೀಲ್ದಾರ್ ಚಂದ್ರಕಾಂತ್ ಎಲ್.ಡಿ. ಮಾತನಾಡಿದರು

LEAVE A REPLY

Please enter your comment!
Please enter your name here