ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ : ಎಚ್.ಕೆ.ಕುಮಾರಸ್ವಾಮಿ

0
150

ಬೆಂಗಳೂರು, ನ.10- ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾದ ಮತಗಳು ಲಭಿಸಿದ್ದು, ನಮ್ಮ ಪಕ್ಷಕ್ಕಾಗಿರುವ ಹಿನ್ನಡೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು. ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ನಿರೀಕ್ಷಿತ ಮತಗಳು ಲಭಿಸಿಲ್ಲ.

ಉಪಚುನಾವಣೆಯಾಗಿರುವುದರಿಂದ ಕಾರ್ಯಕರ್ತರು ನಿರಾಶರಾಗುವುದು ಬೇಡ. ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುತ್ತೇವೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಪಕ್ಷಕ್ಕಾಗಿರುವ ಹಿನ್ನಡೆ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ತಳಮಟ್ಟದಿಂದ ಪಕ್ಷ ಬಲಗೊಳಿಸುತ್ತೇವೆ ಎಂದರು.

ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ನೀಡಿದ ಭರವಸೆಗಳು ಹಾಗೂ ಘೋಷಣೆಗಳಿಗೆ ಜನರು ಮರುಳಾದಂತೆ ಕಾಣುತ್ತದೆ. ಭಾಗಶಃ ಆಸೆ-ಆಮಿಷಗಳಿಗೂ ಮತದಾರರು ಒಳಗಾದಂತೆ ಕಂಡುಬರುತ್ತದೆ. ಶಿರಾ ಕ್ಷೇತ್ರದಲ್ಲಿ ಮದಲೂರು ಕೆರೆಗೆ ನೀರು ತುಂಬಿಸುವ ಭರವಸೆಯನ್ನು ಚುನಾವಣೆ ಸಮಯದಲ್ಲಿ ನೀಡಲಾಗಿತ್ತು.

ಅಲ್ಲದೆ, ಬೇರೆ ಬೇರೆ ರೀತಿಯ ಘೋಷಣೆ ಮಾಡಲಾಗಿತ್ತು. ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಪ್ರತಿಸ್ಪರ್ಧಿಯನ್ನು ನೀಡಿದ್ದಾರೆ. ಆದರೆ, ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿಗೆ ಕಡಿಮೆ ಮತಗಳು ಬಂದಿವೆ. ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ಚುನಾವಣಾ ಪೂರ್ವದಲ್ಲಿ ಬಿಂಬಿಸಿದ್ದರಿಂದ ಈ ರೀತಿ ಆಗಿರಬಹುದು. ಒಟ್ಟಾರೆ ಉಪಚುನಾವಣೆಯಲ್ಲಿ ಮತದಾರರು ಜೆಡಿಎಸ್‍ಅನ್ನು ಕೈ ಬಿಟ್ಟಿದ್ದಾರೆ. ಇದೊಂದು ಪಾಠವೆಂದು ಪರಿಗಣಿಸಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ ಎಂದು ಹೇಳಿದರು

LEAVE A REPLY

Please enter your comment!
Please enter your name here