ಕಲ್ಯಾಣ ಕರ್ನಾಟಕದ ಅತಿವೃಷ್ಟಿ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ

0
12

ಕಲಬುರಗಿ. ಅ.24: ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಅ. 25 ಮತ್ತು 26ರಂದು ಭೇಟಿ ನೀಡಲಿದ್ದಾರೆ ಎಂದು ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸಿದ್ಧರಾಮಯ್ಯ ಅವರು 25ರಂದು ಬೆಂಗಳೂರಿನಿಂದ ನಗರಕ್ಕೆ 9-45ಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವರು. ನಂತರ ರಸ್ತೆ ಮೂಲಕ ಮುಡಬಿ (ವ್ಹಾಯಾ ಕಮಲಾಪೂರ್), ಕಲಕೋರಾ, ಚಿಕನಾಗಾಂವ್, ಮುಡಬಿ ಮುಂತಾದ ಪ್ರವಾಹ ಪೀಡಿತ ಸ್ಥಳಗಳನ್ನು ವೀಕ್ಷಿಸುವರು.
ಮಧ್ಯಾಹ್ನ 12-30ಕ್ಕೆ ಬಸವಕಲ್ಯಾಣಕ್ಕೆ ಭೇಟಿ ನೀಡುವ ಸಿದ್ಧರಾಮಯ್ಯ ಅವರು, ಇತ್ತೀಚೆಗೆ ನಿಧನರಾದ ಶಾಸಕ ದಿ. ಬಿ. ನಾರಾಯಣರಾವ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿ ಮಾಡುವರು. ಸಂಜೆ 4 ಗಂಟೆಗೆ ಹುಮ್ನಾಬಾದ್ ಮತಕ್ಷೇತ್ರದ ಹುಡಗಿ, ತಾಳಮಡಗಿ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಗದಲ್‍ಕ್ಕೆ ಭೇಟಿ ನೀಡಿ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ಅಕ್ಟೋಬರ್ 26ರಂದು ಬೆಳಿಗ್ಗೆ 9-30 ಗಂಟೆಗೆ ಸುದ್ದಿಗೋಷ್ಠಿ ನಡೆಸುವ ಸಿದ್ಧರಾಮಯ್ಯ ಅವರು ನಂತರ ರಸ್ತೆ ಮೂಲಕ ಅಫಜಲಪೂರ್ ಕ್ಷೇತ್ರದ ಭೀಮಾ ನದಿ ಪ್ರವಾಹದ ಸ್ಥಳಗಳಿಗೆ ಭೇಟಿ ನೀಡುವರು. ಅಪರಾಹ್ನ 12ಕ್ಕೆ ಜೇವರ್ಗಿ, 2-30ಕ್ಕೆ ಶಹಾಪೂರ್ ವಿಧಾನಸಭಾ ಮತಕ್ಷೇತ್ರಗಳ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವರು. ಸಂಜೆ ಐದು ಗಂಟೆಗೆ ಯಾದಗಿರಿ ರಸ್ತೆ ಮೂಲಕ ಹೈದ್ರಾಬಾದ್‍ಗೆ ತೆರಳಿ, ವಿಮಾನದ ಮೂಲಕ ಬೆಂಗಳೂರಿಗೆ ನಿರ್ಗಮಿಸುವ ಕಾರ್ಯಕ್ರಮವಿದೆ.

LEAVE A REPLY

Please enter your comment!
Please enter your name here