ವಕೀಲರ ರಕ್ಷಣೆ ಕಾನೂನನ್ನು ಜಾರಿಗೆ ತರಬೇಕೆಂದು ಮಾನವಿ ವಕೀಲರ ಸಂಘದಿಂದ ಒತ್ತಾಯ

ವಕೀಲರುಗಳು ಅನೇಕ ಪ್ರಜೆಗಳ ಮಾನ, ಆಸ್ತಿ, ಜೀವಗಳನ್ನು ರಕ್ಷಣೆಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಲ್ಲಿ ನಾವು ವಿಫಲರಾಗಿದ್ದೇವೆ.

0
150

ಮಾನವಿ.ಫೆ,೨: ವಿಜಯನಗರ ಜಿಲ್ಲೆಯ ಹೊಸಪೇಟೆಯ ವಕೀಲರಾದ ಶ್ರೀ ತಾರಿಹಳ್ಳಿ ವೆಂಕಟೇಶ ಇವರ ಬರ್ಬರ ಹತ್ಯೆಯನ್ನು ಖಂಡಿಸಿ ಮತ್ತು ಕರ್ನಾಟಕದಲ್ಲಿ ವಕೀಲರ ರಕ್ಷಣೆಗೆ ಕಾನೂನು ಜಾರಿಗೆ ತರುಬೇಕೆಂದು ಮಾನವಿ ವಕೀಲರ ಸಂಘದಿಂದ ಮಾನ್ಯ ತಹಸೀಲ್ದಾರ್ ರವರ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಪತ್ರ ಕೊಡಲಾಯಿತು.

ದಿನಾಂಕ 27-02-2021 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ವಕೀಲರಾದ ಶ್ರೀ ತಾರಿಹಳ್ಳಿ ವೆಂಕಟೇಶ ಎಂಬುವವರನ್ನು ಹಾಡುಹಗಲೇ ಹತ್ಯೆಯಾಗಿರುವ ವಿಷಯ ಎಲ್ಲರಿಗೂ ತಿಳಿದ ವಿಷಯವಾಗಿದೆ.

ಅದರಂತೆ ಈ ಹಿಂದೆಯೂ ಸಹ ಅನೇಕ ವಕೀಲರಗಳನ್ನು ಹತ್ಯೆಮಾಡಿದ್ದಲ್ಲದೆ, ವಕೀಲರುಗಳ ಮೇಲೆ ಹಲ್ಲೆ ನಡೆಯುತ್ತಲೇ ಇವೆ. ವಕೀಲರುಗಳು ಅನೇಕ ಪ್ರಜೆಗಳ ಮಾನ, ಆಸ್ತಿ, ಜೀವಗಳನ್ನು ರಕ್ಷಣೆಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಲ್ಲಿ ನಾವು ವಿಫಲರಾಗಿದ್ದೇವೆ. ವಕೀಲರಿಗೆ ಯಾವುದೇ ಇಲ್ಲದಂತಾಗಿರುವುದರಿಂದ ತರಹದ ಕಾನೂನು ರಕ್ಷಣೆ ವಿಜಯನಗರ ಜಿಲ್ಲೆಯ ಹೊಸಪೇಟ ನ್ಯಾಯಾಲಯದ ಆವರಣದಲ್ಲಿ ಬರ್ಬರವಾಗಿ ಶ್ರೀ ತಾರಿಹಳ್ಳಿ ವೆಂಕಟೇಶ ಇವರ ಹತ್ಯೆಯಾಗಿರುವುದು ಸಾಕ್ಷಿಯಾಗಿದೆ. ಅದರಂತೆ ದಿನಾಂಕ 17 02-2021 ರಂದು ತೆಲಂಗಾಣ ರಾಜ್ಯದ ವಕೀಲ ದಂಪತಿಗಳಾದ ಶ್ರೀ ವಾಮನರಾವ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪಿ. ವಿ. ನಾಗಮಣಿ ಇವರನ್ನೂ ಸಹ ಕಾರು ನಿಲ್ಲಿಸಿ ನಡುರಸ್ತೆಯಲ್ಲಿ ಬರ್ಬರ ಹತ್ಯೆಯಾಗಿರುವುದು ಇದನ್ನು ಮಾನವಿ ವಕೀಲರ ಸಂಘವು ತೀವ್ರವಾಗಿ ಖಂಡಿಸುತ್ತದೆ.

ಆದ್ದರಿಂದ ಕೂಡಲೇ ತಾವುಗಳು ವಕೀಲರ ರಕ್ಷಣೆ ಕಾನೂನನ್ನು ಜಾರಿಗೆ ತರಬೇಕೆಂದು ಮಾನವಿ ವಕೀಲರ ಸಂಘವು ಒತ್ತಾಯಿಸುತ್ತದೆ.

ಮುಖ್ಯ ಮಂತ್ರಿ ಯವರಿಗೆ ಮನವಿ ಸಲ್ಲಿಸುವುದರ ಜೊತೆಗೆ ಮಾನ್ಯ ಗೃಹಮಂತ್ರಿಗಳು, ಕರ್ನಾಟಕ ಸರಕಾರ, ಬೆಂಗಳೂರು ಹಾಗೂ ಮಾನ್ಯ ಕಾನೂನು ಸಚಿವರು, ಕರ್ನಾಟಕ ಸರಕಾರ, ಬೆಂಗಳೂರು ಇವರಿಬ್ಬರ ಮಾಹಿತಿಗಾಗಿ ಮನವಿ ಪತ್ರದ ಪ್ರತಿ ಸಲ್ಲಿಸಲಾಗಿದೆ ಎಂದು ವಕೀಲ ಸಂಘದ ಕಾರ್ಯದರ್ಶಿ ತಿಳಿಸಿದರು. .

ಈ ಸಂದರ್ಭದಲ್ಲಿ  ಶ್ರೀ ಮಲ್ಲಿಕಾರ್ಜುನ ಪಾಟೀಲ್ ಅಧ್ಯಕ್ಷರು, ಕಾರ್ಯದರ್ಶಿ ರವಿಕುಮಾರ್ ಪಾಟೀಲ್ , ಖಜಾಂಚಿ ಚಂದ್ರಶೇಖರ ಮದ್ಲಾಪೂರ, ಉಪಾಧ್ಯಕ್ಷರಾದ ಯಲ್ಲಪ್ಪ ನಾಯಕ.ಮಾಳಿಂಗರಾಯ. ಹಿರಿಯ ವಕೀಲರಾದ ಎ ಬಿ ಉಪ್ಪಳಮಠ. ಗುಮ್ಮ ಬಸವರಾಜ. ಹನುಮಂತಪ್ಪ ನಾಯಕ ಮುಸ್ಟೂರು. ವೀರನಗೌಡ ಪೋತ್ನಾಳ. ಶ್ಯಾಮಸುಂದರ ನಾಯಕ, ಅಶೋಕ. ದೂಮಣ್ಣ ನಾಯಕ. ಮೌನೇಶ ರಾಠೋಡ. ಸೇರಿದಂತೆ ಸರಿ ಸುಮಾರು ನೂರಕ್ಕೂ ಅಧಿಕ ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here