ರಾಜ್ಯ ಮಟ್ಟಕ್ಕೆ ಸಿಂಧನೂರು ಕ್ರಿಕೆಟ್ ತಂಡ ಆಯ್ಕೆ

0
50

ಸಿಂಧಂನೂರು.ಜ.29: ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ರಾಜ್ಯ ಸರಕಾರಿ ನೌಕರರ ಸಂಘದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿಂಧನೂರು ಸರಕಾರಿ ನೌಕರರ ತಾಲ್ಲೂಕು ಘಟಕದ ಕ್ರಿಕೇಟ್ ತಂಡವು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ ತಿಳಿಸಿದ್ದಾರೆ.

ಬುಧವಾರ ಹೇಳಿಕೆ ನೀಡಿರುವ ಅವರು, ವೆಂಕಟಾಚಲಮ್(ನಾಯಕ), ಸುಮಂತಪ್ರಭು, ಅಜರುದ್ದೀನ, ಎನ್ನಪ್ಪ, ಜಾವೀದ್, ನಾಗರಾಜ, ಮಂಜುನಾಥ, ಉಮೇಶ, ಹರೀಶ್, ಸಂಜೀವ್, ಯೋಗೇಶ ಭಂಡಾರಿ, ಪರಪ್ಪಕರಿಗಾರ, ವೆಂಕಟೇಶ, ಪ್ರಕಾಶ, ಧರ್ಮರಾಜ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಮುಂದಿನ ತಿಂಗಳು ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರಿಕೆಟ್ ತಂಡಕ್ಕೆ ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಚಂದ್ರಶೇಖರ ಹಿರೇಮಠ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here