ಸಿ.ಸಿ ರಸ್ತೆ ಕಾಮಗಾರಿಗಳಿಗೆ ಶಾಸಕರಿಂದ ಭೂಮಿಪೂಜೆ.

0
41

ಸಿರವಾರ:ಜ.28- ಹರವಿ,ಲಕ್ಕಂದಿನ್ನಿ ಹಾಗೂ ಜಂಬಲದಿನ್ನಿ ಗ್ರಾಮಗಳಲ್ಲಿನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಗುದ್ದಲಿ ಪೂಜೆ ನೆರವೇರಿಸುವುದರ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.

ತಾಲೂಕಿನ ಹರವಿ ಗ್ರಾಮದ ಬಸವೇಶ್ವರ ಕ್ಯಾಂಪಿನಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ೫೦ ಲಕ್ಷ ರೂ, ಲಕ್ಕಂದಿನ್ನಿಯಲ್ಲಿ ೨೩ ಲಕ್ಷದ ಸಿಸಿ ರಸ್ತೆ ಹಾಗೂ ಜಂಬಲದಿನ್ನಿಯಲ್ಲಿ ೨೪ ಲಕ್ಷ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೇಲ್ ಬಲ್ಲಟಿಗಿ, ಯುವ ಮುಂಖಡರಾದ ರಾಜಾ ರಾಮಚಂದ್ರ ನಾಯಕ,ವೆಂಕಟ ನರಸಿಂಹ ಗೌಡ ವಕೀಲ,ರಾಜಾಆದರ್ಶ ನಾಯಕ,ಗೋಪಾಲ ನಾಯಕ ಹರವಿ,ನಾಗರಾಜ ಭೋಗವತಿ, ಬಸನಗೌಡ ದಳಪತಿ, ಶಂಕರ್ ಗೌಡ ವಕೀಲ,ಚನ್ನಬಸವ ಪೋಲಿಸ್ ಪಾಟೀಲ, ಯಲ್ಲಪ್ಪ ನಾಯಕ,ಮಾರೆಪ್ಪ ನಾಯಕ, ನಾಗುಬುಸ್ಸಪ್ಪ,ವೆಂಕಟೇಶ ರೆಡ್ಡಿ,ಪೋಮಣ್ಣ ರಾಥೋಡ್, ಉಮಾಪತಿ, ಚನ್ನಬಸವ ನಾಯಕ, ಹನುಮಂತ್ರಾಯ ಪೂಜಾರಿ,ಶ್ರೀದರ ಸ್ವಾಮಿ,ಬಸವರಾಜ ಶೆಟ್ಟಿ,ಖಲೀಲ ಖುರೀಷ,ಶಿವರಾಜ ನಾಯಕ, ಹನುಮಗೌಡ,ಲಕ್ಷ್ಮಣ್ ಯಾದವ್,ಮೌನೇಶ ನಾಯಕ,ಮೌನಪ್ಪ ಕಂಬಾರ,ಮಲಯ್ಯ ಪೂಜಾರಿ,ಶಿವಪ್ಪ ನಾಯಕ, ಹುಸೇನ್ ನಾಯಕ,ಸುಬ್ಬರೆಡ್ಡಿ, ನಾರಾಯಣ ರೆಡ್ಡಿ,ಶ್ರೀನಿವಾಸ ರೆಡ್ಡಿ,ಎಮ್ ಡಿ ಇಸ್ಮಾಯಿಲ್,ಬಸಪ್ಪ ಗೌಡ,ಪಂಪಣ್ಣ ತಾತ, ಶರಣಬಸವ ನಾಯಕ,ಸಂತೋಷ ಕುಮಾರ್,ಮೌಲ ಸಾಬ್,ನಾರಬಂಡಿ ಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here