ತಪ್ಪು ಮಾಡಿದ್ದು ಸಾಬೀತಾದರೆ ಮಂತ್ರಿ ಸ್ಥಾನಕ್ಕೆ ಮಾತ್ರವಲ್ಲ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ; ಸಚಿವ ರಮೇಶ್ ಜಾರಕಿಹೊಳಿ

"ಈ ಕ್ಷಣಕ್ಕೆ ನಾನು ಯಾರ ವಿರುದ್ಧವೂ ಆರೋಪ ಮಾಡುವುದಿಲ್ಲ. ಯಾರ ಹೆಸರನ್ನು ನಾನು ತೆಗೆದುಕೊಳ್ಳುವುದಿಲ್ಲ. ಕಾನೂನು ಕ್ರಮದ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಈ ಬಗ್ಗೆ ಚರ್ಚಿಸುತ್ತಿದ್ದೇನೆ." ರಮೇಶ್‌ ಜಾರಕಿಹೊಳಿ.

0
179

ಬೆಂಗಳೂರು: ನಾನು 20 ವರ್ಷ ರಾಜಕಾರಣದಲ್ಲಿದ್ದೇನೆ. ಇಂಥ ಕೆಲಸಾ ಎಂದೂ ಮಾಡಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಲಿ. ಯಾರು ತಪ್ಪಿಸ್ಥಿತರೆಂದು ಗೊತ್ತಾಗುತ್ತದೆಯೋ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

”ರಾಸಲೀಲೆ ವಿಷಯ ತಿಳಿದು ನಾನೇ ಶಾಕ್‌ನಲ್ಲಿದ್ದೇನೆ. ಅವರು(ಯುವತಿ) ಯಾರು ಅಂತ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ. ಬಳಿಕ ದಿಲ್ಲಿಗೆ ಹೋಗಲಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ರಾಜೀನಾಮೆ ನೀಡುವುದಿಲ್ಲ. ಒಂದೊಮ್ಮೆ ತಪ್ಪು ಮಾಡಿದ್ದು ಸಾಬೀತಾದರೆ ಮಂತ್ರಿ ಸ್ಥಾನಕ್ಕೆ ಮಾತ್ರವಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಮತ್ತು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ,” ಎಂದು ಹೇಳಿದ್ದಾರೆ.

”ಮೈಸೂರಲ್ಲಿ ಚಾಮುಂಡಿ ದರ್ಶನ ಪಡೆದುಕೊಂಡು ಹೊರಗೆ ಬರುವಾಗ ವಿಷಯ ತಿಳಿತು. ಆಗ ನನಗೆ ಶಾಕ್‌ ಆಯಿತು. ಮೈಸೂರಿನಿಂದ ತಲೆಮರೆಸಿಕೊಂಡಿದ್ದಾರೆಂದು ಸುದ್ದಿ ಬರುತ್ತಿತ್ತು. ಆದರೆ, ನಾನು ಎಲ್ಲೂ ಹೋಗಿಲ್ಲ. ಬೆಂಗಳೂರಿನ ನನ್ನ ಮನೆಯಲ್ಲೇ ಇದ್ದೇನೆ,” ಎಂದರು.

”ನಾನು ತಪ್ಪು ಮಾಡಿದ್ದರೆ ಫಾಸಿ(ಗಲ್ಲು) ಶಿಕ್ಷೆ ಕೊಡಲಿ. ನಾನು 20 ವರ್ಷದಲ್ಲಿ ಮಾಡದ್ದನ್ನು ಈಗ ಮಾಡುತ್ತೇನೆಯೇ? ನಾವು ನೇರ ರಾಜಕಾರಣ ಮಾಡಿಕೊಂಡು ಬಂದವರು. ಈ ತರಹ ಯಾವುದೇ ಷಡ್ಯಂತ್ರ ಮಾಡಿ ಗೊತ್ತಿಲ್ಲ ನಮಗೆ” ಎಂದು ಜಾರಕಿಹೊಳಿ ಹೇಳಿದರು.

”ಆ ಯುವತಿ ಯಾರೆಂದೇ ಗೊತ್ತಿಲ್ಲ. ನನ್ನ ಹತ್ತಿರು ಯಾರೂ ಬಂದೂ ಇಲ್ಲ. ಯುವತಿಗೆ ಈ ರೀತಿಯ ಅನ್ಯಾಯ ಮಾಡಿದರೆ ನಾನು ಭೂಮಿಯ ಮೇಲೆ ಇರೋದಕ್ಕೆ ಲಾಯಕ್ಕೇ ಇಲ್ಲ” ಎಂದು ಹೇಳಿದರು.

“ಈ ಕ್ಷಣಕ್ಕೆ ನಾನು ಯಾರ ವಿರುದ್ಧವೂ ಆರೋಪ ಮಾಡುವುದಿಲ್ಲ. ಯಾರ ಹೆಸರನ್ನು ನಾನು ತೆಗೆದುಕೊಳ್ಳುವುದಿಲ್ಲ. ಕಾನೂನು ಕ್ರಮದ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಈ ಬಗ್ಗೆ ಚರ್ಚಿಸುತ್ತಿದ್ದೇನೆ.” ರಮೇಶ್‌ ಜಾರಕಿಹೊಳಿ.

LEAVE A REPLY

Please enter your comment!
Please enter your name here