ಫಾ.ಸತೀಶ್ ಫರ್ನಾಂಡೀಸ್‌ ರವರ ಹೃದಯ ವೈಶಾಲ್ಯತೆಗೆ ಸಂದ ಗೌರವ-ಗೌರವಡಾಕ್ಟರೇಟ್

0
240

ಪೋತ್ನಾಳ್:ಜ.08- ವಂದನೀಯ ಫಾದರ್ ಸತೀಶ್ ಫೇರ್ನಾಂಡಿಸ್‌ರವರು ಮೂಲತ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೇರೆ ತಾಲೂಕಿನ ಗಬ್ಬಳ್ಳಿಯ ಒಂದು ಬಡಕುಟುಂಬದ ಶ್ರೀಮತಿ ಸೆಲಿನಾ ಮತ್ತು ಪಾಸ್ಕಲ್ ಫೇರ್ನಾಂಡಿಸ್ ನವರಿಗೆ 5 ಜನ ಗಂಡು ಮಕ್ಕಳು. 5ನೇ ಮಗನಾಗಿ ಸತೀಶ್ ಫೇರ್ನಾಂಡಿಸ್ 1976ರಲ್ಲಿ ಹುಟ್ಟಿದರು.ಬಾಲ್ಯಶಿಕ್ಷಣ ಮತ್ತು ಧಾರ್ಮಿಕತೆಯ ಬಗ್ಗೆ ತಾಯಿ ಮತ್ತು ಅಣ್ಣನವರಿಂದ ಕಲಿತರು.

ಬಾಲ್ಯದಿಂದಲೂ ಧಾರ್ಮಿಕತೆ ಬಗ್ಗೆ ಒಲವು ಹೊಂದಿದ್ದ ಇವರು 01 ರಿಂದ 07ನೇ ತರಗತಿವರೆಗೆ ಸ್ವಗ್ರಾಮದಲ್ಲಿ ಓದಿ, ಹೈಸ್ಕೂಲ್ ನಂತರ ಪದವಿ ಮುಗಿಸಿ.1999-2002 ರವರೆಗೆ ಮೈಸೂರಿನಲ್ಲಿ ತತ್ವಶಾಸ್ತ್ರ ಅಭ್ಯಾಸ ಮಾಡಿದರು. ಗರಿಷ್ಟ ಅಂಕಗಳೊಂದಿಗೆ ಉನ್ನತ್ತ ಪದವಿ ಪಡೆದರು.ಸರ್ಕಾರಿ ಕೆಲಸ ಬದಲು ಆಧ್ಯಾತ್ಮದ ಕಡೆಗೆ ಆಕರ್ಷಿತರಾಗಿ ವಿಷೇಶವಾಗಿ ಕ್ರೈಸ್ತ ಧರ್ಮದ ಬಗ್ಗೆ ಒಲವು ತೋರಿದರು. ಸತೀಶ್ ಫೇರ್ನಾಂಡಿಸ್‌ರವರು ತಾಯಿಯಿಂದ ಧರ್ಮವನ್ನು ತಿಳಿದುಕೊಂಡರು, ಕ್ರೈಸ್ತ ಧರ್ಮದಲ್ಲಿನ ದಯೆ, ಉಪಕಾರ, ಶಾಂತಿ ಇವರಿಗೆ ಇಷ್ಟವಾದವು. ಪ್ರಾರ್ಥನೆಗೆ ಹೋದಾಗ ತಾವು ಧರ್ಮಧಿಕಾರಿಯಾಗಲು ಅವಿರತ ಶ್ರಮಿಸಿ 2008 ರಲ್ಲಿ ಬೆಂಗಳೂರಿನಲ್ಲಿ ಧರ್ಮಕ್ಕೆ ಸಂಬಂದಿಸಿದ ದೈವ ಶಾಸ್ತ್ರ ಕಲಿತರು.

2001-2005  ರಲ್ಲಿ ತತ್ವಶಾಸ್ತ್ರ, 2005-2008 ಧರ್ಮಶಾಸ್ತ್ರ, 2005ರಲ್ಲಿ ಎಂ.ಎಸ್.ಡಬ್ಲೂ, 2006ರಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ, 2007ರಲ್ಲಿ ಡಿಪ್ಲೋಮ, 2008ರಲ್ಲಿ ಎಲ್.ಎಲ್.ಬಿ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಾಯನ ಮಾಡಿದ್ದಾರೆ. ಕ್ರೈಸ್ತ ಧರ್ಮದ ಉನ್ನತ ಧರ್ಮದರ್ಶಿಗಳು ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹುಟ್ಟೂರೂ ಬಾಸ್ಕಲ್ ನಲ್ಲಿ ಫಾದರ್‌ ಅಂತೋನಿ ಡಿಸೋಜಾರವರಿಂದ ೨೦೦೮ರಲ್ಲಿ ಸನ್ಯಾಸಿ ದೀಕ್ಷೆ ಪಡೆದು ಫಾದರ್ ಸತೀಶ್ ಫೇರ್ನಾಂಡಿಸ್‌ಎಂದು ನಾಮಕರಣಗೊಂಡರು. ನಂತರ ಉಜಿರೆಯಲ್ಲಿ ಯುವರೈತರು, ಯುವಕರಿಗೆ ತರಬೇತಿ ನೀಡುವ ನೂತನ ಜವಾಬ್ದಾರಿಯನ್ನು ನಿರ್ವಹಿಸಿದರು. ಇವರ ಕಾಳಜಿಯನ್ನು ಕಂಡ ಕ್ರೈಸ್ತ ಸನ್ಯಾಸಿಗಳು 20011ರಲ್ಲಿ ರಾಯಚೂರು ಜಿಲ್ಲೆ ಪೋತ್ನಾಳ ಸ್ನೇಹಜ್ಯೋತಿ ಶಾಲೆಯ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿದರು. ನಂತರ ವಿಮುಕ್ತಿ ಚಾರಿಟೇಬಲ್ ಟ್ರಸ್ಟನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.ಅಲ್ಲಿಂದ ಇಲ್ಲಿಯವರೆಗೆ ಪ್ರಾರಂಭವಾದ ಸಮಾಜ ಸೇವೆ ಗ್ರಾಮೀಣ ಮಕ್ಕಳ ಶೈಕ್ಷಣೀಕ ಸಹಾಯ, ವಿಕಲಚೇತನರಿಗೆ ಉಚಿತ ಸಲಕರಣೆ, ಉಚಿತ ಆರೋಗ್ಯ ತಪಾಸಣೆ, ವಯಸ್ಕರ ಶಿಕ್ಷಣ, ಸ್ವ-ಉದ್ಯೋಗ, ಗ್ರಾಮೀಣ ಭಾಗದ ಜನರಿಗೆ ಡಿಜಿಟಲ್ ಆನ್‌ಲೈನ್ ಸೇವೆ, ಪೂರಕ ಪರಿಹಾರ ಭೋದನೆ, ಉಚಿತ ಕೌಶಲ್ಯ ಅಭಿವೃದ್ದಿ ತರಬೇತಿಗಳು, ಉಚಿತ ಬಡಮಕ್ಕಳಿಗೆ ವಸತಿ ವ್ಯವಸ್ಥೆ, ಮಾನವಅಕ್ರಮ ಕಳ್ಳಸಾಗಣಿಕೆ ಕುರಿತು, ನೆರೆಸಂತ್ರಸ್ತರಿಗೆ ಸಹಾಯ,ಇವರು ಮಕ್ಕಳ, ಮಹಿಳೆಯರ, ಸಮುದಾಯದವರ ಮೇಲೆ ಅತಿಯಾದ ಪ್ರೀತಿ ವಿಶ್ವಾಸವನ್ನು ಹೊಂದಿದ್ದು,ಮಧ್ಯ ನಿಷೇಧ ಆಂದೋಲನದಲ್ಲಿ ಭಾಗವಹಿಸಿ ನೊಂದವರ ಬಾಳಿಗೆ ಆಶಾಕಿರಣವಾಗಿ 20 ಜನರಿಗೆ ರಕ್ತದಾನ ಮಾಡುವ ಮೂಲಕ ಮಾನವಿಯತೆ ಮೇರೆದಿದ್ದಾರೆ, ಪ್ರಸ್ತುತ ಇವರು ರಾಯಚೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿದ್ದು ಮುಖ್ಯವಾಗಿ ಪ್ರತಿ ಮಗು ಶಿಕ್ಷಣ ಪಡೆಯಬೇಕು, ಮಕ್ಕಳ ರಕ್ಷಣೆಯಾಗಬೇಕು ಎಂದು ಧ್ಯೇಯವನ್ನಿಟ್ಟು ಕೊಂಡಿರುವ ಇವರ ಸಮಾಜ ಸೇವೆಯನ್ನು ಗುರುತಿಸಿ ಖಾಸಗಿ ವಾಹಿನಿಯಲ್ಲಿ ಪಬ್ಲಿಕ್ ಹಿರೋ ಎನಿಸಿಕೊಂಡು ಇಡೀ ಕರ್ನಾಟಕಕ್ಕೆ ಚಿರಪರಿಚಿತರಾಗಿದ್ದಾರೆ, 8ನೇ ಮಾನ್ವಿ ತಾಲೂಕಾ ಕನ್ನಡ ಸಾಹಿತ್ಯ ಸಮೇಳನದಲ್ಲಿ, ಹಾಗೂ ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮೇಳನದಲ್ಲಿ ಸನ್ಮಾನಿಸಿ ಗೌರವಿಸಿದ್ದು, ಹೈದ್ರಾಬಾದ್ ನಲ್ಲಿ ನಡೆದ 28.7.2019, ರಲ್ಲಿ ಬೆಸ್ಟ ಎನ್,ಜಿ,ಒ.ಅವಾರ್ಡ ದೊರಕಿದೆ. ಇವರ ಸಮಾಜ ಸೇವೆಯನ್ನು ಇನ್ನೂ ಹೆಚ್ಚುವಂತೆ ಮಾಡಿದೆ. ರಾಯಚೂರು ಜಿಲ್ಲೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು ಸಾಹಿತಿಗಳು, ರಾಜಕೀಯ ಗಣ್ಯರು, ಸಮಾಜದ ಹಿತೈಷಿಗಳು, ಶುಭಹಾರೈಸಿದ್ದಾರೆ.

ಇವರುಎಲ್ಲರಿಗೂ ಚಿರಪರಿಚಿತರಾಗಿದ್ದು. ಸಮಾಜಸೇವೆಯಲ್ಲಿ ಪಧಾಧಿಕಾರಿಗಳ ಮುಂದುವರೆಯಲು ಸಾಕಷ್ಟು ಪ್ರೋತ್ಸಹ, ಸಹಾಕಾರ ಸ್ಪೂರ್ತಿನೀಡಿ ತಪ್ಪಿದಲ್ಲಿ ಅದನ್ನು ಖಂಡಿಸುತ್ತಾ ಒಳ್ಳೆಯದಿದ್ದರೆ ಅದಕ್ಕೆ ಸ್ಪೂರ್ತಿಯಾಗಿ ಸಂಸ್ಥೆಯ ಬೇನ್ನೆಲುಬಾಗಿ ನಿಂತಿದ್ದಾರೆ.ಈ ಚಿಕ್ಕವಯಸ್ಸಿನಲ್ಲಿ ಸಾಕಷ್ಟು ಸೇವೆಯನ್ನು ಮಾಡಲು ಆಸೆಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.ಇವರ ಈ ಸಮಾಜಸೇವೆಯನ್ನು ಗುರುತಿಸಿ ದಿನಾಂಕ 05-01-2020.ರಂದು ಕಾಸಿಯಾ ಉದ್ಯೋಗ ಭವನದಲ್ಲಿ ನಡೆದ ಸಮಾರಂಭದಲ್ಲಿ ಇಂಟರ್‌ನ್ಯಾಷನಲ್ ಗ್ಲೋಬಲ್ ಪೀಸ್‌ ಯುನಿರ್ವಸಿಟಿ ಬೆಂಗಳೂರು ಇವರ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು, ಕುಟುಂಬದವರು ಹಾಗೂ ಕಪುಚಿನ್ ಸಭೆಯ ಎಲ್ಲಾ ಗುರುಗಳು ಶುಭಹಾರೈಸಿದ್ದಾರೆ.

 

LEAVE A REPLY

Please enter your comment!
Please enter your name here